Breaking News
Home / ಬೆಳಗಾವಿ / ಸಾಂಸ್ಕತಿಕ ಭವನ ನಿರ್ಮಾಣ ಮಾಡುವ ಮೂಲಕ ಭಕ್ತಾಧಿಗಳಿಗೆ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲ- ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

ಸಾಂಸ್ಕತಿಕ ಭವನ ನಿರ್ಮಾಣ ಮಾಡುವ ಮೂಲಕ ಭಕ್ತಾಧಿಗಳಿಗೆ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲ- ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

Spread the love

ಮೂಡಲಗಿ: ರಾಜ್ಯದ ಶಕ್ತಿ ದೇವತೆಗಳಲ್ಲಿ ಒಂದಾದ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಬೇರೆ ಬೇರೆ ಭಾಗಗಳಿಂದ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಯಾರಿಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲೋ ಅಂತವರ ಅನುಕೂಲಕ್ಕಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ಶಕ್ತಿ ಮಾತೆ ಯಲ್ಲಮ್ಮ ದೇವಿಯ ಮಂದಿರಗಳು ನಿರ್ಮಾಣವಾಗಿವೆ. ಅದೇ ರೀತಿ ಗುಜನಟ್ಟಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಯಲ್ಲಮ್ಮ ದೇವಿಯ ಮಂದಿರದ ಎದುರುಗಡೆ ಸಾಂಸ್ಕತಿಕ ಭವನ ನಿರ್ಮಾಣ ಮಾಡುವ ಮೂಲಕ ಭಕ್ತಾಧಿಗಳಿಗೆ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲ ಮಾಡಿ ಕೊಡಲಾಗುವುದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ ತಾಲೂಕಿನ ಗುಜನಟ್ಟಿ ಗ್ರಾಮದ ಯಲ್ಲಮ್ಮ ದೇವಿಯ ಮಂದಿರದ ಎದುರುಗಡೆ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಾಂಸ್ಕøತಿಕ ಭವನ ಹಾಗೂ ಬಸ್ ಪ್ರಯಾಣಿಕರ ತಂಗುದಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಗುಜನಟ್ಟಿ ಗ್ರಾಮವು ರೈತರು ಮತ್ತು ಕೂಲಿಕಾರರಿಂದ ಕೂಡಿದ ಗ್ರಾಮವಾಗಿದ್ದು, ಇಲ್ಲಿಂದ ತಾಲೂಕಾ ಕೇಂದ್ರಗಳಿಗೆ ಹೊಗಿಬರಲು ಬಸ್‍ಗಾಗಿ ದಾರಿ ಕಾಯುವ ಜನರಿಗೆ ಬಸ್ ಪ್ರಯಾಣಿಕರ ತಂಗುದಾನ ನಿರ್ಮಾಣ ಮಾಡಲಾಗುವುದು. ಈ ಎರಡು ಕಾಮಗಾರಿಗಳಿಗೆ ಸಂಸದರ ಸ್ಥಳಿಯ ಪ್ರದೇಶಾಭಿವೃದಿ ಯೋಜನೆ ಅನುದಾನದಿಂದ 10 ಲಕ್ಷ. ರೂ ಗಳ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲಾಗುವುದು. ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.
ಪ್ರಮುಖರಾದ ಗುರು ಗಂಗಣ್ಣವರ, ಶಂಭುಲಿಂಗ ಮುಕ್ಕನ್ನವರ, ಪಾವಡೆಪ್ಪ ಕುರಿಬಾಗಿ, ನಾರಾಯಣ ಸನದಿ, ಭೀಮಪ್ಪ ಮೋಕಾಶಿ, ಸಿದ್ದಾರೂಢ ಗುಮಚನಮರಡಿ, ಬಸವರಾಜ ಗಾಡವಿ, ಈಶ್ವರ ಗಾಡವಿ, ವೆಂಕಪ್ಪ ಸಿರಗಣ್ಣವರ, ಈರಪ್ಪ ಡವಳೇಶ್ವರ, ಪಂಚಾಯತ ಅಭಿವೃದ್ದಿ ಅಧಿಕಾರಿ ರವಿ ಮರೆಣ್ಣವರ, ರವಿ ಗಂಗಣ್ಣವರ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About inmudalgi

Check Also

19ನೇ ಶಿವಾನುಭವ ಗೋಷ್ಠಿ, ‘ಶುದ್ಧ ಕಾಯಕದಿಂದ ಜೀವನದಲ್ಲಿ ಸಂತೃಪ್ತಿ’

Spread the loveಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ