Breaking News
Home / ತಾಲ್ಲೂಕು / ರಾಜ್ಯದಲ್ಲಿ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಯಶಸ್ವಿ

ರಾಜ್ಯದಲ್ಲಿ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಯಶಸ್ವಿ

Spread the love

ಬೆಳಗಾವಿ:ರಾಜ್ಯದಲ್ಲಿ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26 ಕ್ಕೆ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಬಿಜೆಪಿ ಕಾರ್ಯಕರ್ತರು ತಮ್ಮ ಸಾಮಾಜಿಕ ಬದ್ಧತೆಯನ್ನು ವ್ಯಕ್ತಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಹಿಂಡಲಗಾ ಗ್ರಾಮದಲ್ಲಿ ಮಂಗಳವಾರ ಜು.28 ರಂದು ಹಲವಾರು ಸವಾಲುಗಳನ್ನು ಎದುರಿಸಿ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷದ ಯಶಸ್ವಿ ಸಾಧನೆ ಪ್ರಯುಕ್ತ ಪರಿಸರ ಜಾಗೃತಿಗಾಗಿ ಸಸಿ ನೆಡುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಸಿ ನೆಟ್ಟು ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು.


ರಾಜ್ಯದಲ್ಲಿ 58 ಸಾವಿರ ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ 5 ಸಸಿ ನೆಡುವ ಮೂಲಕ ಒಟ್ಟು 3ಲಕ್ಷ ಸಸಿಗಳನ್ನು ನೇಡಲಾಗುತ್ತಿದೆ. ಬಿಜೆಪಿಯ ಒಬ್ಬ ಕಾರ್ಯಕರ್ತನಿಗೆ ಒಂದು ಸಸಿ ಲಾಲನೆ, ಪಾಲನೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ, ಹಸಿರು ಉಸಿರು ಎಂದು ಭಾವಿಸಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ತಮ್ಮನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸಾಮಾಜಿಕ ಕಳಕಳಿಯನ್ನು ಎತ್ತಿತೊರಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.
ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ, ಮಹೇಶ ಮೋಹತೆ, ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ, ಜಿಲ್ಲಾ ಯುವಮೊರ್ಚಾ ಮಾಜಿ ಅಧ್ಯಕ್ಷ ಈರಣ್ಣ ಅಂಗಡಿ, ನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ, ರಾಮಚಂದ್ರ ಮನ್ನೊಳಕರ, ಪಂಕಜ ಗಾಡಿ, ಸಿದ್ದಪ್ಪ ಹುಕ್ಕೇರಿ, ಪವನ ದೇಸಾಯಿ, ಭಾಗ್ಯಶ್ರೀ ಕುಕ್ಕೇತ್ಕರ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಇತರರು ಇದ್ದರು.


Spread the love

About inmudalgi

Check Also

‘ಬಸವೇಶ್ವರ ಕೋ.ಅಪ್ ಕ್ರೆಡಿಟ್ ಸೊಸೈಟಿಗೆ ರೂ.5.05 ಕೋಟಿ ಲಾಭ’- ಮಲ್ಲಿಕಾರ್ಜುನ ಢವಳೇಶ್ವರ

Spread the loveಮೂಡಲಗಿ: ‘ಮೂಡಲಗಿಯ ಬಸವೇಶ್ವರ ಅರ್ಬನ್ ಕೋ.ಅಪ್ ಕ್ರೆಡಿಟ್ ಸೊಸಾಯಿಟಿಯು 2024-25 ಆರ್ಥಿಕ ವರ್ಷದ ಕೊನೆಯಲ್ಲಿ ರೂ.5.05 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ