ಪೂರ್ಣಿಮಾಗೆ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ
ಮೂಡಲಗಿ: ಇಲ್ಲಿಯ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪೂರ್ಣಿಮಾ ಯಾಲಿಗಾರ ಅವರಿಗೆ ಪುತ್ತೂರಿನ ಖಿದ್ಮ ಫೌಂಡೇಶನದವರು ಕೊಡಮಾಡುವ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾ. 5ರಂದು ಧಾರವಾಡದ ರಂಗಾಯಣದಲ್ಲಿ ಜರುಗಲಿರುವ ಖಿದ್ಮ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ಪೂರ್ಣಿಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
IN MUDALGI Latest Kannada News