ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ
ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ ಭಕ್ತಿಯ ಗ್ರೂಪ್‍ದಿಂದ ರಾಷ್ಟ್ರೀ ಪರಶುರಾಮ ಪುರಸ್ಕಾರವನ್ನು ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ರಾಜ್ಯ ಧರ್ಮ ಪ್ರಚಾರಕ ಬೆಳಗಾವಿಯ ಮಾರುತಿ ಅಪ್ಪಣ್ಣ ಕೋಳಿ ಅವರಿಗೆ ಪ್ರದಾನ ಮಾಡಿದರು.
ಮಾರುತಿ ಅಪ್ಪನ ಕೋಳಿ ಅವರು ಹಲವಾರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಧರ್ಮ ಪ್ರಚಾರ ಹಾಗೂ ಸೇವಾ ಕಾರ್ಯ ಸೇವೆ ಸಲ್ಲಿಸಿದನ್ನು ಗಮನಿಸಿ ಪರಶುರಾಮ ಪುರಸ್ಕಾರವನ್ನು ಕೇರಳಾದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿನ ಪಂಬಾ ಗಣಪತಿ ದೇವಸ್ಥಾನ ಬಳಿಯ ಆಂಜನೇಯ ಆಡಿಟೋರಿಯಂ ಜರುಗಿದ ಪರಶುರಾಮ ಪುರಸ್ಕಾರ ಸಮಾರಂಭದಲ್ಲಿ ಶ್ರೀ ಶಟ್ ಶಾಸ್ತ್ರ ಭಕ್ತಿಯ ಗ್ರೂಪ್‍ನ ಶ್ರೀ ಶಿವ ನರಸಿಂಹನ್ ಗುರುಸ್ವಾಮಿ, ಮಹಾಶಾಸ್ತ ಸೇವಾ ಸಂಘದ ರಾಜು ಗುರುಸ್ವಾಮಿಗಳು ಪರಶುರಾಮ ಪ್ರಶಸ್ತಿಯನ್ನು ಪುರಸ್ಕಾರ ಮಾಡಿದರು
ಈ ಸಮಯದಲ್ಲಿ ಶಬರಿಮಲೆ ದೇವಸ್ಥಾನದ ತ್ರಿವಾಂಕೂರು ದೇವಸ್ಥಾನ ಕಮಿಟಿಯವರು, ಶಬರಿಮಲೆ ಮೇಲ್ ಶಾಂತಿಗಳು, ಪಂಪ ಗಣಪತಿಯ ಮೇಲ್ ಶಾಂತಿಗಳು ಹಾಗೂ ಆಂಧ್ರ ಪ್ರದೇಶ್, ಕರ್ನಾಟಕ ತಮಿಳುನಾಡು ಕೇರಳ ರಾಜ್ಯ ಗಣ್ಯರು ಉಪಸ್ಥಿತರಿದ್ದರು.