Breaking News
Home / Recent Posts / ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಪ್ರಜೆಗಳು, ಅವರಲ್ಲಿ ಏನು ಬೇಕಾದರೂ ಸಾಧಿಸಬಹುದಾದಂತ ಕೌಶ್ಯಲಗಳು ಅಡಗಿವೆ- ಬಸವ ಜಯಮೃತ್ಯುಂಜಯ ಸ್ವಾಮೀಜಿ

ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಪ್ರಜೆಗಳು, ಅವರಲ್ಲಿ ಏನು ಬೇಕಾದರೂ ಸಾಧಿಸಬಹುದಾದಂತ ಕೌಶ್ಯಲಗಳು ಅಡಗಿವೆ- ಬಸವ ಜಯಮೃತ್ಯುಂಜಯ ಸ್ವಾಮೀಜಿ

Spread the love

ಮೂಡಲಗಿ : ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಪ್ರಜೆಗಳು, ಅವರಲ್ಲಿ ಏನು ಬೇಕಾದರೂ ಸಾಧಿಸಬಹುದಾದಂತ ಕೌಶ್ಯಲಗಳು ಅಡಗಿವೆ. ಅವುಗಳನ್ನು ಹೊರಗೆ ತರುವಂತಹ ಪ್ರಾಮಣಿಕ ಪ್ರಯತ್ನಗಳು ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗುರುವಾರದಂದು ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಖಿತ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮದ ತಾಲೂಕಾ ಘಟಕದ ಆಶ್ರಯದಲ್ಲಿ ಜರುಗಿದ, ಮೂಡಲಗಿ ತಾಲೂಕಿನ ಸುತ್ತಮುತ್ತಲಿನಲ್ಲಿ ನೂತನ ಪಿಎಸ್‍ಐ ಹುದ್ದೆಗೆ ಆಯ್ಕೆಯಾದ ವಿವಿಧ ಸಮಾಜದ 15 ಅಭ್ಯರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮುಂದಿನ ಭವಿಷ್ಯಕ್ಕಾಗಿ ಜೀವನದ ಮೌಲ್ಯಗಳ ಮಹತ್ವವನ್ನು ಅರಿತುಕೊಂಡರೆ ಮೌಲ್ಯಾಧಿರಿತ ಜೀವನ ನಡೆಸಲು ಸಾಧ್ಯವಾಗುತ್ತದೆ. ಪಂಚಮಸಾಲಿ ಸಮಾಜದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ 2ಎ ಮೀಸಲಾತಿಯನ್ನು ಪಡೆಯುವುದು ನಮ್ಮೆಲ್ಲರ ಹಕ್ಕು ಎಂದರು.

2ಎ ಮೀಸಲಾತಿಗಾಗಿ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಮೂಡಲಗಿ ತಾಲೂಕಿನ ಪಂಚಮಸಾಲಿಗಳು ಹೆಚ್ಚಿನ ಬೆಂಬಲವನ್ನು ನೀಡಿದ್ದು, ಯುವಕರು ಒಳ್ಳೆಯ ಸಂಘಟನೆ ಮಾಡುವ ಮೂಲಕ ನಮ್ಮ ಸಮಾಜವನ್ನು ಅಭಿವೃದ್ಧಿ ಪಥದತ್ತ ಸಾಗುವಂತೆ ಕಾರ್ಯ ಮಾಡಬೇಕೆಂದು ಸಲಹೆ ನೀಡಿ, ಪಿಎಸ್‍ಐ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮುಂದಿನ ದಿನಮಾನಗಳಲ್ಲಿ ಮತಷ್ಟು ಪ್ರಯತ್ನಪಟ್ಟು ಇನ್ನೂ ಹೆಚ್ಚಿನ ಹುದ್ದೆಯನ್ನು ಪಡೆದುಕೊಂಡು ಸಮಾಜಕ್ಕೆ ಪ್ರಾಮಾಣಿಕವಾಗಿ ತಮ್ಮ ಸೇವೆ ಸಲ್ಲಿಸಿ ಎಂದು ಶುಭ ಹಾರೈಸಿದರು.

ಪಂಚಮಸಾಲಿ ಘಟಕದ ಜಿಲ್ಲಾಧ್ಯಕ್ಷ ಪಂಚನಗೌಡ ದ್ಯಾಮನಗೌಡರ ಹಾಗೂ ರೈತ ಘಟಕದ ರಾಜ್ಯಾಧ್ಯಕ್ಷ ಅಮರೇಶ ನಾಗುರ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೂಡಲಗಿ ತಾಲೂಕಿನ ಸುತ್ತಮುತ್ತಲಿನಲ್ಲಿ ಪಿಎಸ್‍ಐ ಹುದ್ದೆಗೆ ಆಯ್ಕೆಯಾದ ವಿವಿಧ ಸಮಾಜದ 15 ಅಭ್ಯರ್ಥಿಗಳಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಸನ್ಮಾನಿಸಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಘಟಕದ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಸವದೆ. ತಾಲೂಕಾ ಘಟಕಾಧ್ಯಕ್ಷ ಬಸವರಾಜ ಪಾಟೀಲ, ಹುಕ್ಕೇರಿ ಘಟಕದ ತಾಲೂಕಾಧ್ಯಕ್ಷ ಶಿವನಗೌಡ ಪಾಟೀಲ, ಸಮಾಜದ ಮುಖಂಡರಾದ ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ, ಶಿವನಗೌಡ ಪಾಟೀಲ, ಕೆಂಪಣ್ಣಾ ಮುಧೋಳ, ಮಲ್ಲು ಗೋಡಿಗೌಡರ, ಸಂಗಮೇಶ ಕೌಜಲಗಿ, ಹಣಮಂತ ಶಿವಾಪೂರ, ಸದಾ ನಿಡಗುಂದಿ, ಬಸವರಾಜ ರಂಗಾಪೂರ ಹಾಗೂ ಅನೇಕರು ಉಪಸ್ಥಿತರಿದ್ದರು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ