ಮೂಡಲಗಿ: ಗುರ್ಲಾಪೂರ ಕ್ರಾಸ್ ಬಳಿ ಇರುವ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಡಾಂಬರೀಕರಣ ನಡೆಯುತ್ತಿದ್ದು, ಸ್ಥಳೀಯ ಸಾರ್ವಜನಿಕರು ಕಾಮಗಾರಿ ತಡೆದು ರಸ್ತೆ ಎರಡು ಬದಿಯಲ್ಲಿರುವ ಚರಂಡಿವರೆಗೆ ಡಾಂಬರೀಕರಣ ಆಗಬೇಕು ಎಂದು ಆಗ್ರಹಿಸಿ, ಗೋಕಾಕ ವಿಭಾಗದ ಕೆಎಸ್‍ಎಚ್‍ಐಪಿ ಎಇಇ ವಾಮನ್ ಸೂರ್ಯವಂಶಿ ಅವರಿಗೆ ಮನವಿ ನೀಡಿದರು.
ಈ ವೇಳೆಯಲ್ಲಿ ಸ್ಥಳೀಯ ನಿವಾಸಿ ಸದಾಶಿವ ನೇಮಗೌಡರ ಮಾತನಾಡಿ, ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ದಿನದಿಂದ ಸಹ ಅಧಿಕಾರಿಗಳಿಗೆ ಡಾಂಬರೀಕರಣ ಮಾಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದು, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮೂಡಲಗಿ ತಾಲೂಕಾ ಪಟ್ಟಣಕ್ಕೆ ಹೋಗಲು ಪ್ರಮುಖ ರಸ್ತೆಯಾಗಿರುವ ಗುರ್ಲಾಪೂರ ಕ್ರಾಸ್ ದಲ್ಲಿ ಪ್ರತಿನಿತ್ಯ ಸಾವಿರಾರೂ ವಾಹನಗಳು, ಶಾಲಾ ಮಕ್ಕಳು ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅಪಘಾತಗಳು ಸಹ ಸಂಭವಿಸಿವೆ. ಆದರಿಂದ ಹೆದ್ದಾರಿ ಅಧಿಕಾರಿಗಳು ಎಚ್ಚೆತುಕೊಂಡು ರಸ್ತೆ ಎರಡು ಬದಿಗಳ ಚರಂಡಿಗಳವರೆಗೂ ಡಾಂಬರೀಕರಣ ಮಾಡಬೇಕು ಎಂದರು.
ರಸ್ತೆ ಕಾಮಗಾರಿ ತಡೆ ಹಿಡಿದಿರುವುದರಿಂದ ಸ್ವಲ್ಪ ಕಾಲ ವಾಹನಗಳ ಸಂಚಾರ ಸ್ಥಗಿತವಾಗಿದರಿಂದ ಮಧ್ಯ ಪ್ರವೇಶಿಸಿದ ಪಿಎಸ್‍ಐ ಎಚ್ ವೈ ಬಾಲದಂಡಿ, ಕೆಲ ಕಾಲ ಸಾರ್ವಜನಿಕರ ಮನವೊಲಿಸಿ ಹೆದ್ದಾರಿ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರವಾಗಿ ರಸ್ತೆಯ ಎರಡು ಬದಿಯಲ್ಲಿರುವ ಚರಂಡಿವರೆಗೆ ಡಾಂಬರೀಕರಣ ಮಾಡುವಂತೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ರೇವಪ್ಪ ಗಾಣಿಗೇರಿ, ಮಹಾದೇವ ನಡುವಿನಕೇರಿ, ಹಣಮಂತ ಮೋಶಿ, ಸುರೇಶ ಪಾಟೀಲ, ರೇವಪ್ಪ ಸತ್ತಿಗೇರಿ, ಮಲ್ಲಿಕಾರ್ಜುನ ಮುಗಳೋಖಡ, ಮಲ್ಲು ಲೋಕನ್ನವರ, ಬಸವರಾಜ ಯಲಜೇರಗಿ, ಮಲ್ಲಪ್ಪ ನೇಮಗೌಡ, ಮಹಾಲಿಂಗ ನೇಮಗೌಡ, ಬಸು ಕೋಣಿ, ಮಲ್ಲು ಬೆಳವಿ ಹಾಗೂ ಇತರರಿದ್ದರು.