ಮೂಡಲಗಿ: ಕಳೆದ ದಿಸೆಂಬರ 27 ರಂದು ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಮತಾದನ ನಡೆದ ನಂತರ ಮೂಡಲಗಿಯಲ್ಲಿದ ಸ್ಟ್ರಾಂಗ್ ರೂಮನಲ್ಲಿ ಇರಿಸಲಾದ ಮತಯಂತ್ರ ಬದಲಾವಣೆಯಾಗಿವೆ ಎಂದು ಬಿಜೆಪಿ ಕಾರ್ಯಕರ್ತರ ಆರೋಪ ಸತ್ಯಕ್ಕೆ ದೂರವಾದುದ್ದು ಎಂದು ಬೆಳಗಾವಿ ಬಿಡಿಸಿಸಿ ನಿರ್ದೇಶಕ ನೀಲಕಂಠ ಕಪ್ಪಲಗುದಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಮತಯಂತ್ರ ಬದಲಾವಣೆಯಾಗಿದೆ ಎಂದು ರಾಜ್ಯಸಭಾ ಈರಣ್ಣ ಕಡಾಡಿಯವರ ಬೆಂಬಲಿಗರು ಮಾಡಿರುವ ಎಲ್ಲ ಆರೋಪಗಳು ಸುಳ್ಳಿನಿಂದ ಕೂಡಿವೆ ಎಂದು ಗುರುವಾರದಂದು ಮೂಡಲಗಿಯಲ್ಲಿ ತಹಶೀಲ್ದಾರ ಡಿ.ಜಿ.ಮಹಾತ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲವು ಸರ್ವೇ ನಾಮಾನ್ಯವಾಗಿದ್ದು, ಈರಣ್ಣ ಕಡಾಡಿ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳು ಜನರಿಂದ ತಿರಸ್ಕøತಗೊಂಡು ಸೋತು ಸುಣ್ಣವಾಗಿದ್ದಾರೆ. 16 ಸ್ಥಾನಗಳ ಪೈಕಿ ಕೇವಲ 3 ಸ್ಥಾನಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಹಾಗಾಗಿ ಸೋತು ಕಂಗಾಲಾಗಿರುವ ಬಿಜೆಪಿ ಅಭ್ಯರ್ಥಿಗಳು ವಿನಾಕಾರಣ ಚುನಾವಣಾ ಆಯೋಗದ ವಿರುದ್ದು ಆರೋಪ ಮಾಡಿರುವುದು ಅವರ ದುರ್ಬದ್ಧಿಯನ್ನು ಎತ್ತಿ ತೋರಿಸಿದ್ದಾರೆ ಎಂದರು.
ನೂತನ ಸದಸ್ಯ ಸುಭಾಷ ಕುರಬೇಟ ಮಾತನಾಡಿ, ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ಅವರ ಬೆಂಬಲಿತ ಬೆಜೆಪಿ ಅಭ್ಯರ್ಥಿಗಳು ಕಡಾಡಿ ಅವರ ಮಾರ್ಗದರ್ಶನದಲ್ಲಿ ಮತ್ತು ಅವರ ಸಹೋದರ ಮುಂದಾಳತ್ವದಲ್ಲಿ ಮನವಿ ನೀಡಿದ್ದಾರೆ, ನಾವೂ ಕೂಡ ಕಟ್ಟಾ ಬಿಜೆಪಿ ಕಾರ್ಯಕರ್ತರು, ಕಳೆದ 13 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ತತ್ವ ಸಿದ್ಧಾಂತದಲ್ಲಿ ನಂಬಿಕೆಯನ್ನಿಟ್ಟು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ. ಇಷ್ಟಾಗಿಯೂ ಚುನಾವಣೆಯಲ್ಲಿ ನಮಗೆ ಪಕ್ಷದಿಂದ ಟಿಕೇಟ್ ನೀಡದೇ ತಮ್ಮ ಬೆಂಬಲಿಗರಿಗೆ ಬಿ ಫಾರ್ಮ ನೀಡಿದರಿಂದ ನಾವು ಪಕ್ಷೇತ್ರರರಾಗಿ ಚುನಾವಣೆಗೆ ಸ್ವರ್ಧೆ ಮಾಡಬೇಕಾಯಿತು. ನಾವು ಕೂಡಾ ಪಕ್ಷದ ಶಿಸ್ತಿನ ಸಿಪಾಯಿಗಳು ಕಡಾಡಿ ಅವರಿಗೆ ಬಿಜೆಪಿ ಎಲ್ಲವನ್ನೂ ದಯಪಾಲಿಸಿದೆ, ನಿರೀಕ್ಷೆಗೂ ಮೀರಿ ಈಗಲೂ ಕೇಂದ್ರದಲ್ಲಿ ಸಾಕಷ್ಟು ಅಧಿಕಾರ ನೀಡುತ್ತದೆ, ಸ್ಥಳೀಯವಾಗಿ ಯಾವ ಪ್ರಭಾವವೂ ಇಲ್ಲದ, ಪಟ್ಟಣ ಪಂಚಾಯಿತಿಯಲ್ಲಿ ಹೀನಾಯವಾಗಿ ಮುಖಭಂಗಕ್ಕೀಡಾಗಿರುವ ಕಡಾಡಿಯವರು ಸ್ವತಃ ತಮ್ಮ ಸರ್ಕಾರಗಳ ಮೇಲೆಯೇ ಅನುಮಾನ ವ್ಯಕ್ತಪಡಿಸಿರುವುದು ಅವರ ಯೋಗ್ಯತೆಗೆ ಎತ್ತಿ ತೋರಿಸಿದಂತಾಗಿದೆ, ನಿಷ್ಪಕ್ಷಪಾತ ಚುನಾವಣೆ ನಡೆದಿದೆ. ಯಾವುದೇ ರೀತಿಯ ಅಕ್ಕಮಗಳು ನಡೆಯಲು ಸಾಧ್ಯವಿಲ್ಲ, ಚುನಾವಣಾಧಿಕಾರಿಗಳು ಸಹ ಮುಂಜಾಗೃತವಾಗಿ ಯಾವುದೇ ವಿಪರ್ಯಸದ ಸಂಗತಿಯಾಗಿದೆ. ಚುನಾಧಿಕಾರಿಗಳು ಸಹ ಮುಂಜಾಗ್ರತವಾಗಿ ಯಾವುದೇ ಅಕ್ರಮಗಳು ನಡೆಯದಂತೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ, ಕಡಾಡಿ ಅವರ ಬೆಂಬಲಿಗರು ಎಲ್ಲ ಆರೋಪಗಳು ಸುಳ್ಳಿನಿಂದ ಕೂಡಿದೆ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದುದರಿಂದ ತಮ್ಮ ಸರ್ಕಾರದ ಮೇಲೆಯೇ ಅವಿಶ್ವಾಸ ಮಂಡಿಸುತ್ತಿರುವ ಕಡಾಡಿ ಅವರು ಜನರನ್ನು ತಪ್ಪ ದಾರಿಗೆಳೆಯಲು ಈ ರೀತಿಯ ಆರೋಪಗಳನ್ನು ಹೋರಿಸುತ್ತಿರುವುದು ಸರಿಯಲ್ಲ, ತಮ್ಮ ಸೋಲನ್ನು ಮರೆಮಾಚಿಸಲು ಅಧಿಕಾರಿಗಳ ಮೇಲೆ ಸಂಶಯ ಮಾಡುತ್ತಿರುವುದು, ಸರ್ಕಾರದ ಮೇಲೆ ತಪ್ಪು ಹೊರಿಸುತ್ತಿರುವಯದನ್ನು ನೋಡಿದರೇ ಅವರ ಮಾನಸಿಕ ಸ್ಥಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಬಿಜೆಪಿ ಕಾರ್ಯಕರ್ತರು ಹಾಗೂ ಪರಾಜಿತ ಅಭ್ಯರ್ಥಿಗಳು ಮಾಡಿರುವ ಎಲ್ಲ ಅರೋಪಗಳು ಸತ್ಯಾಂಶದಿಂಧ ಕೂಡಿರುವುದಿಲ್ಲ. ಈ ಆರೋಪಗಳ ಹಿಂದೆ ರಾಜ್ಯಸಭಾ ಸದಸ್ಯರ ನೇರ ಕೈವಾಡವಿದೆ. ಚುನಾವಣಾಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ, ನಮಗೆ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಅಪಾರ ನಂಬಿಕೆ ಇದೆ. ಜೊತೆಗೆ ಜನಾದೇಶಕ್ಕೆ ಬದ್ಧರಿದ್ಧೆವೆ, ಜನರ ಆದೇಶಗಳನ್ನು ಪಾಲಿಸಲು ನಾವೆಲ್ಲರೂ ಸಿದ್ಧರಿದ್ಧೇವೆ ಎಂದರು.
ಈ ಸಂದರ್ಭದಲ್ಲಿ ಬಸವಂತ ದಾಸನವರ, ಮಲ್ಲಪ್ಪ ನಿಂ.ಹೆಬ್ಬಾಳ, ಮಾಳಪ್ಪ ಮ.ಸನದಿ, ಕಮಲಾ ಸಿ.ಕಳ್ಳಿಗುದ್ದಿ, ಲಕ್ಷ್ಮೀ ರಾ.ಗಾಣಿಗೇರ, ಕೃಷ್ಣವ್ವ ಶಿ.ಭಜಂತ್ರಿ, ವಸಂತ ಶಿ.ತಹಶೀಲ್ದಾರ, ಮಲ್ಲಪ್ಪ ಪ.ಕಡಾಡಿ, ಮಾಯವ್ವ ಬ.ದಾಸನವರ, ಗಂಗವ್ವ ಯ.ದಾಸನವರ, ಅಲ್ಲಪ್ಪ ಸಿ.ದಾಸನಾಳ, ಮೋಹನ ಗಾಡಿವಡ್ಡರ, ರಾಮಪ್ಪ ಅ.ಹಡಿಗಿನಾಳ, ದುಂಡಪ್ಪ ಕುರಬೇಟ, ರಾಮಣ್ಣ ಗಾಣಿಗೇರ, ಮುತ್ತಪ್ಪ ಭಜಂತ್ರಿ, ಸಂಜು ಕಳಿಗುದ್ದಿ, ಮಾಂತೇಶ ಗಾಡಿವಡ್ಡರ ಮತ್ತಿತರು ಇದ್ದರು.
ಪೋಟೋ ಕ್ಯಾಪ್ಸನ್> ಮೂಡಲಗಿ: ಕಲ್ಲೋಳಿ ಪ.ಪಂ ಚುನಾವಣೆಯಲ್ಲಿ ಮತಯಂತ್ರ ಬದಲಾವಣೆಯಾಗಿದೆ ಎಂದು ರಾಜ್ಯಸಭಾ ಈರಣ್ಣ ಕಡಾಡಿಯವರ ಬೆಂಬಲಿಗರು ಮಾಡಿರುವ ಎಲ್ಲ ಆರೋಪಗಳು ಸುಳ್ಳಿನಿಂದ ಕೂಡಿವೆ ಎಂದು ಗುರುವಾರದಂದು ಪ.ಪಂ ಪಕ್ಷೇತರ ಅಭ್ಯರ್ಥಿಗಳು ಮತ್ತು ಮುಖಂಡರು ತಹಶೀಲ್ದಾರ ಡಿ.ಜಿ.ಮಹಾತ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.