Breaking News
Home / Recent Posts / ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಏರ್ಪಡಿಸಿದ್ದ 70 ನೇ ಅನ್ನದಾಸೋಹ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಏರ್ಪಡಿಸಿದ್ದ 70 ನೇ ಅನ್ನದಾಸೋಹ

Spread the love

ಅನ್ನದಾನವು ಶ್ರೇಷ್ಠ ದಾನವಾಗಿದೆ

ಮೂಡಲಗಿ: ‘ಅನ್ನದಾನವು ಶ್ರೇಷ್ಠ ದಾನವಾಗಿದೆ. ಅನ್ನದಾನವನ್ನು ಮಾಡುವ ಮೂಲಕ ಜೀವನದಲ್ಲಿ ಸಂತೃಪ್ತಿಯ ಭಾವ ವ್ಯಕ್ತವಾಗುತ್ತದೆ’ ಎಂದು ಜಾನಪಾದ ಕಲಾವಿದ ಶಬ್ಬೀರ ಡಾಂಗೆ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಏರ್ಪಡಿಸಿದ್ದ 70ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಲಯನ್ಸ್ ಕ್ಲಬ್‍ವು ಮಾಡುತ್ತಿರುವ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಲಯನ್ಸ್ ಕ್ಲಬ್‍ದಿಂದ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳದಲ್ಲಿ ಎರಡು ದಿನ ಅನ್ನದಾಸೋಹವನ್ನು ಮಾಡಿಕೊಂಡ ಬರಲಾಗಿದೆ. ಇದರಿಂದ ಜಿಲ್ಲೆಯ ಲಯನ್ಸ್ ಕ್ಲಬ್‍ದಿಂದ ಸಹ ಪ್ರಶಂಸೆ ದೊರೆತಿದೆ ಎಂದರು.
ಅನ್ನದಾಸೋಹಿ ಶ್ರೀಶೈಲ್ ಪ್ರಕಾಶ ಲೋಕನ್ನವರ ಅವರನ್ನು ಅಭಿನಂದಿಸಿದರು.
ಲಯನ್ಸ್ ಸದಸ್ಯರಾದ ಎನ್.ಟಿ. ಪಿರೋಜಿ, ಡಾ.ಎಸ್.ಎಸ್. ಪಾಟೀಲ, ಪುಲಕೇಶ ಸೋನವಾಲಕರ, ಸಂಜಯ ಮೋಕಾಶಿ, ಶಿವಾನಂದ ಕಿತ್ತೂರ, ಸಂಗಮೇಶ ಕೌಜಲಗಿ, ವೆಂಕಟೇಶ ಸೋನವಾಲಕರ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಗಿರೀಶ ಆಸಂಗಿ ಇದ್ದರು.
350ಕ್ಕೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಮತ್ತು ಪಾಲಕರು ಅನದಾಸೋಹದಲ್ಲಿ ಭಾಗವಹಿಸಿದ್ದರು.
ಡಾ. ಸಂಜಯ ಶಿಂಧಿಹಟ್ಟಿ ನಿರೂಪಿಸಿದರು, ಸುಪ್ರೀತ ಸೋನವಾಲಕರ ವಂದಿಸಿದರು.


Spread the love

About inmudalgi

Check Also

ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

Spread the love ಮೂಡಲಗಿ : ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ