Breaking News
Home / Recent Posts / ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಗಿಡಗಳನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು

ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಗಿಡಗಳನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು

Spread the love

ಮೂಡಲಗಿ: ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಗಿಡಗಳನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಬಹುಬೆಗನೆ ಹೂ ಮತ್ತು ಕಾಯಿ ಕಟ್ಟುತ್ತವೆ. ಸುಲಭವಾದ ತೋಟದ ನಿರ್ವಹಣೆ ಮಾಡುವದು ಜೊತೆಗೆ ಹಣ್ಣಿನ ಗುಣಮಟ್ಟವನ್ನು ಕಾಯ್ದುಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ಕಿತ್ತೂರ ಅರಭಾವಿ ರಾಣಿ ಚನ್ನಮ್ಮ ತೋಟಗಾರಿಕ ಮಹಾವಿದ್ಯಾಲಯ ಹಣ್ಣು ವಿಜ್ಞಾನ ವಿಭಾಗಸಹಾಯಕ ಪ್ರಾಧ್ಯಾಪಕ ಡಾ. ನಟರಾಜ ಕೆ.ಎಚ್ ಹೇಳಿದರು
ಅವರು ಗುರುವಾರದಂದು ಅರಭಾಂವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜರುಗಿದ “ಹಣ್ಣಿನ ಬೆಳೆಗಳಲ್ಲಿ ತಳಿಗಳ ಮಹತ್ವ ಮತ್ತು ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ” ಬಗ್ಗೆ ಆನ್ ಲೈನ್ ತರಬೇತಿಯಲ್ಲಿ ಮಾತನಾಡಿ, ರೈತರು ಹಣ್ಣಿನ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರಿಸುತ್ತಿರುವುದು ಆಶಾದಾಯಕ ವಿಚಾರ, ಹಲವಾರು ಹಣ್ಣಿನ ಬೆಳೆಗಳಾದ ಮಾವು, ಬಾಳೆ, ಪೇರಲ, ಪಪಾಯ, ದಾಳಿಂಬೆ, ನೆಲ್ಲಿ, ನಿಂಬೆ, ದ್ರಾಕ್ಷಿಯನ್ನು ಕರ್ನಾಟಕದಲ್ಲಿ ಮುಖ್ಯವಾಗಿ ಬೆಳೆಯಲಾಗುತ್ತಿದೆ. ರೈತರು ಈ ಹಣ್ಣಿನ ಬೆಳೆಗಳಲ್ಲಿ ಯಾವ ತಳಿಯನ್ನು ಆಯ್ಕೆ ಮಾಡಿಕೊಳ್ಳುವುದು ಬಹು ಮುಖ್ಯವಾಗಿದೆ.
ಅಧಿಕ ಸಾಂದ್ರ ಬೇಸಾಯ ಪದ್ಧತ್ತಿಯಲ್ಲಿ ಪ್ರಾರಂಭಿಕವಾಗಿ ಸ್ವಲ್ಪ ಖರ್ಚುಹೆಚ್ಚು ಇದ್ದು ಪ್ರತಿ ವರ್ಷ ಚಾಟನೆ ಮಾಡುವದು ಮತ್ತು ಕೀಟ ಹಾಗೂ ರೋಗವನ್ನು ನಿಯಂತ್ರಣದಲ್ಲಿ ಇಡಬೇಕಾಗಿರುವುದು ಸ್ವಲ್ಪ ಮಟ್ಟಿನ ಅನಾನೂಕುಲಗಳಾಗಿವೆ. ಸಾಮಾನ್ಯವಾಗಿ ಈ ಹಿಂದೆ ರೈತರು ಮಾವಿನ ಗಿಡಗಳನ್ನು 10-10 ಮೀಟರ ಅಂತರದಲ್ಲಿ ನಾಟಿಮಾಡಿ ಒಂದು ಎಕರೆಗೆ 40 ಗಿಡಗಳನ್ನು ಹಾಕುತ್ತಿದ್ದರು. ಆದರೆ ಇತ್ತಿಚ್ಚಿನ ಅಧಿಕ ಸಾಂದ್ರ ಬೇಸಾಯ ಪದ್ಧತ್ತಿಯಲ್ಲಿ 5-5 ಮೀಟರ ನಂತೆ 150 ಗಿಡಗಳನ್ನು ಪ್ರತಿ ಎಕರೆಗೆ ಹಾಗೂ 3-2 ಮೀಟರ ನಂತೆ 660 ಗಿಡಗಳನ್ನು ಪ್ರತಿ ಎಕರೆಗೆ ನಾಟಿಮಾಡಲಾಗುತ್ತಿದೆ, ಪೇರಲದಲ್ಲಿ 3-2 ಮೀಟರ ಅಂತರದಲ್ಲಿ ಮತ್ತು 2-1 ಮೀಟರದಲ್ಲಿ ಅಂತರದಲ್ಲಿಯು ಸಹ ನಾಟಿಮಾಡಲಾಗುತ್ತದೆ. ಪೇರಲ ಬೆಳೆಯಲ್ಲಿ ಹೂ ಮತ್ತು ಕಾಯಿ ಹೊಸ ರೆಂಭೆಗಳಲ್ಲಿ ಬರುವದರಿಂದ ಮಾವುಗಿಂತ ಪೇರು ಬೆಳೆಯು ಅಧಿಕ ಸಾಂದ್ರ ಬೇಸಾಯ ಪದ್ಧತ್ತಿಗೆ ಅಧಿಕ ಸೂಕ್ತ ಈ ಹತ್ತಿರದಲ್ಲಿ ನಾಟಿ ಮಾಡಿದಾಗ ಸೂಕ್ತ ಚಾಟನಿ ಮಾಡುವುದು ಅತೀ ಅವಶ್ಯಕ. ನಾವು 45 ರಿಂದ 60 ಸೇ.ಮೀ ಎತ್ತರದ ಗಿಡವನ್ನು ಆಯ್ಕೆಮಾಡಿ ನಾಟಿ ಮಾಡಬೇಕು 2ತಿಂಗಳ ನಂತರ 50 ರಿಂದ 60 ಸೇ.ಮೀ ಎತ್ತರದಲ್ಲಿ ಕತ್ತರಿಸಿ ಕೊಂಬೆಗಳ ಬರುವಂತೆ ಪ್ರೋತ್ಸಹಿಸಬೇಕು ನಂತರ 3-4 ಪ್ರಾಥಮಿಕ ಕುಡಿಗಳನ್ನು ಬಿಡಬೇಕು ತದನಂತರ ಪ್ರಾಥಮಿಕ ಕುಡಿಗಳನ್ನು 40 ರಿಂದ 50 ಸೇ.ಮೀ ಬೆಳೆದ ನಂತರ ಅದರ ಶೇ.50 ರಷ್ಟು ಬೆಳವಣಿಗೆಯನ್ನು ಕತ್ತರಿಸಬೇಕು. 3-4 ದ್ವಿತೀಯ ಕುಡಿಗಳನನ್ನು ಪ್ರತಿ ಪ್ರಾಥಮಿಕ ತೊಂಗೆಗಳಿಂದ ಬಿಡಬೇಕು, ಶೇ.50 ರಷ್ಟು ಬೆಳೆದಂತಹ ಕುಡಿಗಳನ್ನು 3-4 ತಿಂಗಳ ನಂತರ ಸವರಬೇಕು ಹಿಗೆಯೇಮಾಡಿ ಒಂದು ವರ್ಷದೊಳಗೆ ನಿರ್ದಿಷ್ಠ ಆಕಾರ ಕೊಡಬೇಕು. 2ನೇ ವರ್ಷ ನಂತರ ತೃತೀಯ ರೆಂಭೆಗಳನ್ನು ಮಾತ್ರ ಪ್ರತಿ ವರ್ಷ ಬೆಳೆದ ಶೇಕಡಾ 50ರಂತೆ ಸವರ ಬೇಕು, ಮಾವಿನಲ್ಲಾದರೆ ಮೇ, ಜೂನ್ ತಿಂಗಳು, ಪೇರಲದಲ್ಲಿ ಪೆಬ್ರುವರಿಯಲ್ಲಿ ಚಾಟನಿ ಮಾಡಿದರೆ ಜುಲೈನಲ್ಲಿ ಹಣ್ಣುಗಳು ಮೇ, ಜೂನ್‍ನಲ್ಲಿ ಚಾಟನಿ ಮಾಡಿದರೆ ಸೆಪ್ಪಂಬರ್, ಅಕ್ಟೋಬರ್ ಮತ್ತು ಸೆಪ್ಪಂಬರ್‍ನಲ್ಲಿ ಚಾಟನಿ ಮಾಡಿದರೆ ಜನವರಿ ಪೆಬ್ರುವರಿಯಲ್ಲಿ ಹಣ್ಣುಗಳು ಕೊಯ್ಲಿಗೆ ಸೀಗುತ್ತವೆ. ಈ ರೀತಿಯಾಗಿ ಮುಂದುವರೆಸಿ ಗಿಡಗಳು ಒಂದಕ್ಕೊಂದು ಕುಡಿದಾಗ 5—6 ವರ್ಷದ ನಂತರ ಒಂದು ಬಾರಿ 3 ಪ್ರಾಥಮೀಕ ಕುಡಿಗಳನ್ನು ಮಾತ್ರ ಉಳಿಸಿ ಉಳಿದೆಲ್ಲ ರೆಂಭೆಗಳನ್ನು ಕತ್ತರಿಸಿ ಹಾಕಬೇಕು ಎಂದು ರೈತರಿಗೆ ತಿಳಿಸಿದರು.
ಅರಬಾಂವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕ ಮಹಾವಿದ್ಯಾಲಯದ ಕ್ಷೇತ್ರಿಯ ಸಹಾಯಕ ರಂಗನಾಥ ಬಿರಾಜ ಅವರು ಹಣ್ಣು ಬೆಳೆಗಳಲ್ಲಿ ಕಸಿ ಕಟ್ಟುವುದನ್ನು ಪ್ರಾತ್ಯಕ್ಷಿಕ್ಷೆ ನೀಡಿದರು.
ಆನ್ ಲೈನ್ ತರಬೇತಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸಹಾಐಕ ಕೃಷಿ ನಿರ್ಧೇಶಕಿ ಶ್ರೀಮತಿ ಜಡ್.ಆರ್. ಪೀರಜಾದೆ, ಸಹಾಯಕ ಕೃಷಿ ನಿರ್ದೇಶಕರು, ಹಾಗೂ ಕೃಷಿ ಅಧಿಕಾರಿಗಳು, ಶ್ರೀಮತಿ ಖಾಜಾ ರುಬೀನಾ ಎಸ್, ಅಶೋಕ ಎಸ್.ಸಬರದ ಮತ್ತಿತರು ಇದ್ದರು.


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ