Breaking News
Home / Recent Posts / ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದ್ರುಡವಾಗಿ ಇರಬೇಕಾದರೆ ದಿನನಿತ್ಯ ಆಟವಾಡಬೇಕು: ಸರ್ವೊತ್ತಮ ಜಾರಕಿಹೊಳಿ

ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದ್ರುಡವಾಗಿ ಇರಬೇಕಾದರೆ ದಿನನಿತ್ಯ ಆಟವಾಡಬೇಕು: ಸರ್ವೊತ್ತಮ ಜಾರಕಿಹೊಳಿ

Spread the love

ಮೂಡಲಗಿ:   ಮೈಸೂರ ದಸರಾ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ನಮ್ಮ ಭಾಗದ ಕ್ರೀಡಾ ಪಟುಗಳು ಆಡುವದು ಹೆಮ್ಮೆಯ ವಿಷಯ ಎಂದು ಬೆಳಗಾವಿ ಜಿಲ್ಲಾ ಕಬ್ಬಡ್ಡಿ ಅಮೆಚೋರ್ ಅಸೋಶಿಯನ್ ಅಧ್ಯಕ್ಷರಾದ ರಾಹುಲ ಜಾರಕಿಹೊಳಿ ಹೇಳಿದರು.

ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀದೇವಿ ರಂಗ ಮಂದಿರದ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಇವರುಗಳ ಆಶ್ರಯದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ದಸರಾ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಪ್ರಥಮ ಬಂದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದ್ರುಡವಾಗಿ ಇರಬೇಕಾದರೆ ದಿನನಿತ್ಯ ಆಟವಾಡಬೇಕು ಎಂದು ಹೇಳಿದರು. ಯುವ ನಾಯಕ ಸರ್ವೊತ್ತಮ ಜಾರಕಿಹೊಳಿ ಮಾತನಾಡಿ ಆಟದಲ್ಲಿ ಸೊಲು ಗೆಲವು ಒಂದು ನಾನ್ಯದ ಎರಡು ಮುಖಗಳಿದಂತೆ ಸೊತವರು ಕುಗ್ಗದೆ ಗೆದ್ದವರು ಹಿಗ್ಗದೆ ಕ್ರೀಡಾ ಮನೊಬಾವದಿಂದ ಆಟ ಆಡಬೇಕು ಎಂದು ಹೇಳಿದರು.

ಜಿಲ್ಲಾ ಅಮೆಚೋರ್ ಕಬ್ಬಡ್ಡಿ ಅಸೋಶಿಯನ್ ಪ್ರಧಾನ ಕಾರ್ಯದರ್ಶಿ ಸಿ ಎಸ್ ಬರಗಾಲಿ ಮಾತನಾಡಿ ಜಾರಕಿಹೊಳಿ ಸಹೊದರರ ಸಹಕಾದಿಂದ ಬೆಳಗಾವಿ ಕಬ್ಬಡ್ಡಿ ಅತ್ಯಂತ ಶಕ್ತಿ ಶಾಲಿಯಾಗಿ ಬೆಳಿಯುತ್ತಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬ ಆಟಗಾರರು ಪಡುದುಕೋಳಬೇಕು ಹಾಗೂ ಹಳ್ಳೂರ ಗ್ರಾಮದ ಎರಡು ನಕ್ಷತ್ರಳು ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮತ್ತು ಜಿಲ್ಲಾ ಯುವ ಪ್ರಶಸ್ತಿ ವಿಜೇತ ಬಸವರಾಜ ಹೊಸಮನಿ ಇಬ್ಬರು ಜೋಡಿ ಯುವ ಸಂಘಟಕರ ಅದ್ಬುತ ಕಾರ್ಯಕ್ರಮ ಮಾಡಿದ್ದಾರೆ ಇವರ ಕಾರ್ಯ ನಿಜವಾಗಲು ಶ್ಲಾಘನಿಯವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ನಮ್ಮ ಭಾಗದ ಶಾಸಕರು ಹಾಗೂ ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿಯವರ ಸತತ ಪ್ರಯತ್ನದಿಂದ ನಮ್ಮೂರಿನಲ್ಲಿ ಇಂತಹ ದೊಡ್ಡ ಬೆಳಗಾವಿ

ವಿಭಾದ ದಸರಾ ಕ್ರೀಡಾಕೂಟ ಆಯೊಜಿಸಲು ಸಾದ್ಯವಾಗಿದೆ ಎಂದು ಮುಕ್ತ ಕಂಟದಿಂದ ಗುಣಗಾನ ಮಾಡಿದರು. ಹಳ್ಳೂರ ಗ್ರಾಮ ಪಂಚಾಯತ ಕಾರ್ಯಲಯದಿಂದ ಪ್ರಥಮದಲ್ಲಿ ಸಕಲ ವಾದ್ಯಗಳೊಂದಿಗೆ ಆಟಗಾರರ ಭವ್ಯ ಮೇರವಣಿಗೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಣ ಕತ್ತಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಜಿನೇಶ್ವರ ಪಡನಾಡ ಮೂಡಲಗಿ ಪಿ ಎಸ್ ಐ ಹಾಲಪ್ಪಾ ಬಾಲದಂಡಿ ಜಿ ಪಂ ಮಾಜಿ ಸದಸ್ಯರಾದ ಬೀಮಶಿ ಮಗದುಮ್ಮ ಹಣಮಂತ ತೇರದಾಳ ಶಾಸಕರ ಆಪ್ತ ಸಹಾಯಕರಾದ ನಿಂಗಪ್ಪ ಕುರಬೇಟ, ಮಲ್ಲಿಕಾರ್ಜುನ್ ಕಬ್ಬೂರ ,ಮುರಿಗೇಪ್ಪಾ ಮಾಲಗಾರ, ಬಸವರಾಜ ಹೊಸಮನಿ, ಸುಭಾಸ ಪಾಟೀಲ, ಮಾದೇವ ಗೋಡೆರ, ಚನಗೌಡ ಪಾಟೀಲ, ರಮೇಶ ಹರಿಜನ, ಸಂಜಿವಕುಮಾರ ನಾಯಕ, ಬಸವರಾಜ ಜಕ್ಕನ್ನವರ, ಭಗವಂತ ಛಬ್ಬಿ, ಗಜಾನನ ಮಿರ್ಜಿ, ಸಲಿಮ್ ಮುಲ್ತಾನಿ, ಗುಳಪ್ಪ ವಿಜಯನಗರ, ರಾಮಚಂದ್ರ ಕಾಂಬಳೆ ಹಾಗೂ ಸಂಘಟಕರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ