Breaking News
Home / Recent Posts / ಮಹ್ಮದ್ ಪೈಗಂಬರ ಜಯಂತಿ ನಿಮಿತ್ತ ಪ್ರವಚಣ, ಅನ್ನ ಸಂತರ್ಪಣೆ

ಮಹ್ಮದ್ ಪೈಗಂಬರ ಜಯಂತಿ ನಿಮಿತ್ತ ಪ್ರವಚಣ, ಅನ್ನ ಸಂತರ್ಪಣೆ

Spread the love

ಮಹ್ಮದ್ ಪೈಗಂಬರ ಜಯಂತಿ ನಿಮಿತ್ತ ಪ್ರವಚಣ, ಅನ್ನ ಸಂತರ್ಪಣೆ

ಮೂಡಲಗಿ: ಇಲ್ಲಿನ ಅಹಲೆ ಸುನ್ನತ್ ಜಮಾತ್ ಬಿಟಿಟಿ ಕಮೀಟಿ ವತಿಯಿಂದ ಪ್ರವಾದಿ ಮಹ್ಮದ ಪೈಗಂಬರ ಜನ್ಮ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಅತ್ಯಂತ ಸರಳವಾಗಿ ಸಂಭ್ರಮದಿಂದ ಆಚರಿಸಿ ಪರಸ್ಪರರು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನಾ ಕೌಸರ ರಜಾ, ಮಹ್ಮದ ಪೈಗಂಬರ ಕುರಿತು ಪ್ರವಚಣ ನೀಡಿ ಮಾತನಾಡಿ, ಪ್ರತಿ ವರ್ಷ ಭವ್ಯ ಮೆರವಣಿಗೆ ಜೊತೆಗೆ ಹಬ್ಬವನ್ನು ಆಚರಿಸಲಾಗುತ್ತಿತ್ತು ಆದರೆ ಈ ಬಾರಿ ಕೊರೋನಾದಿಂದಾಗಿ ಮೆರವಣಿಗೆ ರದ್ದು ಮಾಡಿ ಸರ್ಕಾರದ ಮಾರ್ಗಸೂಚಿಯಂತೆ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಲ್ಲರೂ ಸುಖ ಶಾಂತಿ ನೆಮ್ಮದಿ ಹೊಂದಲಿ, ಸಕಲ ಜೀವರಾಶಿಗಳಿಗೆ ಒಳಿತಾಗಲಿ, ಸರ್ವಕಾಲಿಕವಾದ ಮಹ್ಮದ ಪೈಗಂಬರ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಶುಭ ಕೋರಿದರು.
ಮೌಲಾನಾ ನಿಜಾಮುದ್ದೀನ ಮಂತ್ರ ಪಠಣ ಮಾಡಿದರು ನಂತರ ಅನ್ನ ಸಂತರ್ಪಣೆ ಜರುಗಿತು.
ಬಿಟಿಟಿ ಕಮಿಟಿ ಅಧ್ಯಕ್ಷ ಶರೀಫ್ ಪಟೇಲ, ಉಪಾಧ್ಯಕ್ಷ ಮಲೀಕ ಕಳ್ಳಿಮನಿ, ಮೌಲಾನಾ ಅಮೀರ ಹಮ್ಜಾ ಥರಥರಿ, ಹಸನಸಾಬ ಮುಗುಟಖಾನ, ಸಾಹೇಬ ಪೀರಜಾದೆ, ಬಾಷಾ ಲಾಡಖಾನ್, ಡಾ.ಅಲ್ಲಾನೂರ ಬಾಗವಾನ,ಆದಮಸಾಬ ತಾಂಬೋಳಿ, ಇಬ್ರಾಹಿಂ ಅತ್ತಾರ, ಮೀರಾಸಾಬ ಝಾರೆ ಹಾಗೂ ಸುನ್ನಿ ಯಂಗ್ ಕಮೀಟಿ ಸದಸ್ಯರು ಮತ್ತು ಅನೇಕ ಗಣ್ಯರು ಇದ್ದರು.


Spread the love

About inmudalgi

Check Also

 ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 103ನೇ ಅನ್ನದಾಸೋಹ

Spread the loveಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ