ಜನತೆ ಆಶೀರ್ವಾದ ಪಕ್ಷದ ಕಾರ್ಯಕರ್ತರ ಶ್ರಮದಿಂದ ನಾ ಹಳ್ಳಿಯಿಂದ ದಿಲ್ಲಿಗೆ ಹೋದವನ್ನು- ಈರಣ್ಣಾ ಕಡಾಡಿ.
ಕುಲಗೋಡ: ಜನತೆ ಆಶೀರ್ವಾದ ಪಕ್ಷದ ಕಾರ್ಯಕರ್ತರ ಶ್ರಮದಿಂದ ನಾ ಹಳ್ಳಿಯಿಂದ ದಿಲ್ಲಿಗೆ ಹೋದವನ್ನು. ರೈತರ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ರವಿವಾರ ಸಂಜೆ ನಾಗರಿಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಸಾಮಾನ್ಯ ಕಾರ್ಯಕರ್ತನಾಗಿ ಸಂಘಟನೆಯ ಮಾಡುತ್ತಾ, ಜನ, ಪಕ್ಷದ ಸೇವೆ ಮಡುತ್ತಾ ಬಂದವನ್ನು. ಹಳ್ಳಿಯ ಜನರ ಕಷ್ಟ ತೊಂದರೆ ಗೊತ್ತಾ ಸಾಮಾನ್ಯ ರೈತ ಕುಟುಂಬದಲ್ಲಿ ಜನಸಿದ ನಾನು ರೈತರ ಸಂಕಷ್ಟಗಳನ್ನು ಅರಿತಿದ್ದೇನೆ. ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಮೊದಲಿಗೆ ಶ್ರೀ ಬಲಭೀಮ ದೇವರ ಹಾಗೂ ಶ್ರೀ ಸಿದ್ದರೂಢರ ದರ್ಶನ ಪಡೆದರು ನಂತರ ಗ್ರಾಮದ ವಿವಿಧ ಸಂಘ-ಸಂಸ್ಥೆಗಳಿಂದ ಸತ್ಕಾರ ಕರ್ಯಕ್ರಮ ನಡೆಯಿತು ಹಾಗೂ ಗ್ರಾಮದ ಮೂಖಂಡರಿಂದ ಬೇಡಿಕೆಗಳ ಮನವಿ ನೀಡಿದರು.
ಸಂದರ್ಭದಲ್ಲಿ ಸುಭಾಸ ವಂಟಗೋಡಿ. ಬಸನಗೌಡ ಪಾಟೀಲ. ಸತೀಶ ವಂಟಗೋಡಿ. ಭೀಮಶಿ ಪೂಜೇರಿ. ಸುನೀಲ ವಂಟಗೋಡಿ. ಆನಂದ ಮೂಡಲಗಿ. ವೆಂಕಣ್ಣಾ ಚನ್ನಾಳ. ಮಲ್ಲಪ್ಪ ಉಮರಾಣಿ. ರಾಮಣ್ಣಾ ಕುರಬಚನ್ನಾಳ. ತಮ್ಮಣ್ಣಾ ದೇವರ. ಸದಾಶಿವ ದೇವರ. ಭೀಮಶಿ ದಾಸರಡ್ಡಿ. ವೆಂಕಣ್ಣಾ ಮಚಕನೂರ. ಸುಶೀಲಾ ಮಳಲಿ. ಭೀಮಶಿ ಭಜಂತ್ರಿ. ಮಹಾದೇವ ಕುಲಗೋಡ. ಶ್ರೀಪತಿ ಗಣಿ. ಬಸವಣೆಪ್ಪ ತಿಪ್ಪಿಮನಿ. ಹಾಗೂ ಬಿಜೆಪಿ ಕಾರ್ಯಕರ್ತರು. ಗ್ರಾಮಸ್ಥರುಇ ಇದ್ದರು. ತಮ್ಮಣ್ಣಾ ದೇವರ ಪ್ರಾಸ್ತಾವಿಕ ಮಾತನಾಡಿ. ಬಸವರಾಜ ಕೋಟಿ ನಿರೂಪಿಸಿ. ಭೀಮಶಿ ದಾಸರಡ್ಡಿ ಸ್ವಾಗತಿಸಿದರು.