ಸಚಿವರು, ಪ್ರಭಾವಿ ರಾಜಕಾರಣಿಗಳ ದಮ್ ಪದ ಬಳಕೆ ವಿಷಾಧನೀಯ ಸಂಗತಿ : ಹೋರಾಟಗಾರ ಭೀಮಶಿ ಗಡಾದ
ಮೂಡಲಗಿ : ಇತ್ತಿಚಿಗೆ ನಮ್ಮ ಸಚಿವರರುಗಳ ಹಾಗೂ ಪ್ರಭಾವಿ ರಾಜಕಾರಣಿಗಳ ಬಾಯಿಂದ “ದಮ್” ಪದ ಬಳಕೆ ಮಾಡುತ್ತೀರುವದು ವಿಷಾಧನೀಯ ಸಂಗತಿಯಾಗಿದೆ. ಪ್ರತಿ ವರ್ಷ ನ.1ರ ರಾಜ್ಯೋತ್ಸವ ಆಚರಿಸುವ ಸಮಯದಲ್ಲಿ ಮಾತ್ರ ಇವರೆಲ್ಲರೂ ಎಮ್‍ಇಎಸ್‍ದವರ ಕುರಿತು ಮಾತನಾಡುತ್ತಾರೆ. ಆದರೆ ಮರಾಠಿಗಳ ಮತಗಳನ್ನೆ ಅವಲಂಬಿಸಿರುವ ಇವರು ಚುನಾವಣೆ ಸಮಯದಲ್ಲಿ ಇವರನ್ನು ಹಾಡಿ ಹೋಗಳುತ್ತಾರೆ. ಈ ರಾಜಕಾರಣಿಗಳಿಗೆ ನಿಜವಾಗಿಯೂ ದಮ್ ಇದ್ದರೇ ಕರ್ನಾಟಕದಲ್ಲಿ ಎಮ್‍ಇಎಸ್ ಸಂಘಟನೆಯನ್ನು ನಷೇಧಿಸುವ ಕುರಿತು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಿ ಹಾಗೂ ಕನ್ನಡ ನಾಡ ದ್ವಜಕ್ಕೆ ಕಾನೂನಾತ್ಮಕ ಮಾನ್ಯತೆ ದೊರಕಿಸುವ ಸಲುವಾಗಿ ಈಗಾಗಲೇ ಕೇಂದ್ರ ಸರಕಾರಕ್ಕೆ ಕಳುಹಿಸಲಾದ ಪ್ರಸ್ತಾವಣೆಗೆ ಮಂಜೂರಾತಿ ಪಡೆದುಕೊಂಡು ಬಂದರೆ ಮಾತ್ರ ಇವರು ನಿಜವಾದ ಕನ್ನಡಿಗರು ಎಂಬುದನ್ನು ಪ್ರತಿಯೊಬ್ಬ ಕನ್ನಡಿಗ ಒಪ್ಪಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಇವರ ದಮ್ ಎಷ್ಟಿದೇ ಎಂಬುದು ಗೊತ್ತಾಗುತ್ತದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.