Breaking News
Home / Recent Posts / ಯಾರು ಕೂಡಾ ಮತದಾನದಿಂದ ಮತ್ತು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು – ತಹಶೀಲ್ದಾರ ಮಹಾದೇವ ಸನಮುರಿ

ಯಾರು ಕೂಡಾ ಮತದಾನದಿಂದ ಮತ್ತು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು – ತಹಶೀಲ್ದಾರ ಮಹಾದೇವ ಸನಮುರಿ

Spread the love

ಮೂಡಲಗಿ : ಮತದಾರರು ಪ್ರಜಾಪ್ರಭುತ್ವದ ವ್ಯವಸ್ಥೆಯ ನಿರ್ಮಾಪಕರು ಹಾಗಾಗಿ ಯಾರು ಕೂಡಾ ಮತದಾನದಿಂದ ಮತ್ತು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ತಹಶೀಲ್ದಾರ ಮಹಾದೇವ ಸನಮುರಿ ಹೇಳಿದರು.
ರವಿವಾರದಂದು ಸಮೀಪದ ಗುರ್ಲಾಪೂರ ಕ್ರಾಸ್ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಬಸ್ ನಿಲ್ದಾಣದಲ್ಲಿ ಮತದಾರ ನೋಂದಣಿ ಹಾಗೂ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರೀಷ್ಕರಣೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ಡಿಸೆಂಬರ 9ರವರೆಗೆ ಪರೀಷ್ಕರಣೆಗೆ ಅವಕಾಶವಿದ್ದು, ಅರ್ಹ ಹೊಸ ಮತದಾರರು ನಿಗದಿತ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಳ್ಳಬಹುದು. ಜೊತೆಗೆ ಪೋಟೋ ಬದಲಾವಣೆ, ವಿಳಾಸ ಬದಲಾವಣೆ ಸೇರಿ ಎಲ್ಲಾ ರೀತಿಯ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಇಒ ಅಜೀತ ಮನ್ನಿಕೇರಿ, ತಾಪಂ ಎಡಿ ಸಂಗಮೇಶ ರೋಡನ್ನವರ, ತಹಶೀಲ್ದಾರ ಕಚೇರಿಯ ಸಿಬ್ಬಂಧಿಗಳಾದ ಪಿ ಎಸ್ ಕುಂಬಾರ, ರಾಕೇಶ ಢವಳೇಶ್ವರ, ದುಂಡಪ್ಪ ಗೋಪಾಳಿ ಹಾಗೂ ಸಾರ್ವಜನಿಕರು ಇದ್ದರು.


Spread the love

About inmudalgi

Check Also

ಗಜಾನನ ಮನ್ನಿಕೇರಿ ಶಿಕ್ಷಣ ಇಲಾಖೆಯ ಗೌರವ ಹೆಚ್ಚಿಸಿದ್ದರು’ – ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ 

Spread the loveಗಜಾನನ ಮನ್ನಿಕೇರಿ ಅವರಿಗೆ ‘ಅಕ್ಷರದೊಳಗಿನ ನಕ್ಷತ್ರ’ ಅಭಿನಂದನಾ ಗಂಥ ಅರ್ಪಣೆ ‘ಗಜಾನನ ಮನ್ನಿಕೇರಿ ಶಿಕ್ಷಣ ಇಲಾಖೆಯ ಗೌರವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ