Breaking News
Home / Recent Posts / ಸಿದ್ಧೇಶ್ವರ ಸ್ವಾಮಿಗಳು ಯುಗ ಕಂಡ ಮಹಾನ ಸಂತ – ಪೂಜ್ಯ ಡಾ. ಶ್ರದ್ಧಾನಂದ ಸ್ವಾಮಿಗಳು

ಸಿದ್ಧೇಶ್ವರ ಸ್ವಾಮಿಗಳು ಯುಗ ಕಂಡ ಮಹಾನ ಸಂತ – ಪೂಜ್ಯ ಡಾ. ಶ್ರದ್ಧಾನಂದ ಸ್ವಾಮಿಗಳು

Spread the love

ಮೂಡಲಗಿಯ ಶಿಕ್ಷಣ ಸಂಸ್ಥೆಯ ಕಲ್ಮೇಶ್ವರ ಸಭಾಭವನದಲ್ಲಿ ಲೇಖಕ ಬಾಲಶೇಖರ ಬಂದಿ ಸಂಪಾದಿಸಿದ ಜ್ಞಾನಗಂಧ ಗ್ರಂಥವನ್ನು ಸಾಹಿತಿ ಪ್ರೊ. ಜಯವಂತ ಕಾಡದೇವರ ಲೋಕಾರ್ಪಣೆಗೊಳಿಸಿದರು. ಸದಲಗಾದ ಶ್ರದ್ಧಾನಂದ ಸ್ವಾಮಿಗಳು ಮತ್ತಿತರರು ಚಿತ್ರದಲ್ಲಿ ಇರುವರು.

‘ಜ್ಞಾನಗಂಧ’ ಗ್ರಂಥ ಬಿಡುಗಡೆ

ಸಿದ್ಧೇಶ್ವರ ಸ್ವಾಮಿಗಳು ಯುಗ ಕಂಡ ಮಹಾನ ಸಂತ

ಮೂಡಲಗಿ: ‘ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು ಈ ಯುಗ ಕಂಡ ಮಹಾನ ಸಂತರಾಗಿದ್ದರು’ ಎಂದು ಸದಲಗಾದ ಶ್ರೀ ಶಿವಾನಂದ ಗೀತಾಶ್ರಮದ ಪೂಜ್ಯ ಡಾ. ಶ್ರದ್ಧಾನಂದ ಸ್ವಾಮಿಗಳು ಹೇಳಿದರು.
ಮೂಡಲಗಿಯ ಎಸ್‍ಎಸ್‍ಆರ್ ಪ್ರೌಢ ಶಾಲೆಯ ಕಲ್ಮೇಶ್ವರಬೋಧ ಸಭಾಭವನದಲ್ಲಿ ಪಂಚಾಕ್ಷರಿ ಪ್ರಕಾಶನದಿಂದ ಪ್ರಕಟವಾಗಿರುವ ಲೇಖಕ ಬಾಲಶೇಖರ ಬಂದಿ ಅವರ ಸಂಪಾದನೆಯ ಜ್ಞಾನಗಂಧ ಗ್ರಂಥದ ಬಿಡುಗಡೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ನಿಜವಾದ ಜ್ಞಾನಿಗಳು ತಮ್ಮ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಅಂಥ ಅಪರೂಪದ ಸಂತರು, ಜ್ಞಾನಯೋಗಿಗಳ ಸಿದ್ಧೇಶ್ವರ ಸ್ವಾಮಿಗಳಾಗಿದ್ದರು ಎಂದರು.
ಜ್ಞಾನ ಎಂಬುದು ಸಾಗರವಿದ್ದಂತೆ. ಜ್ಞಾನಕ್ಕೆ ಸೀಮೆ ಇಲ್ಲ. ಸಾಗರದಂತ ಜ್ಞಾನ ಸಂಪತ್ತಿನಲ್ಲಿ ಸಾಧ್ಯವಿದ್ದಷ್ಟು ಪಡೆದುಕೊಳ್ಳುವುದು ಮನುಷ್ಯನ ಸಾಧನೆಗೆ ಸಾಧನವಾಗುತ್ತದೆ ಮತ್ತು ಬದುಕು ಸಾರ್ಥಕವೆನಿಸುತ್ತದೆ. ಜನಮಾನಸದಲ್ಲಿ ಸಿದ್ಧೇಶ್ವರ ಶ್ರೀಗಳು ಜ್ಞಾನ ಬಿತ್ತಿದ ಮಹಾಪುರುಷ ಎಂದು ಬಣ್ಣಿಸಿದರು.
ಇನ್ನೊಬ್ಬರ ಮಾತುಗಳನ್ನು ಬರೆಯುವುದು ಜವಾಬ್ದಾರಿಯ ಕೆಲಸವಾಗಿದ್ದು ಪರಕಾಯ ಪ್ರವೇಶವಾಗುವ ಮೂಲಕ ಬರವಣಿಗೆಯ ಮೌಲ್ಯ ಬರುತ್ತದೆ. ಬಾಲಶೇಖರ ಬಂದಿ ಅವರು ಸಿದ್ಧೇಶ್ವರ ಸ್ವಾಮಿಗಳ ಚಿಂತನೆಗಳನ್ನು ಧ್ಯಾನಾಸಕ್ತಿಯಿಂದ ಜ್ಞಾನಗಂಧ ಗ್ರಂಥದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.
ಕೃತಿ ಕುರಿತು ಮಾತನಾಡಿದ ಗೋಕಾದ ಜೆಸ್‍ಎಸ್ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಾಹಿತ್ಯ ಚಿಂತಕ ಪ್ರೊ. ಗಂಗಾಧರ ಮಳಗಿ ಅವರು ಮಾತನಾಡಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳ ಚಿಂತನೆಗಳು ಸೂರ್ಯಚಂದ್ರ ಇರುವವರೆಗೆ ಸರ್ವಕಾಲಿಕವಾಗಿ ಇರುತ್ತವೆ ಎಂದರು.
ಬರವಣಿಗೆ ಮತ್ತು ಸಂಪಾದನೆಯ ಕಾರ್ಯವು ಸುಲಭದ ಕಾರ್ಯವಲ್ಲ. ಭಾಷೆ ಮತ್ತು ವ್ಯಾಕರಣ ಪ್ರಭುದ್ದತೆಯ ಅವಶ್ಯವಿದೆ. ಗ್ರಂಥದ ಸಂಪಾದಕ ಬಾಲಶೇಖರ ಬಂದಿ ಪೂಜ್ಯರ ಮಾತುಗಳಿಗೆ ಎಲ್ಲಿಯೂ ಚ್ಯುತಿ ಬಾರದಂತೆ ಅಂಥ ಕಾರ್ಯವನ್ನು ಮಾಡಿದ್ದಾರೆ ಎಂದರು.
ಗ್ರಂಥವನ್ನು ಬಿಡುಗಡೆ ಮಾಡಿದ ಬನಹಟ್ಟಿಯ ಸಾಹಿತಿ ಪ್ರೊ ಜಯವಂತ ಕಾಡದೇವರ ಮಾತನಾಡಿ ಸಿದ್ಧೇಶ್ವರ ಸ್ವಾಮಿಗಳು ಮಾತು ಎಂದರೆ ಮುತ್ತು ರತ್ನಗಳು ಇದ್ದಂತೆ. ಅಂಥ ಪೂಜ್ಯ ಮಾತುಗಳನ್ನು ಒಳಗೊಂಡಿರುವ ಜ್ಞಾನಗಂಧ ಗ್ರಂಥವು ಎಲ್ಲರೂ ಓದುವಂತ ಗ್ರಂಥವಾಗಿದೆ. ಮೈಮನವನ್ನು ಸ್ವಚ್ಛಮಾಡಿಕೊಂಡು ಓದುವಂತ ಗ್ರಂಥವಾಗಿದೆ ಎಂದರು.
ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ಸಿದ್ದೇಶ್ವರ ಸ್ವಾಮಿಗಳು ಶ್ರದ್ಧೆ, ಶಾಂತಿ, ಪ್ರಕೃತಿ ಮತ್ತು ಪುಸ್ತಕಗಳನ್ನು ಪ್ರೀತಿಸುತ್ತಿದ್ದರು. ತಮಗೆ ಗೊತ್ತಿರದ ವಿಷಯಗಳನ್ನು, ಸಂಗತಿಗಳನ್ನು ತಿಳಿದುಕೊಳ್ಳುವ ಹಂಬಲ ಅವರಲ್ಲಿತ್ತು. ಅಂಥ ಅಪರೂಪದ ಪೂಜ್ಯರ ಮಾತು, ನೆನಪುಗಳನ್ನು ಮೆಲುಕು ಹಾಕುವಂತೆ ಜ್ಞಾನಗಂಧ ಗ್ರಂಥವಾಗಿದೆ ಎಂದರು.
ಮೂಡಲಗಿ ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳ ಮಾತು ದೇವವಾಣಿಯಾಗಿತ್ತು. ಸುಂದರ ಬದುಕಿಗಾಗಿ ಅವರ ಮಾತುಗಳು ದಿಕ್ಸೂಚಿಯಾಗಿವೆ. ಜ್ಞಾನಗಂಧ ಪುಸ್ತಕವನ್ನು ಓದುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ ಶಿಕ್ಷಣ ಸಂಸ್ಥೆಯಲ್ಲಿ ಜ್ಞಾನಗಂಧ ಗ್ರಂಥದ ಬಿಡುಗಡೆ ಮಾಡುತ್ತಿರುವುದು ನಾವೆಲ್ಲ ಸುದೈವಿಗಳು. ಇಂಥ ಪವಿತ್ರ ಪುಸ್ತಕವನ್ನು ನಾವೆಲ್ಲ ಓದುವುದು ಅವಶ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಭಾಗವಹಿಸಿದ್ದರು.
ಸಾನ್ನಿಧ್ಯವಹಿಸಿದ್ದ ಸುಣಧೋಳಿಯ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು.
ಶಿವಪುತ್ರಯ್ಯ ಮಠಪತಿ, ಪ್ರೊ. ಮಲ್ಲಿಕಾರ್ಜನ ಹುಲಗಬಾಳಿ, ವೈ.ಬಿ. ಕೊರಡೂರ, ಪ್ರೊ. ಗುಣಕಿ, ಪ್ರೊ. ಎಸ್.ಎಂ. ಕಮದಾಳ, ಹಣಮಂತ ತೇರದಾಳ, ನಿವೃತ್ತ ಶಿಕ್ಷಕ ಜಿ.ಕೆ. ಮುರಗೋಡ, ಬಸವರಾಜ ಪಾಟೀಲ, ಶಂಕರ ಸೋನವಾಲಕರ, ರಾಮಣ್ಣ ಗಾಣಿಗೇರ, ಹೊಸಟ್ಟಿಯ ಸಿದ್ದಪ್ಪ ನಾಯಿಕ, ಶಿವಪ್ಪ ಭುಜನ್ನವರ, ಚಂದ್ರು ಗಾಣಿಗಾ, ಅವರಾದಿಯ ಮಹಾಲಿಂಗ ಪಾಟೀಲ ಮತ್ತಿತರರು ಇದ್ದರು.
ಗ್ರಂಥ ಸಂಪಾದಕ ಬಾಲಶೇಖರ ಬಂದಿ ಸ್ವಾಗತಿಸಿದರು, ಶಿಕ್ಷಕ ರಮೇಶ ಬಿರಾದಾರ ನಿರೂಪಿಸಿದರು, ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ವಂದಿಸಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ