Breaking News
Home / Recent Posts / ಅಪ್ಪಟ ಗ್ರಾಮೀಣ ಕ್ರೀಡೆ, ಕಬಡ್ಡಿಗೆ ಪ್ರೋತ್ಸಾಹದ ಅವಸ್ಯವಿದೆ – ಸನತ ಜಾರಕಿಹೊಳಿ

ಅಪ್ಪಟ ಗ್ರಾಮೀಣ ಕ್ರೀಡೆ, ಕಬಡ್ಡಿಗೆ ಪ್ರೋತ್ಸಾಹದ ಅವಸ್ಯವಿದೆ – ಸನತ ಜಾರಕಿಹೊಳಿ

Spread the love

ಅಪ್ಪಟ ಗ್ರಾಮೀಣ ಕ್ರೀಡೆ, ಕಬಡ್ಡಿಗೆ ಪ್ರೋತ್ಸಾಹದ ಅವಸ್ಯವಿದೆ – ಸನತ ಜಾರಕಿಹೊಳಿ

ಮೂಡಲಗಿ: ಕಬಡ್ಡಿ ಆಟವು ಗ್ರಾಮೀಣ ಭಾಗದ ಅಪ್ಪಟ ಕ್ರೀಡೆಯಾಗಿದ್ದು ಕಬಡ್ಡಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅವಸ್ಯವಿದ್ದು ಕ್ರೀಡಾಪಟುಗಳಿಗೆ ಪ್ರತಿಯೊಬ್ಬರು ಸಹಕಾರ ನೀಡುವಲ್ಲಿ ಮುಂದಾಗಕೇಂದು ಲಕ್ಷ್ಮೀ ಎಜ್ಯೂಕೇಷನ್ ಟ್ರಸ್ಟ್‍ನ ನಿದೇಶಕ ಸನತ ಜಾರಕಿಹೊಳಿ ಹೇಳಿದರು.

ಗುರುವಾರ ತಾಲೂಕಿನ ರಂಗಾಪೂರ ಗ್ರಾಮದ ಭಾಗ್ಯವಂತಿ ದೇವಿ ಜಾತ್ರೆಯ ನಿಮಿತ್ಯ ಏರ್ಪಡಿಸಿದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉಧ್ಘಾಟಿಸಿ ಸನ್ಮಾನ ಸ್ವೀಕರಸಿ ಮಾತನಾಡಿದದರು.

ಮಹರ್ಷಿ ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ ಮಾತನಾಡಿ ಇಂತಹ ಗ್ರಾಮೀಣ ಭಾಗದಲ್ಲಿ ಕಬಡ್ಡಿ ಆಟ ನಡೆಯುತ್ತಿರುವುದು ವಿಶೇಷವಾಗಿದೆ ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಬೇಕೆಂದರು.

ಶಿಕ್ಷಕ ಚಂದ್ರಕಾಂತ ಮೊಟೆಪ್ಪಗೋಳ ಮಾತನಾಡಿ, ಕ್ರೀಡಾಪಟುಗಳಿಗೆ ಸೋಲು ಗೆಲುವು ಮುಖ್ಯವಲ್ಲ ಪಂದ್ಯಾವಳಿಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು.

ರಾಜ್ಯ ಯುವ ಪ್ರಶಸ್ತಿ ವಿಜೇತ, ಸಾಮಾಜಿಕ ಕಾರ್ಯಕರ್ತ ಸಿದ್ದಣ್ಣ ದುರದುಂಡಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕ್ರೀಡಾ ಪ್ರೇಮಿಯಾಗಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸಹಕರಿಸುತ್ತಿದ್ದಾರೆ ಹೆಣ್ಣು,ಗಂಡು ಬೇಧ ಬಿಟ್ಟು ಮನೆಗೊಬ್ಬ ಕ್ರೀಡಾಪಟುಗಳಾಗಿ ಪ್ರಶಸ್ತಿಗಳನ್ನು ಪಡೆದು ದೇಶದ ಕೀರ್ತಿ ಹೆಚ್ಚಿಸಬೇಕು ಎಂದರು.

. ಪ್ರಭಾ ಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಬಿ.ಜೆ.ಪಿ. ಮುಖಂಡ ಹನಮಂತ ತೇರದಾಳ, ಬಸವರಾಜ ಮನಗೂಳಿ, ಮಹಾದೇವ ಮಸರಗುಪ್ಪಿ, ಮೀರಾಸಾಬ ನದಾಫ್, ಮಂಜು ಕಬ್ಬೂರ, ಯಮನಪ್ಪ ಅಕಡಿ ಹನಮಂತ ಸೈದಾಪೂರ, ಮಹಾದೇವ ಅಕಡಿ ಹಾಗೂ ಗಣ್ಯರು,ಕ್ರೀಡಾ ಪ್ರೇಮಿಗಳು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ