Breaking News
Home / Recent Posts / ವಿದ್ಯಾರ್ಥಿಗಳು ಭವಿಷ್ಯದ ಪಾತ್ರವನ್ನು ಅರಿತು ಅಧ್ಯಯನಕ್ಕೆ ಆಧ್ಯತೆ ನೀಡಬೇಕು ಬಿ. ಇ. ಓ. ಅಜೀತ್ ಮನ್ನಿಕೇರಿ.

ವಿದ್ಯಾರ್ಥಿಗಳು ಭವಿಷ್ಯದ ಪಾತ್ರವನ್ನು ಅರಿತು ಅಧ್ಯಯನಕ್ಕೆ ಆಧ್ಯತೆ ನೀಡಬೇಕು ಬಿ. ಇ. ಓ. ಅಜೀತ್ ಮನ್ನಿಕೇರಿ.

Spread the love

ವಿದ್ಯಾರ್ಥಿಗಳು ಭವಿಷ್ಯದ ಪಾತ್ರವನ್ನು ಅರಿತು ಅಧ್ಯಯನಕ್ಕೆ ಆಧ್ಯತೆ ನೀಡಬೇಕು ಬಿ. ಇ. ಓ. ಅಜೀತ್ ಮನ್ನಿಕೇರಿ.

ಮೂಡಲಗಿ : ವಿದ್ಯಾರ್ಥಿಗಳು ಭವಿಷ್ಯದ ಪಾತ್ರವನ್ನು ಅರಿತು ಅಧ್ಯಯನಕ್ಕೆ ಆಧ್ಯತೆ ನೀಡಬೇಕು. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಉತ್ತಮ ಭವಿಷ್ಯದಡೆಗೆ ಹೆಚ್ಚು ಗಮನ ನೀಡಿ ಉತ್ತಮ ಫಲಿತಾಂಶ ಪಡೆಯಲು ಉಪನ್ಯಾಸಕರ ಶ್ರಮದೊಂದಿಗೆ ವಿದ್ಯಾರ್ಥಿಗಳು ಶ್ರದ್ದೆ ಮತ್ತು ಪ್ರಾಮಾಣಿಕ ಅದ್ಯಯನಕ್ಕೆ ತೊಡಗುವ ಕಾಳಜಿ ವಹಿಸಬೇಕು ಅಲ್ಲದೇ ತಮ್ಮ ತಂದೆ ತಾಯಿ ಕನಸಿನೊಂದಿಗೆ ತಮ್ಮ ಭವಿಷ್ಯದ ಕನಸ್ಸನ್ನು ಸಾಕಾರಗೊಳಿಸಿ ದ್ವೀತಿಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದು ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಕರೆ ನೀಡಿದರು.

ಅವರು ಸ್ಥಳೀಯ ಆರ್.ಡಿ.ಎಸ್. ಪಿ ಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿದ್ಯಾರ್ಥಿಗಳು ಸೃಜನಶೀಲ ಅಧ್ಯಯನದಿಂದ ಫಲಿತಾಂಶದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದರು.

ಇನ್ನೋರ್ವ ಅತಿಥಿ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂಜಯ ಶಿಂಧಿಹಟ್ಟಿ ಮಾತನಾಡಿ ವಿದ್ಯಾರ್ಥಿ ಜೀವನ ಸಾಧಕನ ಜೀವನವಾಗ ಬೇಕಾದರೆ ನಿರಂತರ ಶ್ರಮ, ಏಕಾಗ್ರತೆ ಹಾಗೂ ಅಧ್ಯಯನಶೀಲತೆ ಸ್ವಭಾವಗಳನ್ನು ಬೆಳಸಿಕೊಳ್ಳಬೇಕು, ವಿದ್ಯಾರ್ಥಿಗಳು ಉತ್ತಮ ಸಾಹಿತ್ಯಾತ್ಮಕ ಹವ್ಯಾಸ ಮತ್ತು ಚಿಂತಕರ ಜೀವನ ಶೈಲಿಯ ಬದುಕು ರೂಪಿಸಿಕೊಂಡಾಗ ಯಶಸ್ವಿ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಅಂತಹ ಶಿಕ್ಷಣ ಇಂತಹ ವಿದ್ಯಾಸಂಸ್ಥೆಯಲ್ಲಿ ಪಡೆಯುತ್ತಿರುವದು ನಿಮ್ಮ ಸುದೈವ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ರಬಕವಿಯ ಜನಪದ ಸಾಹಿತಿಗಳು ಮತ್ತು ಉಪನ್ಯಾಸಕರು ಶ್ರೀಕಾಂತ ಗುರುರಾಜ ಕೆಂದೂಳಿ ಮಾತನಾಡಿ ನಮ್ಮ ಗ್ರಾಮೀಣ ಬದುಕಿನ ಸಾಹಿತ್ಯವೇ ಜನಪದ ಸಾಹಿತ್ಯ ಅದರಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಮಾರ್ಗಗಳನ್ನು ತಿಳಿಸಿಕೊಟ್ಟಿದ್ದಾರೆ ಉತ್ತಮ ಬದುಕಿಗೆ ಶಿಕ್ಷಣ ಅಮೂಲ್ಯ ಸಂದೇಶವನ್ನು ನೀಡುತ್ತದೆ ನಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಬದುಕಿನ ಸ್ವಾರ್ಥಕತೆಯನ್ನು ಪಡೆಯುವುದು ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ಶ್ರದ್ದೆ ನಿಷ್ಟೆಯಿಂದ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ನಿಸಂದೇಹವಾಗಿ ಸಿಗುತ್ತದೆ ಪ್ರಾಮಾಣಿಕ ಅಧ್ಯಯನಕ್ಕೆ ವಿದ್ಯಾರ್ಥಿಗಳು ಪ್ರಯತ್ನ ಪಟ್ಟು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದರು.


ಕಾರ್ಯಕ್ರಮದಲ್ಲಿ ಕ್ರೀಡೆ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದ ಸಾಧಕರನ್ನು ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೂಡಲಗಿಯ ಶ್ರೀಮಹಾಲಕ್ಷ್ಮೀ ಅ.ಕೋ.ಆಫ್. ಕ್ರೆ. ಸೊ. ಲಿ. ನ ಉಪಾಧ್ಯಕ್ಷರಾದ ಡಾ. ಪ್ರಕಾಶ ನಿಡಗುಂದಿ ಕಮಲದಿನ್ನಿಯ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಪಾಟೀಲ ಮತ್ತು ಪ್ರಗತಿ ಪರ ರೈತರಾದ ಗಿರಿಗೌಡ ಪಾಟೀಲ ಹಾಜರಿದ್ದರು

ಕಾಲೇಜು ಪ್ರಾಚಾರ್ಯ ಸಂಜೀವ ವಾಲಿ ಸ್ವಾಗತಿಸಿದರು ಉಪನ್ಯಾಸಕರಾದ ಮಲ್ಲಪ್ಪ ಜಾಡರ & ಲಕ್ಷ್ಮೀ ಹಂದಿಗುಂದ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ