*ಅಧಿಸೂಚನೆ ಹೊರಡಿಸದೆ ಒಳಗೊಳಗೆ ನೇಮಕಾತಿ ಆರೋಪ | ಸರ್ಕಾರದ ನಿಯಮಗಳ ಉಲ್ಲಂಘನೆ*
*ಕಂಪ್ಯೂಟರ್ ನೇಮಕಾತಿಯಲ್ಲಿ ಪಾರದರ್ಶಕತೆ ಮರೆ….!*
ಮೂಡಲಗಿ : ಸರ್ಕಾರಿ ಕಚೇರಿ ಹಾಗೂ ಸಂಘ ಸಂಸ್ಥೆಗಳಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕೆಂದಲ್ಲಿ ಹಲವು ನೀತಿ ನಿಯಮಗಳನ್ನು ಪಾಲನೆ ಮಾಡಲೇಬೇಕು. ಆದರೆ ತಾಲೂಕಿನ ಗುಜನಟ್ಟಿ ಗ್ರಾಮದ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖಾಲಿ ಇರುವ ಕಂಪ್ಯೂಟರ್ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬರುತ್ತಿದೆ.
ಪ್ರಾಥಮಿಕ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘ ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿ ಸರ್ಕಾರದ ಯಾವ ನಿಯಮಗಳು ಲೆಕ್ಕಕ್ಕೇ ಇಲ್ಲವೆಂಬoತೆ ಕಾಣುತ್ತಿದೆ. ತಾವೇ ಮಾಡಿದ ನಿಯಮ ಎಂಬoತೆ ತಾವು ಕೈಗೊಂಡ ತೀರ್ಮಾನವೇ ಅಂತಿಮ ಎನ್ನುವಂತೆ ಸಾರ್ವಜನಿಕರಿಗೆ ತಿಳಿಯದಂತೆ ನೇಮಕಾತಿ ಮಾಡಿಕೊಂಡಿರುವ ಆರೋಪ ಬಲವಾಗಿ ಕೇಳಿ ಬಂದಿದೆ.
*ನೇಮಕಾತಿ ಬಗ್ಗೆ ಮಾಹಿತಿಯನ್ನೇ ನೀಡದಕ್ಕೆ ಸಾರ್ವಜನಿಕರ ಆಕ್ರೋಶ :* ಖಾಲಿ ಇರುವ ಕಂಪ್ಯೂಟರ್ ಹುದ್ದೆ ನೇಮಕಮಾಡಿಕೊಳ್ಳಲು ಕಡ್ಡಾಯವಾಗಿ ಅಧಿಸೂಚನೆ ಹೊರಡಿಸಿ, ಪತ್ರಿಕೆಗಳಲ್ಲಿ ಸಾರ್ವಜನಿಕ ಜಾಹೀರಾತು ನೀಡಬೇಕು. ಅಲ್ಲದೇ ಸಂಘದ ಕಚೇಯ ಸೂಚನಾ ಫಲಕದಲ್ಲಿ ಅರ್ಜಿ ಆಹ್ವಾನಿಸಿರುವ ಕುರಿತು ನೋಟಿಸ್ ಹಚ್ಚಬೇಕು.ಅರ್ಜಿ ಸಲ್ಲಿಕೆಯ ದಿನಾಂಕದ ಕೆಲವು ದಿನಗಳ ಮೊದಲೇ ಈ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಬೇಕು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಫಲಿತಾಂಶ, ಸೇವಾ ಅನುಭವದ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನಿಸಿ ನೇಮಕಮಾಡಿಕೊಳ್ಳಬೇಕು. ನಂತರ ಆಕ್ಷೇಪಣೆಗೆ ಕಾಲಾವಕಾಶ ನೀಡಬೇಕು ಎಂಬುದು ಸಾರ್ಕಾರದ ನಿಯಮವಾಗಿದೆ.
ಆದರೆ ಸಂಘದ ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿ ಹೊಂದಾಣಿಕೆಯಿ0ದಾಗಿ ಸರ್ಕಾರದ ನಿಯಮ ಗಾಳಿಗೆ ತೊರಿದ್ದಾರೆ. ಅಲ್ಲದೇ ಹಣ ಬೇಡಿಕೆಯನ್ನ ಇಟ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ. ಇನ್ನು ಸಂಘದ ವ್ಯವಸ್ಥಾಕರು ಮಾತ್ರ ಈ ಅಭ್ಯರ್ಥಿ ಆಯ್ಕೆಯನ್ನು ಆಡಳಿತ ಮಂಡಳಿ ಹೇಳಿದ ಹಾಗೆ ಆಯ್ಕೆ ಮಾಡಲಾಗಿದೆ ಎಂದು ಉಡಾಪೆ ಉತ್ತರ ನೀಡುತ್ತಿದ್ದಾರೆ.
ಸಂಘದ ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿ ಆಡಿದ್ದೇ ಆಟ ಎನ್ನುವಂತಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಪರಿಶೀಲನೆ ನಡೆಸುವುದರ ಜೊತೆಗೆ ನಿಯಮ ಪಾಲಿಸದ ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಂಪ್ಯೂಟರ್ ಹುದ್ದೆಗೆ ನಮ್ಮ ಆಡಳಿತ ಮಂಡಳಿ ಆಯ್ಕೆ ಮೇಲೆ ಇರುವುತ್ತದೆ. ಅವರೇ ಆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ನಾವು ಯಾವುದೇ ಅಧಿಸೂಚನೆಯನ್ನು ಹೊರಡಿಸಿಲ್ಲಾ ಹಾಗೂ ಸಂಘದ ಕಚೇಯ ಸೂಚನಾ ಫಲಕದಲ್ಲಿ ನೋಟಿಸ್ ಹಚ್ಚಿಲ್ಲಾ. ಪತ್ರಿಕೆಯಲ್ಲಿ ಜಾಹೀರಾತು ನೀಡಲ್ಲಾ ನಮ್ಮ ಆಡಳಿತ ಮಂಡಳಿ ಹೇಳಿದ ಹಾಗೆ ಆಯ್ಕೆ ಮಾಡಲಾಗಿದೆ.
*(ಪ್ರಾಥಮಿಕ ಕೃಷಿ ಪತ್ತಿನ ವ್ಯವಸ್ಥಾಪಕ )*
ಯಾವುದೇ ಅಧಿಸೂಚನೆ ಹೊರಡಿಸದೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಆಭ್ಯರ್ಥಿ ಬಳಿ 2ಲಕ್ಷ ಬೇಡಕೆಯನ್ನ ಇಟ್ಟು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ನಿಯಮಗಳನ್ನು ಗಾಳಿಗೆ ತೊರಿ ತಮ್ಮ ಆಟವಾಡುತ್ತಿದ್ದಾರೆ ಇದರಿಂದ ಅಭ್ಯರ್ಥಿಗಳಿಗೆ ನೋವು ಉಂಟುಮಾಡಿದೆ.
*(ಗುರುನಾಥ ಗಂಗನ್ನವರ ಸ್ಥಳೀಯ ನಾಗರಿಕ)*