ಮೂಡಲಗಿ: ಪಟ್ಟಣದ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ “ಮಕ್ಕಳ ಸಂತೆ ಮೇಳ” ವನ್ನು ಪುರಸಭೆ ಮುಖ್ಯಾಧಿಕಾರಿ ಪುರಸಭೆ ಮುಖ್ಯಾಧಿಕಾರಿ ತುಕ್ಕಾರಾಮ ಮಾದರ, ಸಂಸ್ಥೆಯ ಅಧ್ಯಕ್ಷ ಡ್ಯಾನಿಯಲ್ ಸರ್ವಿ, ಮರೆಪ್ಪ ಮರೆಪ್ಪಗೋಳ ಮತ್ತಿತರರು ಉದ್ಘಾಟಿಸಿದರು.
ಮೂಡಲಗಿ: ಪಟ್ಟಣದ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ “ಮಕ್ಕಳ ಸಂತೆ ಮೇಳ” ದಲ್ಲಿ ವಿದ್ಯಾರ್ಥಿಗಳು ಕಾಯಿ ಪಲ್ಲೆ, ಆಹಾರ ಪಧಾರ್ಥ, ತಿಂಡಿ ತನ್ನಿಸನ್ನು ವ್ಯಾಪಾರ ವ್ಯವಹಾರ ನಡೆಸಿ ಸಂಭ್ರಮಿಸಿದರು.
ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲ್ಯವನ್ನು ಬೆಳೆಸುವ ಸದುದ್ದೇಶದಿಂದ ಏರ್ಪಡಿಸಿ ಮಕ್ಕಳ ಸಂತೆಯಲ್ಲಿ ಮಕ್ಕಳು ಗ್ರಾಹಕರನ್ನು ಬರೀ ಬರೀ ತಾಜಾ ತಾಜಾ ತರಕಾರಿ 50-60 ಕೀಲೋ ಬರೀ ಬರೀ ಎಂದು ವಿಶಿಷ್ಟವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರು.
ವಿದ್ಯಾರ್ಥಿಗಳ ಪೋಷಕರು ಸಂತೆಯಲ್ಲಿ ಖುಷಿಯಿಂದ ಸಾಮಾಗ್ರಿ ಖರೀದಿಸಿ ಸಂಭ್ರಮಿಸಿದರು. ಗ್ರಾಹಕರು ಹಾಗೂ ದಿನಸಿ ಅಂಗಡಿಯ ವಿದ್ಯಾರ್ಥಿಯ ನಡುವೆ ರಿಯಾಯಿತಿ ದರಕ್ಕಾಗಿ ಸಾಕಷ್ಟು ಚರ್ಚೆಗಳು ನಡೆದವು. ವಿವಿಧ ಬಗೆಯ ಬೆಂಕಿ ಇಲ್ಲದೆ ಅಡುಗೆ ಮಾಡಿದ ಆಹಾರ ಪದಾರ್ಥಗಳು ಹಾಗೂ ಮೆಣಸು, ಕೊತ್ತುಂಬರಿ, ಹುಳಿ, ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ, ಮೆಂತೆ, ಕಾಳುಮೆಣಸು, ವಿವಿಧ ತೇರನಾದ ಹಣ್ಣು ಹಂಪಲ, ತಂಪು ಪಾನಿ ಸೇರಿದಂತೆ ಇನ್ನಿತರ ದಿನಸಿ ವಸ್ತುಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಆಹಾರ ಮೇಳ ಹಾಗೂ ಮಕ್ಕಳ ಮಿನಿ ಸಂತೆಯಲ್ಲಿ ಫೆÇೀನ್ ಪೇ, ಗೂಗಲ್ ಪೇ ಸ್ಕ್ಯಾನರ್ ಗಳನ್ನು ಅಳವಡಿಸಿ ಸಾಮಾಗ್ರಿ ಖರೀದಿಗೆ ಬಂದ ಗ್ರಾಹಕರು ಚೀಲರೆ ಹಣ ಇಲ್ಲವೆಂದ ಕೂಡಲೇ ಡಿಜಿಟಲ್ ಪಾವತಿ ಮಾಡುವಂತೆ ಮಕ್ಕಳು ಹೇಳುತ್ತಿರುವುದು ವಿಶೇಷವಾಗಿ ಆಕರ್ಷಣೆಯಾಗಿತ್ತು.
ಸಂತೆ ಮೇಳದಲ್ಲಿ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಸಮೀರ್ ದಬಾಡಿ ಮಾತನಾಡಿ, ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರೆ ಎಂತಹ ಕಠಿಣವಾದ ವಿದ್ಯೆಯಾದರೂ ಕಲಿಯಬಲ್ಲರು. ಪಠ್ಯದ ಜತೆಗೆ ಬದುಕಿನ ಮಹತ್ವ ತಿಳಿಯಲು ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಕೆಲ ಮಕ್ಕಳಿಗೆ ಸಂತೆ ಪರಿಕಲ್ಪನೆ ಗೊತ್ತಿರುವುದಿಲ್ಲ. ಗ್ರಾಮೀಣ ಬದುಕಿನಲ್ಲಿ ಸಂತೆಗೆ ವಿಶೇಷ ಮಹತ್ವ ಇದ್ದು, ಪ್ರತಿ ವಾರದ ವಸ್ತುಗಳನ್ನು ಸಂತೆಯಲ್ಲಿ ಜನರು ಖರೀದಿ ಮಾಡುತ್ತಾರೆ. ಸಂತೆಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಮಕ್ಕಳಲ್ಲಿ ಆರ್ಥಿಕ, ವ್ಯಾಪಾರ ವಹಿವಾಟು ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.
ಮಕ್ಕಳ ಸಂತೆಯನ್ನು ಪುರಸಭೆ ಮುಖ್ಯಾಧಿಕಾರಿ ತುಕ್ಕಾರಾಮ ಮಾದರ, ಸಂಸ್ಥೆಯ ಅಧ್ಯಕ್ಷ ಡ್ಯಾನಿಯಲ್ ಸರ್ವಿ, ಮರೆಪ್ಪ ಮರೆಪ್ಪಗೋಳ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಅನ್ವರ್ ನದಾಫ್ ಚನ್ನಪ್ಪ ಅಥಣಿ, ಸುರೇಶ ಬೈಬಲ್, ಅಶೋಕ ಮೂಡಲಗಿ, ಯಲ್ಲಪ್ಪ ಸಣ್ಣಕ್ಕಿ, ಶ್ರೀಪಾದ ನಾಗನ್ನವರ, ವಿಜಯಕುಮಾರ ಕರಬನ್ನವರ, ಮಮ್ಮದರಫೀಕ ಕಡಗಾಂವಕರ, ರಮೇಶ ಮಾದರ, ವಾಯ್.ಆರ್.ಕರಬನ್ನವರ, ಶಾಲೆ ಮುಖ್ಯೋಪಾಧ್ಯಯಿ ಶೀಲಾ ಡ್ಯಾನಿಲ್ ಸರ್ವಿ, ಶಾಳೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳ ಪಾಲಕರು ಮತ್ತಿತರರು ಉಪಸ್ಥಿತರಿದ್ದರು.