ಮೂಡಲಗಿ : ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯು ಅವೈಜ್ಞಾನಿಕವಾಗಿದೆ ಎಂದು ಕ.ರಾ.ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಹಿಂದುಳಿದ ವರ್ಗದವರ ಮನೆ ಮನೆಗೆ ತೆರಳಿ ಸರಿಯಾಗಿ ಸಮೀಕ್ಷೆ ಮಾಡದೇ ವರದಿ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜವು ಸುಮಾರು 80 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ ಪತ್ರಿಕಾ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ಮಾಹಿತಿಗಳ ಪ್ರಕಾರ ಉಪ್ಪಾರ ಸಮಾಜವು ಕೇವಲ 7,58,605 ಎಂಬ ಅಂಕಿ ಸಂಖ್ಯೆ ಜಾತಿಗಣತಿ ಸಮೀಕ್ಷೆಯ ವರದಿ ಕಂಡು ಬರುತ್ತಿದೆ. ಇದರಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿವಾಗಿ ಮತ್ತು ರಾಜಕೀಯವಾಗಿ ಅತೀ ಹಿಂದುಳದ ಕರ್ನಾಟಕ ರಾಜ್ಯದ ಉಪ್ಪಾರ ಸಮುದಾಯಕ್ಕೆ ಅನ್ಯಾಯವಾದಂತಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಗಳು ಈ ವರದಿಯನ್ನು ಕುಲಂಕೂಷವಾಗಿ ಪರಿಶೀಲನೆ ಮಾಡದೇ ಅಂಗೀಕರಿಸಬಾರದು. ಒಂದು ವೇಳೆ ಸದರಿ ವರದಿಯನ್ನು ಅಂಗೀಕರಿಸಿದ್ದಲ್ಲ ರಾಜ್ಯಾದ್ಯಂತ ಉಪ್ಪಾರ ಸಮಾಜದವರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ವಿಶ್ವ ಭಗೀರಥ ಟ್ರಸ್ಟ್ ಅಧ್ಯಕ್ಷ ಈಶ್ವರ್ ಶಿರಕೋಳ ಮನವಿ ಮಾಡಿಕೊಂಡಿದ್ದಾರೆ.
