ಬೆಳಗಾವಿಯಲ್ಲಿ ಬುಧವಾರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಸನ್ಮಾನಿಸಿದರು
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯ
‘ರೈತರ ಪ್ರಗತಿಯೊಂದಿಗೆ ಸಹಕಾರ ಕ್ಷೇತ್ರ ಭದ್ರಗೊಳಿಸಲಾಗುವುದು’
ಮೂಡಲಗಿ: ಬೆಳಗಾವಿ ಡಿಸಿಸಿ ಬ್ಯಾಂಕ್‍ವು ರೈತರ ಪ್ರಗತಿಯೊಂದಿಗೆ ಸಹಕಾರದ ಮೂಲ ತತ್ವವನ್ನು ಉಳಿಸಿಕೊಂಡು, ಸಹಕಾರ ಕ್ಷೇತ್ರವನ್ನು ಭದ್ರಗೊಳಿಸಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕರು ಆಗಿರುವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಳಗಾವಿ ಕೆಎಂಎಫ್ ಕಚೇರಿಯಲ್ಲಿ ಬುಧವಾರದಂದು ಬಿಡಿಸಿಸಿ ಬ್ಯಾಂಕ್‍ಗೆ ಸತತವಾಗಿ ಎರಡನೇ ಬಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಸುಭಾಷ ಜಿ. ಢವಳೇಶ್ವರ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕಾರ್ಯ ಮಾಡುವುದಾಗಿ ತಿಳಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್‍ವು ಶತಮಾನೋತ್ಸವ ಆಚರಿಸುವ ಅಂಚಿನಲ್ಲಿದ್ದು, ಕೃಷಿ ಕ್ಷೇತ್ರವನ್ನು ಬೆಳೆಸುವಂತ ವಿಭಿನ್ನವಾದ ಯೋಜನೆಗಳಿಗೆ ಬ್ಯಾಂಕ್‍ನ ಎಲ್ಲ ಪ್ರಮುಖರೆಲ್ಲ ಒಗ್ಗಟ್ಟಿನಿಂದ ಒತ್ತು ನೀಡಲಾಗುವುದು ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್‍ಗೆ ತಮ್ಮನ್ನು ಉಪಾಧ್ಯಕ್ಷನ್ನಾಗಿಸುವಲ್ಲಿ ಶ್ರಮಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸುಭಾಷ ಢವಳೇಶ್ವರ ಅಭಿನಂದಿಸಿ ಮಾತನಾಡಿ ‘ಆಡಳಿತ ಮಂಡಳಿಯ ಸೌಹಾರ್ದತೆಯಲ್ಲಿ ಬಿಡಿಸಿಸಿ ಬ್ಯಾಂಕ್‍ದ ಅಭಿವೃದ್ಧಿಗೆ ಬದ್ದನಾಗಿರುವೆನು’ ಎಂದರು.
ಪ್ರಭಾ ಶುಗರ್ಸ್ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಮೂಡಲಗಿ ಸಹಕಾರಿ ಬ್ಯಾಂಕ್ ನಿರ್ದೇಶಕ ರುದ್ರಪ್ಪ ವಾಲಿ, ಮಲ್ಲಿಕಾರ್ಜುನ ಢವಳೇಶ್ವರ, ಮೆಳವಂಕಿ ಬಸಗೌಡ ಪಾಟೀಲ, ಬಸಪ್ಪ ಸಂತಿ, ಅಂಕನಗೌಡ ಪಾಟೀಲ, ರಮೇಶ ಮದಗನ್ನವರ, ಮೂಡಲಗಿ ಬಸವೇಶ್ವರ ಸೊಸೈಟಿ ಉಪಾಧ್ಯಕ್ಷ ಗಿರೀಶ ಢವಳೇಶ್ವರ ಸನ್ಮಾನದಲ್ಲಿ ಭಾಗವಹಿಸಿದ್ದರು.
Home / Recent Posts / ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಸನ್ಮಾನಿಸಿದರು
Check Also
ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ
Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …