Breaking News
Home / Recent Posts / ವಿದ್ಯಾರ್ಥಿಗಳು ಸಾಮಾಜಿಕ ಅಂತರ ಹಾಗೂ ಕೊರೋನಾ ನಿಯಮಾಳಿಗಳ ಪ್ರಕಾರ ನಡೆದುಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ- ಗಜಾನನ ಮನ್ನಿಕೇರಿ

ವಿದ್ಯಾರ್ಥಿಗಳು ಸಾಮಾಜಿಕ ಅಂತರ ಹಾಗೂ ಕೊರೋನಾ ನಿಯಮಾಳಿಗಳ ಪ್ರಕಾರ ನಡೆದುಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ- ಗಜಾನನ ಮನ್ನಿಕೇರಿ

Spread the love

ಮೂಡಲಗಿ:ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ವಲಯಗಳಲ್ಲಿ ಸುಗಮ ಹಾಗೂ ಸುಲಲಿತವಾಗಿ ಎರಡನೇಯ ಪರೀಕ್ಷೆ ಜರುಗಿತು. ಕೋವಿಡ್-19 ಎಸ್.ಒ.ಪಿ ಪ್ರಕಾರ ಜರುಗಿದವು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 45023 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುತ್ತಾರೆ ಎಂದು ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.


ಗುರುವಾರ ಜರುಗಿದ ಎರಡನೇಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಂದರ್ಭದಲ್ಲಿ ಮೂಡಲಗಿ ತಾಲೂಕಿನ ಕಲ್ಲೋಳಿ, ನಾಗನೂರ ಹಾಗೂ ಮೂಡಲಗಿ ಪಟ್ಟಣದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಎಸ್. ಎಸ್. ಆರ್ ಶಾಲೆಯಲ್ಲಿ ಮಾತನಾಡಿದ ಅವರು, ಕೋವಿಡ್-19, ಮಳೆಯ ತೊಂದರೆಯಲ್ಲಿಯು ಪರೀಕ್ಷೆಯು ಅತ್ಯುತ್ತಮವಾಗಿ ಮುಗಿದಿವೆ. ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗಲು ಸ್ವಲ್ಪ ತೊಂದರೆಯಾದರು ಉತ್ಸಾಹದಿಂದ ಮಕ್ಕಳು ನಿಗದಿತ ಸಮಯಕ್ಕೆ ಹಾಜರಾಗಿ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಗೆ ಮೆಡಿಕೆಟೆಡ್ ಮಾಸ್ಕ, ಸ್ಯಾನಿಟೈಸ್ ಹಾಗೂ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಸಿಬ್ಬಂದಿಗಳು ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ವೈದ್ಯಕೀಯ, ಪೋಲಿಸ್, ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್, ಸಾರಿಗೆ ಇಲಾಖೆ, ಆಶಾ ಕಾರ್ಯಕರ್ತೆಯರು, ಸ್ಕೌಟ್ ಮತ್ತು ಗೈಡ್ಸ್‍ಗಳ ಸೇವೆ ಮೆಚ್ಚುವಂತಹದು. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಹಾಗೂ ಕೊರೋನಾ ನಿಯಮಾಳಿಗಳ ಪ್ರಕಾರ ನಡೆದುಕೊಂಡರು. ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಎರಡನೇಯ ಪರೀಕ್ಷೆಯು ಅಚ್ಚುಕಟ್ಟಾಗಿ ಪರೀಕ್ಷಾ ಮಂಡಳಿಯ ನಿಯಮಾನುಸಾರ ಜರುಗಿದವು ಎಂದು ತಿಳಿಸಿದರು.
ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ 6923 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. 35 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಎರಡನೇಯ ಭಾಷಾ ಪರೀಕ್ಷೆಗಳು ಜರುಗಿದವು ಎಂದು ತಿಳಿಸಿದರು.
ಪರೀಕ್ಷಾ ಸಂದರ್ಭದಲ್ಲಿ ಬೆಳಗಾವಿ ಸಿಟಿಇ ಪ್ರಾಚಾರ್ಯ ರಾಜೀವ ನಾಯಕ ಎಸ್.ಡಿ.ಪಿ ಅರಬಾಂವಿ ಮಠ, ತಹಶೀಲ್ದಾರ ಡಿ.ಜಿ ಮಹಾತ ಸರಕಾರಿ ಪ್ರೌಢ ಶಾಲೆ ವಡೇರಹಟ್ಟಿ, ಚಿಕ್ಕೋಡಿ ಮದ್ಯಾಹ್ನ ಬಿಸಿಯೂಟ ಶಿಕ್ಷಣಾಧಿಕಾರಿ ಡಿ.ಎಸ್ ಕುಲಕರ್ಣಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


Spread the love

About inmudalgi

Check Also

ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

Spread the love ಮೂಡಲಗಿ : ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ