ಮೂಡಲಗಿ: ಪಟ್ಟಣದ ಶ್ರೀ 1008 ಆದಿನಾಥ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ., ಪ್ರಸಕ್ತ ಹಣಕಾಸು ವರ್ಷದಲ್ಲಿ 29.66 ಲಕ್ಷ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ಬೆಳಗಾವಿ ನಿರ್ದೇಶಕ ವರ್ಧಮಾನ ಬೋಳಿ ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 12.44 ಕೋಟಿ ಠೇವು ಸಂಗ್ರಹಿಸಿ, ರೂ. 7.50 ಕೋಟಿ ಸಾಲ ವಿತರಿಸಿ. ರೂ. 1.67 ಕೋಟಿ ನಿಧಿಗಳು ಹೂಂದಿದ್ದು, ಮತ್ತು 14 ಕೋಟಿ 74 ಲಕ್ಷ ದುಡಿಯುವ ಬಂಡವಾಳ ಹೊಂದಿ, ಕೊನೆಯಲ್ಲಿ ರೂ.29.66 ಲಕ್ಷ ನಿವ್ವಳ ಲಾಭ ಗಳಿಸಿ, ಸೊಸಾಯಿಟಿ ಪ್ರಾಂರಭದಿಂದಲೂ ಶೇ 100ಕ್ಕೆ 99% ಸಾಲ ವಸೂಲಾತಿ ಮಾಡಿದ್ದು ಪ್ರತಿ ವರ್ಷ ಅಡಿಟ್ “ ಅ “ ಶೇಯಾಂಕ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.