ಲಯನ್ಸ್ ಕ್ಲಬ್‍ದಿಂದ ವನಮಹೋತ್ಸವಕ್ಕೆ ಚಾಲನೆ
ಮೂಡಲಗಿ: ಇಲ್ಲಿಯ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ ಮಾಜಿ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ ‘ಶುದ್ದವಾದ ಪರಿಸರಕ್ಕಾಗಿ ಗಿಡಮರಗಳ ಸಂರಕ್ಷಣೆ ಅವಶ್ಯವಿದೆ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಉತ್ತಮ ಪರಿಸರ ಕಾಯಲು ಸಾಧ್ಯ’ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಸಸಿಯನ್ನು ನೆಡುವ ಮೂಲಕ ಲಯನ್ಸ್ ಕ್ಲಬ್‍ದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ‘ಆಗಷ್ಟ ಮೊದಲ ವಾರದಲ್ಲಿ ಬಸ್ ನಿಲ್ದಾಣ, ಪಶು ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನೂರು ಸಸಿಗಳನ್ನು ನೆಡುವ ಕಾರ್ಯಕ್ರಮ ಇದೆ’ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿ ‘ಲಯನ್ಸ್ ಕ್ಲಬ್‍ದ ಸಮಾಜ ಸೇವೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದು ಪ್ರಮುಖ ಸೇವೆಯಾಗಿದೆ. ಲಯನ್ಸ್ ಕ್ಲಬ್‍ನ ‘ನಮ್ಮ ನಡೆ ಸಸಿ ನೆಡುವ ಕಡೆಗೆ’ ಯೋಜನೆಯನ್ನು ಯಶಸ್ಸುಗೊಳಿಸಬೇಕು ಎಂದರು.
ಸಂಜಯ ಮೋಕಾಶಿ, ಮಹಾಂತೇಶ ಹೊಸೂರ, ಎನ್.ಟಿ. ಪೀರೋಜಿ, ಸಂಗಮೇಶ ಕೌಜಲಗಿ ಭಾಗವಹಿಸಿದ್ದರು.
ಸುಪ್ರೀತ ಸೋನವಾಲಕರ ಸ್ವಾಗತಿಸಿ ನಿರೂಪಿಸಿದರು.