ಮೂಡಲಗಿ: ರಾಜ್ಯಕ್ಕೆ ಮಹಾರಾಷ್ಟçದ ಕೊರೋನಾ ಕಂಟಕ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಪಟ್ಟಣದ ಲಕ್ಷ್ಮಿ ನಗರ ಸೀಲ್ ಡೌನ್ ಮಾಡಬೇಕಾದ ಆತಂಕಕಾರಿ ಘಟನೆ ಪೋಲಿಸರ ಸಮಯ ಪ್ರಜ್ಞೆಯಿಂದ ತಪ್ಪಿದೆ.
ಸೋಮವಾರ ರಾತ್ರಿ ಇಲ್ಲಿಯ ಲಕ್ಷ್ಮಿ ನಗರದ(ಆಜಾದ ನಗರ) ಭಾಗದ 31ಜನ ಮಿನಿ ಲಾರಿಯಲ್ಲಿ ಮಹಾರಾಷ್ಟ್ರ ಗಡಿಯಿಂದ ಪಾಸ್, ಪರವಾನಿಗೆ, ತಪಾಸಣೆ ಇಲ್ಲದೆ ಕಳ್ಳ ಮಾರ್ಗದಿಂದ ಎಕಾಎಕಿ ರಾತ್ರಿ ಆಗಮಿಸುತ್ತಿದ್ದಾಗ ಪೋಲಿಸರ ಕೈಗೆ ಸಿಕ್ಕುಬಿದ್ದಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿ ಯಾದವಾಡ ವಸತಿ ಶಾಲೆಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಪ ವಯಸ್ಕರರನ್ನು ಹೊರತು ಪಡಿಸಿ 19 ಜನರ ಮೇಲೆ ಪೋಲಿಸ ಪ್ರಕರಣ ದಾಖಲಿಸಲಾಗಿದೆ ಘಟನಾ ಸ್ಥಳದಿಂದ ಕೇವಲ ಅರ್ದ ಕಿ.ಮಿ ಪ್ರಯಾಣಿಸಿದ್ದರೆ ಅವರ ವಾಸಸ್ಥಳ ಸೇರಿಕೊಳ್ಳುತ್ತಿದ್ದರು ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಪ್ರಕರಣದಲ್ಲಿ ಆರೋಪಿತರೆಲ್ಲರೂ ಮಹಾರಾಷ್ಟçದ ಮಿರಜದಿಂದ ಅಕ್ರಮವಾಗಿ ರಾಜ್ಯದ ಗಡಿ ಪ್ರವೇಸಿಸಿ ಮೂಡಲಗಿಗೆ ಬರುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.
ಇವರು ಉದ್ದೇಶ ಪೂರ್ವಕವಾಗಿ ನಿರ್ಲಕ್ಷತನದಿಂದ ಕೋವಿಡ್ 19 ಕೊರೋನಾ ವೈರಸ್ ಕುರಿತಾಗಿ ಯಾವುದೆ ಮುಂಜಾಗ್ರತಾ ಕ್ರಮ ವಹಿಸದೆ ಇದ್ದಲ್ಲಿ ರೋಗ ಹರಡುವ ಸಾದ್ಯತೆ ಇದೆ ಎಂದು ಗೊತ್ತಿದ್ದರೂ ಅಂತರ ರಾಜ್ಯ ಪ್ರಯಾಣ ಮಾಡುವ ಮೂಲಕ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ನಿರ್ಭಂದದ ನಿಯಮಗಳನ್ನು ಉಲ್ಲಂಘನೆ ಮಾಡಿದ ಬಗ್ಗೆ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪಿ.ಎಸ್.ಐ ಮಲ್ಲಿಕಾರ್ಜುನ ಸಿಂಧೂರ ತಿಳಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಶಿವಲಿಂಗ ಪಾಟೀಲ, ಎಲ್.ಎಚ್.ಕುಮಾರ, ಗೋಪಾಲ ಪಾಟೀಲ, ಅಜ್ಜಪ್ಪ ಕರಿಮಸಿ, ಶ್ರೀದೇವಿ ಭಜಂತ್ರಿ ವೈಧ್ಯಕೀಯ ತಪಾಸನೆ ನಡೆಸಿದರು.
ಸಿಪಿಐ ವೆಂಕಟೇಶ ಮುರನಾಳ, ಪಿಎಸ್‌ಐ ಮಲ್ಲಿಕಾರ್ಜುನ ಶಿಂಧೂರ, ಪೋಲಿಸ್ ಸಿಬ್ಬಂದಿಗಳಾದ ಎಸ್.ಬಿ.ಪೂಜೇರಿ, ಎಸ್.ಎಮ್.ಪಡಸಲಗಿ, ಎ.ಬಿ.ಗೌಡರ, ಎಸ್.ಕೆ.ಗುರನಗೌಡರ ಸ್ಥಳದಲ್ಲಿ ಇದ್ದರು.