ಮೂಡಲಗಿ: ಇಂದಿನ ನಾಗರೀಕರಿಗೆ ಕಾನೂನು ಬಗ್ಗೆ ಅರಿವು ಮೂಡಿದಾಗ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಇಲ್ಲಿಯ ನ್ಯಾಯವಾದಿ ಎಲ್. ವಾಯ್. ಅಡಿಹುಡಿ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಜರುಗಿದ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ಯ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ, ನಾವೆಲ್ಲರೂ ಕಾನೂನಿಡಿಯಲ್ಲಿ ಕೆಲಸ ನಿರ್ವಹಿಸಬೇಕು ಅಂದರೆ ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೂ ಕಾನೂನಿ ಚೌಕಟ್ಟಿನಡಿಯಲ್ಲಿ ಜೀವನ ನಿರ್ವಹಣೆ ಮಾಡಿದ್ದಲ್ಲಿ ಸಮಾಜದ ಶಾಂತಿ ಸಹಬಾಳ್ವೆ ಸುವ್ಯವಸ್ಥೆ ಮಾನಸಿಕ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರ್ಮಿ ಮತ್ತು ಪೆÇಲೀಸ್ ತರಬೇತಿ ಪುರುಷ ಹಾಗೂ ಮಹಿಳಾ ಶಿಬಿರಾರ್ಥಿಗಳಿಗೆ ಮೋಟಾರ್ ವಾಹನ ಕಾಯ್ದೆ ಹಾಗೂ ಉಚಿತ ಕಾನೂನು ಅರಿವು-ನೆರವು ಬಗ್ಗೆ ತಿಳುವಳಿಕೆ ಹೇಳಿದರು.
ನ್ಯಾಯವಾದಿ ವಾಯ್.ಎಸ್.ಖಾನಟ್ಟಿ ಮಾತನಾಡಿ, ನ್ಯಾಯಾಲಯದ ವತಿಯಿಂದ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮದಿಂದ ನೇರವಾಗಿ ಜನಸಾಮಾನ್ಯರಿಗೆ ಮಾಹಿತಿಯನ್ನು ಒದಗಿಸಿದಂತೆ ಆಗುತ್ತದೆ. ಇದರಿಂದ ಸಾರ್ವಜನಿಕರು ಮಾಹಿತಿಗಳನ್ನು ಸರಿಯಾಗಿ ಅರಿತುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಕುಂಬಾರ ವಹಿಸಿದ್ದರು, ಜಯಂತ್ ಗೌಡ, ದಿವ್ಯಶ್ರೀ ಗೊಳೆ, ಮಹಾಂತೇಶ್ ಕೊಟಬಾಗಿ, ಪರಶುರಾಮ್ ಕೊಡಗನೂರ, ಮಹಾಲಿಂಗ ಗೊಡ್ಯಾಗೋಳ, ರಂಜಿತಾ ಎಲ್ ಮತ್ತಿತರು ಉಪಸ್ಥಿತರಿದ್ದರು.