Breaking News
Home / Recent Posts / ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Spread the love

 

‘ಸಮಾಜ ಸೇವೆಗೆ ಇಚ್ಛಾಶಕ್ತಿ, ನಿಸ್ವಾರ್ಥ ಇರಬೇಕು’

ಮೂಡಲಗಿ: ‘ಇಚ್ಛಾಶಕ್ತಿ ಮತ್ತು ನಿಸ್ವಾರ್ಥದಿಂದ ಮಾಡುವ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ’ ಎಂದು ಸಾಹಿತಿ ಪ್ರೊ. ಜಯವಂತ ಕಾಡದೇವರ ಹೇಳಿದರು.
ಇಲ್ಲಿಯ ಸಾಯಿ ವಸತಿ ನಿಲಯದ ಆವರಣದಲ್ಲಿ ಜರುಗಿದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು
ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯಿಂದ ದೊರೆಯುವ ಸಂತೋಷಕ್ಕೆ ಬೆಲೆಕಟ್ಟಲಿಕ್ಕಾಗದು ಎಂದರು.
ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಪದಗ್ರಹಣ ನೆರವೇರಿಸಿದ ಜಮಖಂಡಿಯ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಂಜೆಎಫ್ ಲಾಯನ್ ಎಚ್.ಆರ್. ಮಹಾರಡ್ಡಿ ಮಾತನಾಡಿ 210 ದೇಶಗಳಲ್ಲಿ ವ್ಯಾಪಿಸಿರುವ ಲಯನ್ಸ್ ಕ್ಲಬ್‍ಗಳು ಸಮಾಜ ಸೇವೆಯೇ ಮುಖ್ಯ ತಳಹದಿಯಾಗಿದೆ ಎಂದರು.


ಲಯನ್ಸ್ ಕ್ಲಬ್‍ಗಳು ತಮ್ಮ ಸೇವಾ ಕಾರ್ಯಗಳಲ್ಲಿ ವೈದ್ಯಕೀಯ ತಪಾಸಣಾ ಶಿಬಿರ, ಪರಿಸರ ರಕ್ಷಣೆ, ಚಿಕ್ಕಮಕ್ಕಳನ್ನು ಬಾಧಿಸುತ್ತಿರುವ ಕ್ಯಾನ್ಸ್‍ರ ಕಾಯಲೆ ನಿರ್ಮೂಲನೆ ಹಾಗೂ ಹಸಿವು ನೀಗಿಸುವಂತ ಕಾರ್ಯಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡಬೇಕು ಎಂದರು.
ಲಯನ್ಸ್ ಕ್ಲಬ್‍ದ ಸಾಮಾಜಿಕ ಚಟುವಟಕೆಗಳು ವೃತ್ತಿ, ಉದ್ಯೋಗಗಳ ಒತ್ತಡಗಳನ್ನು ದೂರಮಾಡುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿಯೊಂದಿಗೆ ವ್ಯಕ್ತಿತ್ವ ರೂಪಿಸುತ್ತವೆ ಎಂದರು.
ಮೂಡಲಗಿ ಲಯನ್ಸ್ ಕ್ಲಬ್‍ವು ಕಳೆದ ಆರು ವರ್ಷಗಳಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಮೂಲಕ ಲಯನ್ಸ್ ಕ್ಲಬ್ ವಲಯದಲ್ಲಿ ಗಮನಸೆಳೆದಿರುವುದು ಶ್ಲಾಘನೀಯವಾಗಿದೆÀ ಎಂದರು.
ಲಯನ್ ಕ್ಲಬ್ ವಲಯ ಅಧ್ಯಕ್ಷ ಡಾ. ವಿಶ್ವನಾಥ ಗುಂಡಾ ಮಾತನಾಡಿ ಲಯನ್ಸ್ ಕ್ಲಬ್‍ದಲ್ಲಿ ಸೇರುವ ಮೂಲಕ ಸಮಾಜ ಸೇವೆಗೆ ಅವಕಾಶ ದೊರೆತಂತೆ ಎಂದರು.
ನೂತನ ಅಧ್ಯಕ್ಷರಾಗಿ ಬಾಲಶೇಖರ ಬಂದಿ, ಕಾರ್ಯದರ್ಶಿಯಾಗಿ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಖಜಾಂಚಿಯಾಗಿ ಸುಪ್ರೀತ ಸೋನವಾಲಕರ ಅವರು ಅಧಿಕಾರವನ್ನು ಸ್ವೀಕರಿಸಿದರು.
ಸಮಾರಂಭದ ಪೂರ್ವದಲ್ಲಿ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದರು.
ಈರಣ್ಣ ಕೊಣ್ಣೂರ ಲಯನ್ಸ್ ಕ್ಲಬ್‍ದ ಬೆಳವಣಿಗೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪುಲಕೇಶಿ ಸೋನವಾಲಕರ, ಕಾರ್ಯದರ್ಶಿ ಸಂಜಯ ಮೋಕಾಶಿ ಮತ್ತು ಖಜಾಂಚಿ ಸಂಜಯ ಮಂದ್ರೋಳಿ ಅವರನ್ನು ಸನ್ಮಾನಿಸಿದರು.
ಮಹಾಲಿಂಗಪುರದ ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಶೆಟ್ಟರ, ಸಂಜಯ ಅಂಬಿ, ಸಿದ್ದು ನಕಾತಿ, ಜಮಖಂಡಿ ಕ್ಲಬ್‍ನ ರಾಜೇಂದ್ರ ನಾಯ್ಕ್, ಪ್ರೊ. ಕುಂಬಾರ, ಡಾ. ಅಶೋಕ ದಿನ್ನಿಮನಿ, ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಉಪಸ್ಥಿತರಿದ್ದರು.
ಪವಿತ್ರಾ ಕೊಣ್ಣೂರ ಪ್ರಾರ್ಥಿಸಿದರು, ಪುಲಕೇಶಿ ಸೋನವಾಲಕರ ಸ್ವಾಗತಿಸಿದರು, ಡಾ. ಅನಿಲ ಪಾಟೀಲ ಪರಚಯಿಸಿದರು, ಮಹಾವೀರ ಸಲ್ಲಾಗೋಳ, ಶಿವಾನಂದ ಕಿತ್ತೂರ ನಿರೂಪಿಸಿದರು, ಡಾ. ಎಸ್.ಎಸ್. ಪಾಟೀಲ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ