Breaking News
Home / Recent Posts /  ‘ಜನರು ದೈವತ್ವ ಪಾಲಿಸುವಂತೆ ಸ್ವಚ್ಛತೆ, ಪರಿಸರ ಕಾಳಜಿವಹಿಸಲಿ’

 ‘ಜನರು ದೈವತ್ವ ಪಾಲಿಸುವಂತೆ ಸ್ವಚ್ಛತೆ, ಪರಿಸರ ಕಾಳಜಿವಹಿಸಲಿ’

Spread the love

 ‘ಜನರು ದೈವತ್ವ ಪಾಲಿಸುವಂತೆ ಸ್ವಚ್ಛತೆ, ಪರಿಸರ ಕಾಳಜಿವಹಿಸಲಿ’
ಮೂಡಲಗಿ: ‘ಜನರು ದೈವತ್ವವನ್ನು ಪಾಲಿಸುವ ರೀತಿಯಲಿ ಸ್ವಚ್ಛತೆ ಹಾಗೂ ಪರಿಸರ ಕಾಳಜಿವಹಿಸುವುದು ಅತ್ಯಗತ್ಯವಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ವೈ.ಎಂ. ಗುಜನಟ್ಟಿ ಹೇಳಿದರು.
ಇಲ್ಲಿಯ ಪುರಸಭೆಯ ಆತಿಥ್ಯದಲ್ಲಿ ಯುವಜೀವನ ಸೇವಾ ಸಂಸ್ಥೆ, ಮಂಜುನಾಥ ಸೈನಿಕ ತರಬೇತಿ ಕೇಂದ್ರವರು ಮಹಾತ್ಮಾ ಗಾಂಧಿ ಹಾಗೂ ಲಾಲ್‍ಬಹಾದ್ದೂರ್ ಶಾಸ್ತ್ರೀಜಿ ಜಯಂತ್ಯುತ್ಸವ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ಮನಸ್ಸು ಮಾಡಿದರೆ ಸಮಾಜದ ಉನ್ನತಿಗಾಗಿ ಏನೆಲ್ಲ ಪರಿವರ್ತನೆ ಸಾಧ್ಯ ಎಂದರು.
ಇಂದಿನ ಮಗು ಇಂದೇ ಪ್ರಜೆಯಾಗಿ ಬೆಳೆವಣಿಗೆಯಾಗಬೇಕಾಗುವುದರಿಂದ ಮಗುವಿಗೆ ಉತ್ತಮ ಪೌಷ್ಠಿಕ ಆಹಾರದೊಂದಿಗೆ ಶಿಕ್ಷಣ ಅವಶ್ಯವಿದೆ. ಸರ್ಕಾರದ ಸೌಲಭ್ಯಗಳೊಂದಿಗೆ ಜನರು ಅದಕ್ಕೆ ಬದ್ಧರಾಗಬೇಕು ಎಂದರು.
ಯುವಜೀವನ ಸೇವಾ ಸಂಸ್ಥೆಯು ಹಲವು ವರ್ಷಗಳಿಂದ ಸಸಿಗಳನ್ನು ನೆಡುವ ಹಸಿರು ಆಂದೋಲನವನ್ನು ಮಾಡುತ್ತಿದ್ದು, ಸಂಸ್ಥೆಯ ಸಂಸ್ಥಾಪಕ ಈರಪ್ಪ ಢವಳೇಶ್ವರ ಸೇರಿದಂತೆ ಅವರ ತಂಡದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಸಿಪಿಐ ಆಗಿ ಪದೋನ್ನತಿಯನ್ನು ಹೊಂದಿರುವ ಮೂಡಲಗಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಮಾತನಾಡಿ ‘ನಾವು ಇಲಾಖೆಯ ಕರ್ತವ್ಯವನ್ನು ಮಾಡುತ್ತಿದ್ದು, ಅದರಲ್ಲಿ ಜನರ ಪ್ರೀತಿ, ಸಹಕಾರ ದೊಡ್ಡದು. ಮೂಡಲಗಿಗೆ ಬಂದು ಕೇವಲ ಒಂದೇ ವರ್ಷದಲ್ಲಿ ನನ್ನನ್ನು ಮನೆಯ ಮಗನಂತೆ ತಾವೆಲ್ಲ ಕಂಡಿರುವಿರಿ. ಮೂಡಲಗಿ ಜನರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ’ ಎಂದರು.


ಯುವಜೀವನ ಸೇವಾ ಸಂಸ್ಥೆ ಅಧ್ಯಕ್ಷ ಈರಪ್ಪ ಢವಳೇಶ್ವರ ಪ್ರಾಸ್ತಾವಿಕ ಮಾತನಾಡಿ ನಾವೆಲ್ಲ ಕಷ್ಟಪಟ್ಟು ಸ್ಮಶಾನ ಮತ್ತು ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುತ್ತಿದ್ದು, ಸಾರ್ವಜನಿಕರು ಅವುಗಳ ರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಕಾಳಜಿವಹಿಸಬೇಕು. ನೆಟ್ಟಿರುವ ಸಸಿಗಳು ಗಿಡ, ಮರಗಳಾಗಿ ಜನರಿಗೆ ನೆರಳಾದರೆ ನಾವು ಮಾಡಿರುವ ಸೇವೆಯು ಸಾರ್ಥಕತೆ ಪಡೆಯುತ್ತದೆ. ಸಾರ್ವಜನಿಕರು ಸಸಿಗಳನ್ನು ರಕ್ಷಿಸುವ ಕಾಳಜಿವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಮಂಜುನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಹಾತ್ಮಾ ಗಾಂಧಿ ಮತ್ತು ಲಾಲ್‍ಬಹಾದ್ದೂರ ಶಾಸ್ತ್ರೀ ಕುರಿತು ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಡಿಪಿಒ ವೈ.ಎಂ. ಗುಜನಟ್ಟಿ, ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಕಾರ್ಯಕ್ರಮದ ಪ್ರಾಯೋಜನ ಮಾಡಿರುವ ಮರಿಯಪ್ಪ ಮರೆಪ್ಪಗೋಳ, ಪ್ರೀತಂ ಬೋವಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮನ್ವಯಾಧಿಕಾರಿ ಚಿತ್ರದುರ್ಗ ಬಸವರಾಜ, ಎಎಸ್‍ಐಗಳಾದ ಎಂ.ವಿ. ಮುರನಾಳ, ಡಿ.ಸಿ. ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸಸಿಗಳನ್ನು ನೀಡಿ ಸನ್ಮಾನಿಸಿದರು.
ಅನ್ವರ ನದಾಫ, ಸಿದ್ಧು ಗಡ್ಡೆಕಾರ, ಆನಂದ ಟಪಾಲದಾರ, ಅಬ್ದುಲ್‍ಗಫಾರ ಡಾಂಗೆ, ಚನ್ನಪ್ಪ ಅಥಣಿ, ಬಸು ಝಂಡೇಕುರುಬರ, ಹಣಮಂತ ಸತರಡ್ಡಿ, ಯಲ್ಲಪ್ಪ ಸಣ್ಣಕಿ, ವಿನೋದ ಹೊಸಮನಿ, ಯುವಜೀವನ ಸೇವಾ ಸಂಸ್ಥೆ ಉಪಾಧ್ಯಕ್ಷ ರಮೇಶ ಉಪ್ಪಾರ, ಕಾರ್ಯದರ್ಶಿ ಭೀರು ವನಶÉನ್ನಿ, ಸಂಸ್ಥೆ ಮಾಜಿ ಅಧ್ಯಕ್ಷ ಸುಭಾಷ ಗೋಡ್ಯಾಗೋಳ, ಭಗವಂತ ಉಪ್ಪಾರ, ಮಂಜು ಹೆಳವರ, ಮಂಜುನಾಥ ರೇಳೆಕರ ಇದ್ದರು.
ಮಹಮ್ಮದ ಕೈಪ ಕಲಾರಕೊಪ್ಪ ಪ್ರಾರ್ಥಿಸಿದರು, ಚಿದಾನಂದ ಮುಗಳಖೋಡ ಸ್ವಾಗತಿಸಿದರು, ಬಸವರಾಜ ಟಿ. ನಿರೂಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ