Breaking News
Home / Recent Posts / ತುಕ್ಕಾನಟ್ಟಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಕೋಟಿಕಂಠ ಗಾಯನ

ತುಕ್ಕಾನಟ್ಟಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಕೋಟಿಕಂಠ ಗಾಯನ

Spread the love

ತುಕ್ಕಾನಟ್ಟಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಕೋಟಿಕಂಠ ಗಾಯನ

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರದಂದು ಕೋಟಿ ಕಂಠಗಾಯನ ಕಾರ್ಯಕ್ರಮ ಜರುಗಿತು.
ಈ ಸಮಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಮಾತನಾಡಿ, ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವ ನಮ್ಮ ಸಂಸ್ಕøತಿ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಗೌರವ ಮೂಡಿಸುವ ಗೀತೆ ಮತ್ತು ಕವನಗಳನ್ನು ನಮ್ಮ ನಾಡಿನ ಹೆಮ್ಮೆಯ ಕವಿಗಳು ಇವುಗಳನ್ನು ಹಾಡುವದರಿಂದ ನಮ್ಮಲ್ಲಿ ನಾಡು ನುಡಿಯ ಬಗ್ಗೆ ಚೈತನ್ಯ ಅಭಿಮಾನ ಮೂಡಿಸುತ್ತÀದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು, ಕನ್ನಡ ಬಾಷೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ ನಾಡು ಗಂಗ ಕದಂಭ ರಾಷ್ಟ್ರಕೂಟ ಹೊಯ್ಸಳ ಚಾಲುಕ್ಯರಂತಹ ಅಪ್ರತಿಮ ರಾಜರನ್ನು ಕಂಡ ನಮ್ಮ ಹೆಮ್ಮೆಯ ನಾಡು ಕಲೆ ಸಾಹಿತ್ಯ ಸಂಸ್ಕøತಿಗೆ ಹೆಸರುವಾಸಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಭಿವೃಧ್ಧಿ ಅಧಿಕಾರಿ ವೀರಭದ್ರ ಗುಂಡಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಬಿ. ಪಾಶ್ಚಾಪುರೆ ಶಿಕ್ಷಕರಾದ ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ, ಶೀಲಾ ಕುಲಕರ್ಣಿ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಜ್ಯೋತಿ ಉಪ್ಪಾರ, ಮಹಾದೇವ ಗೋಮಾಡಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ರೂಪಾ ಗದಾಡಿ, ಶಿವಲೀಲಾ ಹಣಮನ್ನವರ, ಖಾತೂನ ನದಾಫ, ಹೊಳೆಪ್ಪ ಗದಾಡಿ ಉಪಸ್ಥಿತರಿದ್ದರು.
ಎಲ್ಲಾ ವಿದ್ಯಾರ್ಥಿಗಳು ಕನ್ನಡನಾಡಿನ ಗಾಯನ ಕಾಂiÀರ್iಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
 


Spread the love

About inmudalgi

Check Also

ಮನರಂಜಿಸಿದ ಸಂಗ್ಯಾಬಾಳ್ಯಾ ಸಾಮಾಜಿಕ ಬೈಲಾಟ

Spread the loveಮನರಂಜಿಸಿದ ಸಂಗ್ಯಾಬಾಳ್ಯಾ ಸಾಮಾಜಿಕ ಬೈಲಾಟ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಪ್ರಯುಕ್ತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ