Breaking News
Home / Recent Posts / ಹಳ್ಳಿಯ ಸಂಸ್ಕøತಿ ಉಳಿಸುವಲ್ಲಿ ಜಾನಪದ ಜಾತ್ರೆಯ ಅಗತ್ಯವಿದೆ- ವಾಯ್.ಬಿ.ಕಳ್ಳಿಗುದ್ದಿ

ಹಳ್ಳಿಯ ಸಂಸ್ಕøತಿ ಉಳಿಸುವಲ್ಲಿ ಜಾನಪದ ಜಾತ್ರೆಯ ಅಗತ್ಯವಿದೆ- ವಾಯ್.ಬಿ.ಕಳ್ಳಿಗುದ್ದಿ

Spread the love

ಮೂಡಲಗಿ: “ ಬದಲಾದ ಇಂದಿನ ಕಾಲಘಟ್ಟದಲ್ಲಿ ನಾನಾ ಕಾರಣಗಳಿಂದ ನಮ್ಮ ಉಡುಗೆ, ತೊಡುಗೆ, ಸಂಪ್ರದಾಯ, ಆಚರಣೆ, ವಿವಿಧ ಕಲೆಗಳು ಅವನತಿಯತ್ತ ಸಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಜಾನಪದ ಜಾತ್ರೆಗಳ ಅಗತ್ಯತೆ ಇಂದು ತುಂಬಾ ಅಗತ್ಯವಿದೆ ಅವುಗಳನ್ನು ಪೋಷಿಸಿ ಬೆಳೆಸುವ ಕಾರ್ಯ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ” ಎಂದು    ಹಳ್ಳೂರ ಎಸ್. ಆರ್. ಸಂತಿ ಪದವಿ ಪೂರ್ವ ಕಾಲೇಜ್  ಸಮಾಜಶಾಸ್ತ್ರ ಉಪನ್ಯಾಸಕರು  ವಾಯ್.ಬಿ.ಕಳ್ಳಿಗುದ್ದಿ  ತಿಳಿಸಿದರು.

ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಹಾಗೂ ಸಾಂಸ್ಕøತಿಕ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ
ಜಾನಪದ ಜಾತ್ರೆ-2022 ಕಾರ್ಯಕ್ರಮ’ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ “ಹಳ್ಳಿಯ ಬದುಕು ಬಂಗಾರದ ಬದುಕು ಇಂದು ನಾವು ಆಧುನಿಕ ಸಂಸ್ಕøತಿಗೆ ಒಗ್ಗಿಕೊಂಡು ನಿಜವಾದ ಸಂಸ್ಕøತಿಯನ್ನು ಮರೆಯುತ್ತಿದ್ದೇವೆ. ಮುಂದಿನ ಜನಾಂಗಕ್ಕೆ ಜನವಾಣಿಯಾಗಿರುವ ಈ ಜಾನಪದ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯ ಹಮ್ಮಿಕೊಂಡ ಈ ಜಾನಪದ ಜಾತ್ರೆ ಕಾರ್ಯಕ್ರಮ ನಮ್ಮ ಮೂಡಲಗಿ ಕೀರ್ತಿಯನ್ನು ನಾಡಿನಾದ್ಯಂತ ಹಬ್ಬಿಸುತ್ತಿದ್ದು ಪ್ರತಿವರ್ಷವೂ ಈ ಕಾರ್ಯಕ್ರಮವು ಜರುಗಲಿ ಎಂದು ಕರೆ ನೀಡಿದರು.

ಅನ್ನ ನೀಡುವ ಭೂ ತಾಯಿಗೆ ರಾಶಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಎಲ್ಲರ ಸಹಕಾರದಿಂದ ಮಹಾವಿದ್ಯಾಲಯ ಪ್ರತಿವರ್ಷ ಮಾಡುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಮ್ಮ ನಾಡಿನ ಹೆಮ್ಮೆಯ ಜಾನಪದ ಕಲಾವಿದರಾದ ಶ್ರೀ ಈಶ್ವರಚಂದ್ರ ಬೆಟಗೇರಿ ಯವರು ಶ್ರೀ ಕೃಷ್ಣ ಪಾರಿಜಾತ ನಾಟಕದ ಕೊರವಂಜಿ ಸನ್ನಿವೇಶವನ್ನು ಅದ್ಭುತವಾಗಿ ಅಭಿನಯಿಸಿದರು. ಸ್ಥಳೀಯ ಮೂಡಲಗಿಯ ಜಾನಪದ ಕಲಾವಿದ ಚುಟುಕುಸಾಬ ಜಾತಗಾರ ಅವರು ಸಿದ್ಧಿ ಸೋಗು ಕಲೆಯನ್ನು ಪ್ರದರ್ಶಿಸಿದರು. ಅದೇ ರೀತಿ ದೇವರ ಕಲ್ಲೋಳಿಯ ಕರಡಿ ಮಜಲು ತಂಡ, ಹಾಗೂ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಾನಪದ ಕಲಾವಿದರು ಪುರವಂತಿಕೆ ಕಲೆಯನ್ನು ಪ್ರದರ್ಶಿಸಿದರು.
ಮಹಾವಿದ್ಯಾಲಯಕ್ಕೆ ಇಂದು ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಹಳ್ಳಿಯ ಬದುಕಿನ ದೇಸಿ ಉಡುಪುಗಳನ್ನು ಧರಿಸಿ ಆಗಮಿಸಿದ್ದರು ಜೊತೆಗೆ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀಧರ ಬೋಧ ಸ್ವಾಮೀಜಿಗಳು ಆಶೀರ್ವಚನ ನೀಡಿ “ನಮ್ಮ ಜನಾಂಗದ ಜೀವನಾಡಿಯೆಂದರೆ ಜಾನಪದ ಸಂಸ್ಕøತಿ. ಇಲ್ಲಿ ನೆರೆದಿರುವ ದೃಶ್ಯ ನೋಡಿದರೆ ಜಾನಪದವೇ ನಮ್ಮ ಉಸಿರಿನಲ್ಲಿ ಬೆರೆತಿದೆ. ಅವುಗಳನ್ನು ಉಳಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ವಿಭಾಗದ ಸಂಯೋಜಕರಾದ  ಬಿ.ಸಿ.. ಹೆಬ್ಬಾಳ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್, ಶ್ರೀಮತಿ ಶಿವಲೀಲಾ,  ಬಿ.ಎಸ್. ಕೆಸರಗೊಪ್ಪ, ವೀಣಾ ಮೂಗನೂರ, ಸುಮಿತ್ರಾ ಮಾಸ್ತಿ , ರಾಧಾ ಎಂ.ಎನ್, ಶ್ರೀಮತಿ ಗಾಯತ್ರಿ ಸಾಳೋಖೆ, ಚೇತನರಾಜ್ ಬಿ, ಡಾ. ರವಿ ಗಡದನ್ನವರ, ಶಿವಕುಮಾರ,  ಹನುಮಂತ ಕಾಂಬಳೆ, ಶ್ರೀಮತಿ ಶೀತಲ ತಳವಾರ , ಶಿವಾನಂದ ಚಂಡಕೆ,  ಮಹಾದೇವ ಪೋತರಾಜ  ಎ.ಜಿ.ಗಿರೆನ್ನವರ,  ಎನ್.ಬಿ.ಸಂಗ್ರೇಜಿಕೊಪ್ಪ ಶಿವು ಮುಗುಳಖೋಡ ಮುಂತಾದವರು ಭಾಗವಹಿಸಿದ್ದರು.

ಮಧ್ಯಾನ್ಹದ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮೊದಲಿಗೆ ಅತಿಥಿ ಮಹೋದಯರನ್ನು ಸಾರೋಟಿನಲ್ಲಿ ದೇವರ ಕಲ್ಲೋಳಿಯ ಕರಡಿ ಮಜಲು ಕಲಾಮೇಳದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.

ಕುಮಾರಿ ಗೀತಾ ಭೂಮಣ್ಣವರ ಸ್ವಾಗತಿಸಿದರು. ಕುಮಾರಿ ಭಾಗ್ಯಶ್ರೀ ಹಂದಿಗುಂದ ಹಾಗೂ ಶಿಲ್ಪಾ ಮುಗುಳಖೋಡ ನಿರೂಪಿಸಿದರು. ಕುಮಾರ ಪ್ರಶಾಂತ ಯರಗುದ್ರಿ ವಂದಿಸಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ