ಮೂಡಲಗಿ: ಶೈಕ್ಷಣಿಕ ಹಿತ ಚಿಂತಕರ ಚಾವಡಿ ಅಡಿಯಲ್ಲಿ ದಿನಾಂಕ: 10-10-2020 ರಂದು ಮಧ್ಯಾಹ್ನ 2.30 ಗಂಟೆಗೆ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಬಿ.ಡಿ. ಪಾಟೀಲ ಹಾಗೂ ಎಮ್.ಆರ್. ನದಾಫರವರು “ಕರೋನಾ ಅವಧಿಯಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಠ್ಯ ವಿಷಯಗಳನ್ನು ಕಲಿಸಲು, ವಿಡಿಯೋಗಳನ್ನು ತಯಾರಿಸುವುದು ಹೇಗೆ?” ಎಂಬ ವಿಷಯದ ಕುರಿತು ಪ್ರಾಯೋಗಿಕವಾಗಿ ಸಮಗ್ರ ಮಾಹಿತಿಯನ್ನು ನೀಡಲಿದ್ದಾರೆ ಶಿಕ್ಷಕರು ಹಾಗೂ ವಿಷಯ ಆಸಕ್ತಿಯುಳ್ಳವರು ಕಾರ್ಯಾಗಾರದಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.
ಸೂಚನೆ: ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6360143005