ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮೂಡಲಗಿ: ತಾಲೂಕಿನ ಅವರಾದಿ ಶ್ರೀ ಮಹಾಲಕ್ಷ್ಮೀ ಶಾಲೆಯ ಮಲ್ಲಕಂಬ ಕ್ರೀಡೆಯ ನಾಲ್ವರು ಕ್ರೀಡಾಪಟ್ಟಗಳು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಜರುಗಿದ ರಾಜ್ಯ ಮಲ್ಲಕಂಬ ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟದ ಮಲ್ಲಕಂಬ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಪ್ಪಟ ದೇಶಿ ಆಟ ಮಲ್ಲಕಂಬ ಸ್ಪರ್ಧೆಯಲ್ಲಿ ಯಮನವ್ವ ಲಕ್ಷಂ ಹೋಳಿ, ದಾನೇಶ್ವರ ಆನಂದ ಕಾಳಶೆಟ್ಟಿ, ಬಸವರಾಜ ಗುರುಪ್ಪ ಹೋಳಿ, ಪ್ರಭು ಹಾಲಪ್ಪ ಬೇವಿನಕಟ್ಟಿ ಅವರು ಅತ್ಯತ್ತಮ ಪ್ರದರ್ಶನ ನೀಡಿ ರಾಷ್ಟ್ರಮಕ್ಕೆ ಆಯ್ಕೆಗೊಂಡಿದ್ದಾರೆ. ಸೆ.28 ರಿಂದ ಸೆ.30 ರವರಿಗೆ ಭಾರತೀಯ ಮಲ್ಲಕಂಬ ಫೆಡರೇಷ ದಿಂದ ಪ್ರದೇಶದ ಉಜ್ಜಯಿನಿಯಲ್ಲಿ ಜರುಗುವ ರಾಷ್ಟ್ರ ಮಟ್ಟದ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಮಲ್ಲಕಂಬ ರಾಜ ಮಟ್ಟದ ಸ್ಪರ್ಧೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾರ್ಥಿಗಳನ್ನು ಶ್ರೀ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಮ್.ಎಮ್.ಪಾಟೀಲ, ತರಬೇತಿದಾರ, ಶಾಲೆಯ ಗುರು ಬಳಗದವರು ಹರ್ಷ ವ್ಯಕ್ತಪಡಿಸಿ ರಾಷ್ಟ್ರಮಟ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಶುಭಹಾರೈಸಿದ್ದಾರೆ.