ಕುಮಾರಿ. ಅರ್ಚನ ಮಠಪತಿ
ಕುಮಾರಿ. ಸ್ನೇಹಾ ಲಕ್ಕೋಟ್ಟೆ
ಕುಮಾರಿ. ರಶ್ಮಿತಾ ಯರಗಟ್ಟಿ
ಕುಮಾರಿ. ಸಾಕ್ಷಿ ಸನದಿ
ಕುಮಾರಿ. ಸಂeನಾ ಬಿಜಾಪುರ
ಕುಮಾರ. ಸಿದ್ರಾಮ ಬಂಡಿ
ಕುಮಾರಿ. ಸ್ವಪ್ನಾ ಜೀವನಿ
ಕುಮಾರಿ. ಕುಸಮಾ ಗೀರಜಣ್ಣವರ
ಕುಮಾರ. ಬಸವರಾಜ ವಾಲಿ
ಕುಮಾರಿ. ಪ್ರಿಯಂಕಾ ಕವಿತಕೊಪ್ಪ
ವಿದ್ಯಾಪೋಷಕ ವಿದ್ಯಾರ್ಥಿಗಳಿಂದ ಪಿಯುಸಿ ಅತ್ಯುತ್ತಮ ಸಾಧನೆ
ಮೂಡಲಗಿ: ಧಾರವಾಡದ ವಿದ್ಯಾಪೋಷಕ ಸಂಸ್ಥೆಯಿಂದ ಆರ್ಥಿಕ ಸಹಾಯ ಪಡೆದು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 10 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ ಎಂದು ಮೂಡಲಗಿ ವಲಯದ ವಿದ್ಯಾಪೋಷಕ ಸ್ವಯಂ ಸೇವಕ ಬಾಲಶೇಖರ ಬಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಚನಾ ಮಠಪತಿ ಶೇ.92.5 (ವಿಜ್ಞಾನ), ಸ್ನೇಹಾ ಲಕ್ಕೋಲ್ಟೆ ಶೇ.90 (ವಾಣಿಜ್ಯ), ರಶ್ಮಿತಾ ಯರಗಟ್ಟಿ ಶೇ.91.66 (ವಾಣಿಜ್ಯ), ಸಾಕ್ಷಿ ಸನದಿ ಶೇ. 91.16 (ವಿಜ್ಞಾನ), ಸಂಜನಾ ಬಿಜಾಪುರ ಶೇ. 90.16 (ಕಲಾ), ಸಿದ್ರಾಮ್ ಬಂಡಿ ಶೇ. 92.5 (ವಿಜ್ಞಾನ), ಸ್ವಪ್ನಾ ಜೀವನಿ ಶೇ.91.33 (ವಿಜ್ಞಾನ), ಕುಸಮಾ ಗೀರಿಜಣ್ಣವರ ಶೇ. 92.15 (ಕಲಾ), ಬಸವರಾಜ ವಾಲಿ ಶೇ.91.5 (ವಿಜ್ಞಾನ), ಪ್ರಿಯಂಕಾ ಕವಿತಕೊಪ್ಪ ಶೇ.93.5 (ವಿಜ್ಞಾನ).
2001ರಲ್ಲಿ ಸ್ಥಾಪನೆಯಾಗಿರುವ ವಿದ್ಯಾಪೋಷಕ ಸಂಸ್ಥೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಕೌಶಲ ತರಬೇತಿ, ಉಚಿತ ಪುಸ್ತಕ ಕೊಡುವುದು ಹಾಗೂ ವ್ಯಕ್ತಿತ್ವ ರೂಪಿಸುವ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದೆ. ವಿದ್ಯಾಪೋಷಕ ಸಂಸ್ಥೆಯ ಮೂಲಕ ಕಳೆದ ಎರಡುವರೆ ದಶಕದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಬದುಕನ್ನು ನಿರ್ಮಿಸಿಕೊಂಡಿದ್ದಾರೆ. ಈ ಸಂಸ್ಥೆಗೆ ಇನಫೋಸಿಸ್ ಸಂಸ್ಥೆ ಸೇರಿದಂತೆ ದೇಶದ ವಿವಿಧ ಸಂಸ್ಥೆಗಳು ಸಹಾಯ ಹಸ್ತವವನ್ನು ನೀಡಿರುವರು. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಮುಗಿಸಿದ ಉತ್ತಮ ಅಂಕಗಳನ್ನು ಪಡೆದುಕೊಂಡಿರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನ ನೀಡುತ್ತಲಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾಪೋಷಕ ಸಂಸ್ಥೆಯ ವೆಬ್ www.vidyaposhak.ngo ಸಂಪರ್ಕಿಸಲು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಐರಾಣಿ ತಿಳಿಸಿದ್ದಾರೆ.