Breaking News
Home / ಬೆಳಗಾವಿ / ಸಂಸ್ಕ್ರತಿ ಪರಂಪರೆಯನ್ನು ಯುವಜನಾಂಗ ಗೌರವಿಸಬೇಕು-ಮುರಳಿ ವಜ್ಜರಮಟ್ಟಿ

ಸಂಸ್ಕ್ರತಿ ಪರಂಪರೆಯನ್ನು ಯುವಜನಾಂಗ ಗೌರವಿಸಬೇಕು-ಮುರಳಿ ವಜ್ಜರಮಟ್ಟಿ

Spread the love

ಮೂಡಲಗಿ: ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಿ ಮಹಿಮಾ ಪುರುಷರು ಆಶೀರ್ವಾದ ಸರ್ವರಮೇಲೂ ಇರಲಿ, ಸಂಸ್ಕ್ರತಿ ಪರಂಪರೆಯನ್ನು ಯುವಜನಾಂಗ ಗೌರವಿಸಬೇಕು ಎಂದು ಪುಲಗಡ್ಡಿಯ ಮುಖಂಡ ಮುರಳಿ ವಜ್ಜರಮಟ್ಟಿ ಹೇಳಿದರು.
ಅವರು ಬುಧವಾರದಂದು ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಆಶ್ರಮದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಶಿಕ್ಷಣ ಪಡೆದು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಿಂದ ಎಲ್ಲರೂ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸೋಣ ಎಂದರು.
ವೇದಮೂರ್ತಿ ಶ್ರೀಶೈಲ ಹಿರೇಮಠ, ಮಹಾಂತಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.
ವಡೇರಹಟ್ಟಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಚೇತನ್ ಬಳಿಗಾರ, ಕಛೇರಿ ಸಹಾಯಕ ಬಸವರಾಜ ಬಾಪುಕರಿ, ಸದಸ್ಯ ಯಮನಪ್ಪ ಸಣ್ಣಕ್ಕಿ, ಮುಖಂಡರಾದ ವೆಂಕಣ್ಣ ಕೊಂಕಣಿ, ಶಿವನಗೌಡ ಗೌಡರ, ಸೋಮನಾಥ ಹೊಸಟ್ಟಿ, ಬಾಲಪ್ಪ ಹೊಸಟ್ಟಿ, ಕಮಿಟಿಯ ಹಿರಿಯರಾದ ಯಮನಪ್ಪ ಮಾದರ, ಯಲ್ಲಪ್ಪ ಅಕ್ಕಿಸಾಗರ ಯಮನಪ್ಪ ಹಿರೇಮನಿ, ದುರುಗಪ್ಪ ಸಣ್ಣಕ್ಕಿ, ತಿಪ್ಪಣ್ಣ ಸಣ್ಣಕ್ಕಿ, ಲಕ್ಷ್ಮಣ ಮಾದರ, ಯಮನಪ್ಪ ಮಾದರ, ಹಣಮಂತ ಮೇತ್ರಿ, ಸಂತೋಷ ಮಾದರ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ