Breaking News
Home / Recent Posts / ಮೂಡಲಗಿಯ ಲಯನ್ ಕ್ಲಬ್ ಪರಿವಾರದಿಂದ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ವಿತರಣೆ

ಮೂಡಲಗಿಯ ಲಯನ್ ಕ್ಲಬ್ ಪರಿವಾರದಿಂದ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ವಿತರಣೆ

Spread the love

ಮೂಡಲಗಿಯ ಲಯನ್ ಕ್ಲಬ್ ಪರಿವಾರದಿಂದ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ವಿತರಿಸಿದರು

ಲಯನ್ಸ್ ಕ್ಲಬ್‍ದಿಂದ ಉಚಿತ ಛತ್ರಿ ವಿತರಣೆ

ಮೂಡಲಗಿ: ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದಿಂದ ರಸ್ತೆ ಬದಿಯ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ವಿತರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ‘ಮೂಡಲಗಿ ಪಟ್ಟಣದಲ್ಲಿ ಅವಶ್ಯವಿರುವ 10 ಜನ ಬೀದಿ ಬದಿಯ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ನೀಡಲಾಗಿದೆ. ಲಯನ್ಸ್ ಕ್ಲಬ್‍ವು ಕಳೆದ ಆರು ವರ್ಷಗಳಿಂದ ಸಮಾಜದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಲಿದೆ’ ಎಂದರು.
ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿ ಬೀದಿ ಬದಿಯ ವ್ಯಾಪಾರಿಗಳ ಛತ್ರಿಗಳನ್ನು ದೇಣಿಗೆ ನೀಡಿದವರನ್ನು ಅಭಿನಂದಿಸಿದರು.
ವೆಂಕಟೇಶ ಸೋನವಾಲಕರ, ಡಾ. ಎಸ್.ಎಸ್. ಪಾಟೀಲ, ಮಹಾಂತೇಶ ಹೊಸೂರ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಪ್ರಶಾಂತ ಬಾಬಣ್ಣವರ, ಶ್ರೀಶೈಲ್ ಲೋಕನ್ನವರ, ಸಂಜಯ ಮೋಕಾಶಿ, ಸುರೇಶ ನಾವಿ ಇದ್ದರು.
ಖಜಾಂಚಿ ಸುಪ್ರೀತ ಸೋನವಾಲಕರ ವಂದಿಸಿದರು.


Spread the love

About inmudalgi

Check Also

17ರಂದು ಬೆಳದಿಂಗಳ ಸಾಹಿತ್ಯ ಚಿಂತನ: ಕುವೆಂಪು ಸಾಹಿತ್ಯ

Spread the loveಇಂದು ಬೆಳದಿಂಗಳ ಸಾಹಿತ್ಯ ಚಿಂತನ: ಕುವೆಂಪು ಸಾಹಿತ್ಯ ಮೂಡಲಗಿ: ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಬೆಳದಿಂಗಳ ಸಾಹಿತ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ