Breaking News
Home / Recent Posts / ಜಾತಿಧರ್ಮಗಳನ್ನು ತರದೇ ಎಲ್ಲರೂ ಒಂದಾಗಿ ಸಮಾಜಹಿತವನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚನೆ ಮಾಡಬೇಕು – ಎಲ್. ಎಸ್. ಶಾಸ್ತ್ರಿ

ಜಾತಿಧರ್ಮಗಳನ್ನು ತರದೇ ಎಲ್ಲರೂ ಒಂದಾಗಿ ಸಮಾಜಹಿತವನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚನೆ ಮಾಡಬೇಕು – ಎಲ್. ಎಸ್. ಶಾಸ್ತ್ರಿ

Spread the love

ಮೂಡಲಗಿ: ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಈಗ 25 ನೆಯ ವರ್ಷದಲ್ಲಿ ಮುನ್ನಡೆದಿದ್ದು ಸಂಸ್ಥೆಯ ಬೆಳ್ಳಿಹಬ್ಬದ ನೆನಪಿನಲ್ಲಿ ಪ್ರತಿ ವರ್ಷ ಉತ್ತಮ ತಾಲೂಕಾ ಘಟಕಕ್ಕೆ ಪ್ರಶಸ್ತಿ ನೀಡಿ ಪೆÇ್ರೀತ್ಸಾಹಿಸಲಾಗುವುದು.ಎಂದು ಜಿಲ್ಲಾ ಚುಸಾಪ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಜರುಗಿದ ಚುಟುಕು ಸಾಹಿತ್ಯ ಪರಿಷತ್ತಿನ ಮೂಡಲಗಿ ತಾಲೂಕಾ ನೂತನ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ವಹಿಸಿ ಮಾತನಾಡಿದ ಅವರು ಜಿಲ್ಲಾ ಚುಸಾಪ ಬೆಳ್ಳಿಹಬ್ಬವನ್ನು ಎರಡು ದಿವಸಗಳ ಕಾಲ ರಾಜ್ಯ ಮಟ್ಟದಲ್ಲಿ ಆಚರಿಸಲಾಗುವುದಲ್ಲದೆ ಸ್ಮರಣ ಸಂಚಿಕೆ ಮತ್ತು ಪ್ರಾತಿನಿಧಿಕ ಜಿಲ್ಲಾ ಚುಟುಕು ಸಂಕಲನ ಹೊರತರಲಾಗುವುದೆಂದು ತಿಳಿಸಿದರು.
ಹೊಸದಾಗಿ ಚುಟುಕು ಬರೆಯುವವರಿಗಾಗಿ ಚುಟುಕು ತರಬೇತಿ ಕಾವ್ಯ ಕಮ್ಮಟವನ್ನು ಏರ್ಪಡಿಸಿ ಕಾವ್ಯದ ಗುಣಲಕ್ಷಣಗಳನ್ನು ತಿಳಿಸುವ ಕೆಲಸ ಆಗಬೇಕು ಎಂದ ಶಾಸ್ತ್ರಿಯವರು, ಸಾಹಿತ್ಯದಲ್ಲಿ ಜಾತಿಧರ್ಮಗಳನ್ನು ತರದೇ ಎಲ್ಲರೂ ಒಂದಾಗಿ ಸಮಾಜಹಿತವನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚನೆ ಮಾಡಬೇಕೆಂದು ಕರೆಯಿತ್ತರು.
ಚಿದಾನಂದ ಹೂಗಾರ ಅವರ ಉತ್ಸಾಹಿ ಕಾರ್ಯ ಬಳಗ ಉತ್ತಮವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಲಿ ಎಂದು ಹಾರೈಸಿದ ಅವರು ಸಂಸ್ಥೆಯೂ ಒಂದು ಸಂಸಾರ ಇದ್ದ ಹಾಗೆ. ಅಲ್ಲಿ ಯಾವುದೇ ನೆಪ ಹೇಳದೇ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ನಿಷ್ಕ್ರಿಯ ಸಮಿತಿಗಳನ್ನು ರದ್ದುಗೊಳಿಸಲಾಗುವುದು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಡಾ.ಸಿ.ಕೆ.ಜೋರಾಪುರ, ಪ್ರ. ಕಾರ್ಯದರ್ಶಿ ಬಸವರಾಜ ಗಾರ್ಗಿ, ಉಪಾಧ್ಯಕ್ಷ ಆನಂದ ಪುರಾಣಿಕ ಮಾತನಾಡಿ ಮೂಡಲಗಿ ತಾಲೂಕಾ ಘಟಕ ಕ್ಕೆ ಶುಭ ಹಾರೈಸಿದರು.
ತಾಲುಕಾ ಅಧ್ಯಕ್ಷ ಚಿದಾನಂದ ಹೂಗಾರ ಮಾತನಾಡಿ, ಜಿಲ್ಲಾ ಸಮಿತಿಯ ನಿರ್ದೇಶನದಂತೆ ತಮ್ಮ ತಾಲೂಕಾ ಘಟಕವು ನಿರಂತರ ಚಟುವಟಿಕೆಗಳನ್ನು ನಡೆಸುವುದಾಗಿ ತಿಳಿಸಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾದ ಎಸ್.ಆರ್.ಸೋನವಾಲಕರ, ಆನಂದ ಪುರಾಣಿಕ, ಪ್ರಾಚಾರ್ಯ ಸಂಗಮೇಶ ಗುಜಗೊಂಡ, ಕಸಾಪ ಗೋಕಾಕ ತಾಲೂಕಾ ಅಧ್ಯಕ್ಷ ಸಂಜಯ ಶಿಂದಿಹಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ , ಡಾ. ಮಹಾದೇವ ಜಿಡ್ಡಿಮನಿ, ಸಿದ್ರಾಮ ದ್ಯಾಗಾನಟ್ಟಿ, ಗೋಕಾಕ ಚುಸಾಪ ಅಧ್ಯಕ್ಷ ಜಯಾನಂದ ಮಾದರ, ಹಿರಿಯ ಸಾಹಿತಿ ಪೆÇ್ರ. ಶಿವಾನಂದ ಬೆಳಕೂಡ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮಾ ಯಲಿಗಾರ ಅವರ “ನಿರ್ಮಲ ಕಾವ್ಯ” ಕವನ ಸಂಕಲನವನ್ನು ಎಲ್. ಎಸ್. ಶಾಸ್ತ್ರಿ ಬಿಡುಗಡೆ ಮಾಡಿದರು.
ಶಿವರಾಜ ಕಾಂಬಳೆ ಪ್ರಾರ್ಥಿಸಿದರು, ದುರ್ಗಪ್ಪ ದಾಸನ್ನವರ ಸ್ವಾಗತಿಸಿದರು, ಪ್ರಕಾಶ ಮೇತ್ರಿ ನಿರೂಪಿಸಿದರು.


Spread the love

About inmudalgi

Check Also

ಗಜಾನನ ಮನ್ನಿಕೇರಿ ಶಿಕ್ಷಣ ಇಲಾಖೆಯ ಗೌರವ ಹೆಚ್ಚಿಸಿದ್ದರು’ – ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ 

Spread the loveಗಜಾನನ ಮನ್ನಿಕೇರಿ ಅವರಿಗೆ ‘ಅಕ್ಷರದೊಳಗಿನ ನಕ್ಷತ್ರ’ ಅಭಿನಂದನಾ ಗಂಥ ಅರ್ಪಣೆ ‘ಗಜಾನನ ಮನ್ನಿಕೇರಿ ಶಿಕ್ಷಣ ಇಲಾಖೆಯ ಗೌರವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ