ಮೂಡಲಗಿ: ನ.27ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗಿರಡ್ಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನ. 27ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ಥಳೀಯ ಪೊಲೀಸ್ ಕ್ವಾಟರ್ಸ್ ಹತ್ತಿರದ ಹನುಮಾನ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿರುವರು.
ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ, ಆಯ್ದ ರಕ್ತ ತಪಾಸಣೆ, ಇಸಿಜಿ ಮತ್ತು ಇತರೆ ರೋಗಗಳ ಬಗ್ಗೆ ಉಚಿತ ತಪಾಸಣೆ ಮಾಡುವರು. ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಪ್ರಶಾಂತ ಬಾಬನ್ನವರ ಮತ್ತು ಡಾ. ಬನಶಂಕರಿ ಗಿರಡ್ಡಿ ಅವರು ಶಿಬಿರದಲ್ಲಿ ತಪಾಸಣೆ ಮಾಡುವರು.
ಮೂಡಲಗಿ ತಾಲ್ಲೂಕು ವ್ಯಾಪ್ತಿಯ ಜನರು ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳಲು ಸಂಘಟಕರು ತಿಳಿಸಿದ್ದಾರೆ.
ಉದ್ಘಾಟನೆ: ನ. 27ರಂದು ಬೆಳಿಗ್ಗೆ 10ಕ್ಕೆ ಶಿಬಿರದ ಉದ್ಘಾಟನೆಯನ್ನು ಗೋಕಾಕ-ಮೂಡಲಗಿ ತಾಲ್ಲೂಕಾ ಆರೋಗ್ಯ ಅಧಿಕಾರಿ ಮುತ್ತಣ್ಣ ಕೊಪ್ಪದ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಪಿಎಸ್‍ಐ ಎಚ್.ವೈ. ಬಾಲದಂಡಿ ಭಾಗವಹಿಸುವರು. ಲಯನ್ಸ್ ಅಧ್ಯಕ್ಷ ಬಾಲಶೇಖರ ಬಂದಿ ಅಧ್ಯಕ್ಷತೆವಹಿಸುವರು ಎಂದು ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.