ಮೂಡಲಗಿಯ ತಾಲ್ಲೂಕು ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಆಚರಿಸಿದ ವೈದ್ಯರ ದಿನಾಚರಣೆಯಲ್ಲಿ ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು
ಸಾಹಿತಿ ಬಾಲಶೇಖರ ಬಂದಿ ಅಭಿಮತ
‘ವೈದ್ಯರು ಭೂಮಿಯ ಮೇಲಿನ ದೇವರ ಸ್ವರೂಪಿಗಳು’
ಮೂಡಲಗಿ: ‘ವೈದ್ಯರಿಲ್ಲದ ಜಗತ್ತನ್ನು ಊಹಿಸಲಿಕ್ಕೆ ಸಾಧ್ಯವಿಲ್ಲ, ವೈದ್ಯರು ಭೂಮಿಯ ಮೇಲೆ ದೇವರ ಸ್ವರೂಪಿಯಾಗಿ ಕಾರ್ಯಮಾಡುತ್ತಾರೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ತಾಲ್ಲೂಕು ಪ್ರೆಸ್ ಕ್ಲಬ್‍ದಲ್ಲಿ ಆಚರಿಸಿದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು ಸಮಾಜಕ್ಕೆ ವೈದ್ಯರು ನೀಡಿದ ಕೊಡುಗೆ, ಸಾಧನೆ ಮತ್ತು ಅವರ ಕಷ್ಟಗಳ ಬಗ್ಗೆ ಚಿಂತನೆ ಮಾಡುವ ಮೂಲಕ ಅವರನ್ನು ನೆನೆಯುವ ದಿನವಾಗಿದೆ ಎಂದರು.
ಕೊರೊನಾದಂತ ಸೋಂಕು ವ್ಯಾಪಿಸಿರುವ ಆತಂಕದಲ್ಲಿ ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ಬೆಲೆ ಸಮಾಜಕ್ಕೆ ಅರ್ಥವಾಗಿದೆ. ಜೀವದ ಮೌಲ್ಯವನ್ನು ಸಹ ಜನರು ಅರ್ಥ ಮಾಡಿಕೊಳ್ಳುವಂತ ಪಾಠವನ್ನು ಕೊರೊನಾ ಸೋಂಕಿನ ಸಂದಿಗ್ಧತೆಯು ಕಲಿಸಿಕೊಟ್ಟಿದೆ ಎಂದರು.
ಡಾ. ಅನಿಲ್ ಪಾಟೀಲ, ಡಾ. ಎಸ್.ಎಸ್. ಪಾಟೀಲ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿಭೂತಿ ಅವರು ಮಾತನಾಡಿ ‘ಎಂಥಾ ಭಯಾನಕದ ವೈರಾಣುಗಳು ಉದ್ಭವಿಸಿದರು ವೈದ್ಯರು ದೃತಿಗೆಡದೆ ಜನರ ಜೀವರಕ್ಷಕರಾಗಿ ವೃತ್ತಿಧರ್ಮವನ್ನು ಕಾಯಬೇಕು’ ಎಂದರು.
ಹಿರಿಯ ಪತ್ರಕರ್ತ ವೈ.ವೈ. ಸುಲ್ತಾನಪುರ, ವಿ.ಎಚ್. ಬಾಲರಡ್ಡಿ ಮಾತನಾಡಿ ಸಮಾಜದಲ್ಲಿ ವೈದ್ಯರ ಸೇವೆಯು ಅನನ್ಯವಾಗಿದೆ. ಶ್ರದ್ಧೆ, ನಿಷ್ಠೆ, ಪ್ರಾಮಾಣಿಕ ವೈದ್ಯರ ಸೇವೆಗೆ ಸಮಾಜವು ಸರ್ವಕಾಲಿಕ ಗೌರವಿಸುತ್ತದೆ’ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಡಾ. ಬಿ.ಎಸ್. ಬಾಬಣ್ಣವರ, ಡಾ.ಅನಿಲ ಪಾಟೀಲ, ಡಾ. ಪಿ.ವಿ. ಬುದ್ನಿ, ಡಾ. ವಿಭೂತಿ, ಡಾ. ಎಸ್.ಎಸ್. ಪಾಟೀಲ, ಡಾ. ರಾಜೇಂದ್ರ ಗಿರಡ್ಡಿ, ಡಾ. ಸಂಜಯ ಶಿಂಧಿಹಟ್ಟಿ, ಡಾ. ಮಹೇಶ ಮುಳವಾಡ, ಶಿವಲಿಂಗ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು.
ಪತ್ರಕರ್ತ ಸಂಘದ ಅಧ್ಯಕ್ಷ ಸುಧಾಕರ ಉಂದ್ರಿ, ಉಪಾಧ್ಯಕ್ಷ ಶೇಖರ, ಕಾರ್ಯದರ್ಶಿ ಅಲ್ತಾಫ್ ಹವಾಲ್ದಾರ, ಲಕ್ಷ್ಮಣ ಅಡಿಹುಡಿ, ಶಿವಾನಂದ ಹಿರೇಮಠ, ಸುಭಾಷ ಗೊಡ್ಯಾಗೋಳ, ಈರಪ್ಪ ಢವಳೇಶ್ವರ, ಮಲ್ಲು ಬೋಳನ್ನವರ, ಈಶ್ವರ ಢವಳೇಶ್ವರ, ಭೀಮಶಿ ತಳವಾರ, ಪ್ರವೀಣ ಮಾವರಕರ ಇದ್ದರು.