ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಬಿ.ಪಿ.ಇಡಿ ಕಾಲೇಜಿನ 4ನೇ ಸೆಮಿಸ್ಟರ್‌ದಲ್ಲಿ ಓದುತ್ತಿರುವ ವಿದ್ಯಾರ್ಥಿನಿ ನಿರ್ಮಲಾ ಸುಭಾಷ
ಕೊಡ್ಲಿಕಾರ ಶನಿವಾರ (ಜೂ.7)ರಂದು ವಿಯೆಟ್ನಾಂದಲ್ಲಿ ಜರುಗಿದ ಎರಡನೇ ಅಂತರ್‌ರಾಷ್ಟ್ರೀಯ ಯೋಗಾ ಚಾಂಪಿಯಿನ್‌ಷಿಪ್ ಸ್ಪರ್ಧೆಯಲ್ಲಿ
‘ಯೋಗ ರತ್ನ’ ಪಶಸ್ತಿಯೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇಡೀ ದೇಶಕ್ಕೆ ಮತ್ತು ಕರ್ನಾಟಕಕ್ಕೆ ಹೆಮ್ಮೆಯ ಗರಿ
ಮೂಡಿಸಿದ್ದಾರೆ.
ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ 300ಕ್ಕೂ ಅಧಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿನಿಯ
ಸಾಧನೆಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಹಾಗೂ ದೈಹಿಕ ಶಿಕ್ಷಣ
ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಕೆ. ಕಂಕಣವಾಡಿ ಅಭಿನಂದಿಸಿದ್ದಾರೆ.