ಮೂಡಲಗಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಮತ್ತು ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ, ಎ.ಪಿ.ಎಮ್.ಸಿ, ಭೂ ಸ್ವಾದೀನ, ಬೀಜ ಮಸೂದೆ ಕಾಯ್ದೆ ತಿದ್ದುಪಡಿ ಹಾಗೂ ಜನ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರಕಾರ ವಾಪಸು ಪಡೆದುಕೊಳ್ಳಬೇಕೆಂದು ಆಗ್ರಹಿಸಿ ತಾಲೂಕಿನ ಗುರ್ಲಾಪೂರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಕಾರ್ಯಕರ್ತರು ಗುರುವಾದಂದು ಮೂಡಲಗಿ ತಹಶೀಲ್ದಾರ ಡಿ.ಜಿ ಮಹಾತ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಹಾಗೂ ಕೋರೋನಾದಿಂದ ಉಂಟಾದ ಸಂದಿಗ್ದ ಸಮಯವನ್ನು ದುರ್ಲಾಭ ಪಡೆದುಕೊಂಡು, ತರಾತುರಿಯಾಗಿ ತಿದ್ದುಪಡಿಗಳನ್ನು ಮಾಡಿ, ಸಂಸತ್ತಿನಲ್ಲಿ ಮಂಡನೆಯಾಗುವ ಮೊದಲೇ ಸುಗ್ರಿವಾಜ್ಞೆ ಹೊರಡಿಸಿ, ಈ ದೇಶದ ರೈತರಿಗೆ ಹಾಘೂ ಸಾರ್ವಜನಿಕರಿಗೆ ಎರಡೂ ಸರಕಾರಗಳು ಮರಣ ಶಾಸನಗಳನ್ನು ಜಾರಿಮಾಡುತ್ತಿವೆ, ಎಲ್ಲ ಕಾಯ್ದೆಗಳು ಬಂಡವಾಳ ಶಾಹಿಗಳ ಪರವಾಗಿ ಜಾರಿ ಮಾಡುತ್ತಿರುವುದು ನಾಚಿಕ್ಕೆಗೆಡಿತನ ಸಂಗತಿಯಾಗಿದೆ. ಎಲ್ಲ ಕಾಯ್ದೆಗಳನ್ನು ಕೈಬೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ಸಂಘಟನೆಯ ತಾಲೂಕಾ ಸಂಚಾಲಕ ಹಣಮಂತ ಮುಗಳಖೋಡ, ಗ್ರಾಮ ಘಟಕ ಅಧ್ಯಕ್ಷ ಈರಪ್ಪ ಹೊಸಟ್ಟಿ, ಉಪಾಧ್ಯಕ್ಷ ಶಿವಬಸು ನೇಮಗೌಡ್ರ, ಸಂಚಾಲಕ ಪ್ರಕಾಶ ಅಂಗಡಿ, ವಿಠ್ಠಲ ಗೊಂಗಡಿ, ನಾಗರಾಜ ಮುಗಳಖೋಡ, ಭೀಮಪ್ಪ ಮುಗಳಖೋಡ, ನಾಗಪ್ಪ ಹೊಸಟ್ಟಿ, ರಮೇಶ ಹೊಸಟ್ಟಿ, ಶಿವಾನಂದ ನೇಮಗೌಡ್ರ ಹಾಗೂ ಕಾರ್ಯಕರ್ತರು ಇದ್ದರು.
