ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶಕ್ತಿ ಪ್ರದರ್ಶನದ ಅವಶ್ಯವಿದೆ
ಮೂಡಲಗಿ: ಪಿಂಜಾರ ಸಮಾಜವು ಆರ್ಥಿವಾಗಿ ಹಿಂದುಳಿದ ಸಮಾಜವಾಗಿದ್ದು ಸದ್ಯ ಅಳಿವಿನ ಅಂಚಿನಲ್ಲಿದೆ ಪಿಂಜಾರ ಸಮಾಜದ ಅಭಿವೃದ್ದ್ದಿಗಾಗಿ ಹಾಗೂ ನಿಗಮದ ಒತ್ತಾಯಕ್ಕಾಗಿ ರಾಜ್ಯ ಮಟ್ಟದಲ್ಲಿ ಶಕ್ತಿ ಪ್ರದರ್ಶನದ ಅವಶ್ಯವಿದೆ ಆ ನಿಟ್ಟಿನಲ್ಲಿ ಈಗಿನಿಂದಲೆ ಶ್ರಮ ವಹಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಷ ಮಾಡಲಾಗುವುದು ಎಂದು ಸಂಘದ ಜಿಲ್ಲಾ ವಿಭಾಗಿಯ ಅಧ್ಯಕ್ಷ ಮುದಸ್ಸರ್ ನದಾಫ್ ಹೇಳಿದರು.
ಕಾಶೀಮಲಿ ಬ್ಯಾಂಕ್ ಆವರಣದಲ್ಲಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ನೂತನ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭದ ವಿಶೇಷ ಆಮಂತ್ರಿತರಾಗಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿರುವ ಪಿಂಜಾರರ ಅಭಿವೃದ್ದಿಗಾಗಿ ಸರ್ಕಾರ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಎಂದು ಅನೇಕ ವರ್ಷಗಳಿಂದ ಮನವಿ ಮಾಡಿದ್ದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಆದ್ದರಿಂದ ಸಂಘಟನೆಯ ಪದಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಂಘಟನೆಯಲ್ಲಿ ತೊಡಗಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಅಣಿಯಾಗಲು ಜಾಗೃತಿ ಮೂಡಿಸುವ ಕಾರ್ಯವನ್ನು ಈಗಿನಿಂದಲೆ ಪ್ರಾರಂಭಿಸಬೇಕು ಎಂದರು.
ಜಿಲ್ಲಾಧ್ಯಕ್ಷ ನಜೀರ ಆಹ್ಮದ ಶೇಖ ಉದ್ಘಾಟಿಸಿ ಮಾತನಾಡಿ, ಸಂಘ ಬೆಳೆದು ಮಾದರಿ ಸಂಘವಾಗಿ ಬೆಳೆಯಲಿ ಎಂದರು.
ಮುಖ್ಯ ಅತಿಥಿ ತಹಸೀಲ್ದಾರ ಡಿ ಜಿ ಮಹಾತ ಮಾತನಾಡಿ, ಸಮುದಾಯದಲ್ಲಿ ಶಿಕ್ಷಣದ ಕೊರತೆ ಇದ್ದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ನೂತನ ಸಂಘದ ಅಧ್ಯಕ್ಷ ಅನ್ವರ ನದಾಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಘದ ಏಳಿಗಿಗೆ ಪ್ರತಿಯೊಬ್ಬರೂ ಸಲಹೆ ಸಹಕಾರ ನೀಡಲಿ ಎಂದರು.
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಗ್ರಾಮಲೆಕ್ಕಾಧಿಕಾರಿ ಎ ಎಸ್ ಬಾಗವಾನ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಲೀಕ ಹುಣಶ್ಯಾಳ, ಸಂಘದ ಜಿಲ್ಲಾ ಕಾರ್ಯದರ್ಶಿ ಮಹ್ಮದ ರಫೀ ಪಿಂಜಾರ, ಜಿಲ್ಲಾ ಘಟಕದ ಖಜಾಂಚಿ ಅಪ್ಪಾಲಾಲ ನದಾಫ್,ಗೋಕಾಕ ಘಟಕದ ಅಧ್ಯಕ್ಷ ಮೀರಾಸಾಬ ನದಾಫ್ ಹಾಗೂ ಕಾರ್ಯದಶಿಯಾದ ಮುಸ್ತಾಕ್ ನದಾಫ್ ವಿಶೇಷ ಆಮಂತ್ರಿತರಾಗಿ ಬಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕಾ ಸಂಘದ ಉಪಾಧ್ಯಕ್ಷ ಮೌಲಾಸಾಬ ನದಾಫ್ ಕಾರ್ಯದರ್ಶಿ ಮೀರಾಸಾಬ ನದಾಫ್, ಮಲೀಕಜಾನ ನದಾಫ್, ಅಪ್ಪಾಸಾಬ ನದಾಫ್, ದಸ್ತಗೀರಸಾಬ ನದಾಫ್, ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎಮ್ ಎ ನದಾಫ್ ಸ್ವಾಗತಿಸಿದರು. ಸೈಯ್ಯದ ನದಾಫ್ ನಿರೂಪಿಸಿದರು, ಜಾಕೀರ ನದಾಫ್ ವಂದಿಸಿದರು.