ಮೂಡಲಗಿಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಲ್ಲಿ ವಿವಿಧ ಸಂಘ, ಸಂಸ್ಥೆಗಳಲ್ಲಿ ಆಯ್ಕೆಯಾಗಿರುವ ಬಣಜಿಗ ಸಮಾಜದ ಮಹನೀಯರನ್ನು ಸನ್ಮಾನಿಸಿ ಗೌರವಿಸಿದರು.
ಬಣಜಿಗ ಸಮಾಜ: ಸಂಘ, ಸಂಸ್ಥೆಗಳಿಗೆ ಆಯ್ಕೆಯಾದವರಿಗೆ ಸನ್ಮಾನ
ಮೂಡಲಗಿ: ವಿವಿಧ ಸಂಘ, ಸಂಸ್ಥೆಗಳಿಗೆ ಚುನಾಯಿತ ಮತ್ತು ಆಯ್ಕೆಯಾಗಿರುವ ಬಣಜಿಗ ಸಮಾಜದ ಮಹನೀಯರನ್ನು ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ಘಟಕದಿಂದ ಸನ್ಮಾನಿಸಿ ಗೌರವಿಸಿದರು.
ಮಸಗುಪ್ಪಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಸವರಾಜ ಶಂ. ಭುಜನ್ನವರ, ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಗೆ ನಿರ್ದೇಶಕರಾಗಿರುವ ವಿಶಾಲ ಸದಾಶಿವ ಶೀಲವಂತ, ಮೂಡಲಗಿಯ ಪಿಕೆಪಿಎಸ್‍ಗೆ ನಿರ್ದೇಶಕರಾಗಿರುವ ಚನ್ನವೀರಪ್ಪ ಈರಪ್ಪ ಅಂಗಡಿ, ಮೂಡಲಗಿಯ ಸಮರ್ಥ ಸೌಹಾರ್ದ ಸೊಸಾಯಿಟಿಯ ಉಪಾಧ್ಯಕ್ಷರಾಗಿರುವ ಮಹಾಂತೇಶ ಅಂಗಡಿ, ಕಲ್ಮೇಶ್ವರಭೋಧ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷರಾಗಿರುವ ರಾಜಶೇಖರ ಶಿವಪ್ಪ ಭುಜನ್ನವರ, ಮೂಡಲಗಿ ಕೋಅಪರೇಟಿವ್ ಬ್ಯಾಂಕ್‍ಗೆ ನಿರ್ದೇಶಕರಾಗಿರುವ ಹರೀಶ ಅಂಗಡಿ ಹಾಗೂ ಅನ್ನದಾತ ಅರ್ಬನ್ ಕೋ.ಆಪ್ರ ಕ್ರೆಡಿಟ್ ಸೊಸಾಯಿಟಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿ ಶೀಲವಂತ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಮೂಡಲಗಿ ಬಣಜಿಗ ಸಂಘದ ಅಧ್ಯಕ್ಷ ಶಿವಪ್ಪ ಭುಜನ್ನವರ, ಉಪಾಧ್ಯಕ್ಷ ಪ್ರಕಾಶ ಪುಠಾಣಿ, ಹಿರಿಯರಾದ ಬಸವಣ್ಣೆಪ್ಪ ಜಕಾತಿ, ಪ್ರಕಾಶ ಶೀಲವಂತ, ಅಶೋಕ ವಾಣಿ, ಸಂಗಪ್ಪ ಅಂಗಡಿ, ಸಿದ್ದು ಕೊಟಗಿ, ಮಹಾದೇವ ಜಕಾತಿ, ಬಾಲಶೇಖರ ಬಂದಿ, ಲಿಂಗಪ್ಪ ಗಾಡವಿ, ಎ.ಜಿ. ಶರಣಾರ್ಥಿ, ಬಸವರಾಜ ಮಂಗಸೂಳಿ ಸೇರಿದಂತೆ ಬಣಜಿಗ ಸಮಾಜದ ಬಾಂಧವರು ಭಾಗವಹಿಸಿದ್ದರು.