Breaking News
Home / Recent Posts / ಮೌಲ್ಯಗಳೇ ಮಾನವನ ಬದುಕಿಗೆ ಮಾರ್ಗದರ್ಶಿ – ಶ್ರೀ ವಾಯ್. ಬಿ. ಕಳ್ಳಿಗುದ್ದಿ

ಮೌಲ್ಯಗಳೇ ಮಾನವನ ಬದುಕಿಗೆ ಮಾರ್ಗದರ್ಶಿ – ಶ್ರೀ ವಾಯ್. ಬಿ. ಕಳ್ಳಿಗುದ್ದಿ

Spread the love

ಮೌಲ್ಯಗಳೇ ಮಾನವನ ಬದುಕಿಗೆ ಮಾರ್ಗದರ್ಶಿ – ಶ್ರೀ ವಾಯ್. ಬಿ. ಕಳ್ಳಿಗುದ್ದಿ

ಮೂಡಲಗಿ : “ವಿದ್ಯಾರ್ಥಿಗಳ ಭವಿಷ್ಯರೂಪಿಸುವಲ್ಲಿ ಶಿಕ್ಷಕರ ಕಾರ್ಯ ಮಹತ್ತರವಾಗಿದ್ದು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಗಳು ವiನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿದ್ದು ಅಳಿದು ಹೋಗುವ ಶರೀರದ ವ್ಯಾಮೋಹವನ್ನು ತೊರೆದು ದೇಶಅಭಿಮಾನ ಪಡುವಂತಹ ಮಕ್ಕಳು ನೀವಾಗಬೇಕು” ಎಂದು ಎಸ್.ಆರ್.ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರಿನ ಉಪನ್ಯಾಸಕ ವಾಯ್. ಬಿ. ಕಳ್ಳಿಗುದ್ದಿ ಕರೆ ನೀಡಿದರು.

ಅವರು ಸ್ಥಳೀಯ ಶ್ರೀಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ 2020-21 ನೇ ಸಾಲಿನ ಕಾಲೇಜಿನ ವಿವಿಧ ಘಟಕಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶಕಟ್ಟುವ ಸಮರ್ಥ ನಾಯಕರಾಗಬೇಕು ಪಾಠದಜೊತೆಗೆ ಬದುಕನ್ನು ಕಟ್ಟಿಕೊಳ್ಳುವ ಕಲೆಯನ್ನು ತಿಳಿಸಿಕೊಟ್ಟ ಗುರುಗಳಿಗೆ ಸದಾ ಚಿರಋಣಿಯಾಗಿರಬೇಕು. ತಂದೆ-ತಾಯಿಗಳ ಹೆಸರನ್ನು ತರಬೇಕು ಜೊತೆಗೆ ಪದವಿ ಮುಗಿಸಿದ ನಂತರ ಸಮಾಜಕ್ಕೆ ಪರಿಮಳವನ್ನು ಹೊತ್ತೊಯ್ಯಬೇಕು ಅದರಿಂದ ಸಮಾಜ ಸುಗಂಧ ಭರಿತವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಸ್.ಡಿ. ಗಾಣಿಗೇರ ಹಾಗೂ ಹಾರೂಗೇರಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಬಿ.ಕೊಕಟನೂರ ಮಾತನಾಡಿ, ಪದವಿ ಶಿಕ್ಷಣ ಪಡೆದುಕೊಂಡ ನೀವುಗಳು ಉನ್ನತ ಶಿಕ್ಷಣಕ್ಕೆ ತೆರಳಬೇಕು ಅಂತಹವರ ಸಂಖ್ಯೆ ಹೆಚ್ಚಾಗಲಿ ನಿಮ್ಮ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಗಾಯತ್ರಿ ಸಾಳೋಖೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿ.ಡಿ.ಸಿ ಸದಸ್ಯ ಚಂದ್ರು ಗಾಣಿಗರ, ಸಾಂಸ್ಕøತಿಕ ಸಂಯೋಜಕಿ ಶಿವಲೀಲಾ ಎಚ್. ಆಯ್, ಕ್ಯೂ.ಎ.ಸಿ. ಸಂಯೋಜಕಿ ಅಶ್ವಿನಿ ಎಸ್. ಆಯ್, ಕ್ಯೂ.ಎ.ಸಿ. ಸಹ ಸಂಯೋಜಕ ಚೇತನರಾಜ್ ಬಿ, ಕ್ರೀಡಾ ಸಂಯೋಜಕ ಡಾ. ರವಿ ಗಡದನ್ನವರ, ಎನ್.ಎಸ್.ಎಸ್ ಸಂಯೋಜಕ ಸಂಜೀವಕುಮಾರ ಗಾಣಿಗೇರ, ರೆಡ್‍ಕ್ರಾಸ್ ಸಂಯೋಜಕ ಹನುಮಂತ ಕಾಂಬಳೆ, ಹಾಗೂ ಎಲ್ಲಾ ಪ್ರಾಧ್ಯಾಪಕರು ಭಾಗವಹಿಸಿದ್ದರು. ಶೀತಲ ತಳವಾರ ಸ್ವಾಗತಿಸಿದರು. ಸಂಜೀವ ಮದರಖಂಡಿ ವಂದಿಸಿದರು. ಶಿವಕುಮಾರ ನಿರೂಪಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ