ಬೆಟಗೇರಿ:ಬದಾಮಿ ತಾಲೂಕಿನ ಕೆರಕಲಮಟ್ಟಿ ಕೇದರನಾಥ ಶುಗರ್ಸ್ ಲಿ. ಆವರಣದಲ್ಲಿ ಜ.17 ರಂದು ನಡೆದ ನೂತನ ಕಾರ್ಖಾನೆ ಉದ್ಘಾಟನೆ ಸಮಾರಂಭದಲ್ಲಿ ಮುಧೋಳ ಎಂ.ಆರ್.ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ವಿಕಾಸ ಹಿತದೃಷ್ಠಿಯಿಂದ ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ರೈತರಿಗೆ ನೀಡುವ ರೈತ ಬಂಧು ಪ್ರಶಸ್ತಿಯನ್ನು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಗತಿಪರ ರೈತ ಅಶೋಕ ಪರಮಾನಂದ ಕೋಣಿ ಅವರಿಗೆ ನೀಡಿ ಗೌರವಿಲಾಗಿದೆ.
ಸಚಿವ ಮುರುಗೇಶ ನಿರಾಣಿ, ಎಂಎಲ್‍ಸಿ ಹನುಮಂತ ನಿರಾಣಿ, ಮುಧೋಳ ಎಂ.ಆರ್.ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ಎನ್.ವಿ.ಪಡಿಯಾರ್. ಎಸ್.ಡಿ.ಅಜ್ಜಪ್ಪನವರ, ಬಿ.ಆರ್.ಚಿಪ್ಪಲಕಟ್ಟಿ, ಎ.ಎಸ್,ಮುತವಾಡ, ಈಶ್ವರ ಮುಧೋಳ, ರವಿ ಉಪ್ಪಾರ, ಮಾಯಪ್ಪ ಬಾಣಸಿ ಸೇರಿದಂತೆ ವಿವಿಧ ವಲಯದ ಸಾಧಕರು, ಮುಧೋಳ ಎಂ.ಆರ್.ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಂಂಡರು, ಗಣ್ಯರು, ರೈತರು, ಇದ್ದರು.
