ಮೂಡಲಗಿ : ಎರಡನೇ ಅವಧಿಗೆ ಕೇಂದ್ರದ ಚುಕ್ಕಾಣಿ ಹಿಡಿದು ಬಿಜೆಪಿ ಸರಕಾರವು ದೇಶಕ್ಕೆ ಅನ್ನ ಹಾಕುವ ರೈತ, ಸಂಪತ್ತು ಸೃಷ್ಟಿ ಮಾಡುವ ಕಾರ್ಮಿಕರನ್ನು ಕಡೆಗಣಿಸಿದೆ ಎಂದು ಗ್ರಾಪಂ ನೌಕರರ ಸಂಘದ ಸದಸ್ಯರಾದ ಕಿಶೋರ ಗಣಾಚಾರಿ ಹೇಳಿದರು
ಸಮೀಪದ ಹಳ್ಳೂರ ಗ್ರಾಪಂ ಸಭಾ ಭವನದಲ್ಲಿ ಆಯೋಜಿಸಲಾದ ಕೇಂದ್ರ-ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ಪತ್ರಿಭಟಿಸಿ ನ.26ರಂದು ಅಖಿಲ ಭಾರತ ಮುಷ್ಕರ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ. ರೈತರ ಬೆಳೆಗಳಿಗೆ ಬೆಲೆ ಇಲ್ಲದೇ ಕಂಗಾಲಾಗಿರುವಾಗ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೂಳಿಸಿ ರೈತರನ್ನು ಅದೋಗತಿಗೆ ಒಯ್ಯುತ್ತಿದೆ. ಇದೇ ರೀತಿಯಲ್ಲಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗೆ ಸಿಗುವ ಅಲ್ಪ ಸ್ವಲ್ಪ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆ ವಿದ್ಯಾ ರಡ್ರಟ್ಟಿ ಮತ್ತು ಅಂಗನವಾಡಿ ಕಾರ್ಯಕರ್ತೆ ಬಂದವ್ವ ಬೋತಪ್ಪಗೋಳ ಮಾತನಾಡಿ, ಸರಕಾರದ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಬಿಸಿ ಊಟದ ನೌಕರರು ಮತ್ತು ಅಂಗನವಾಡಿ ನೌಕರರು ಕೇಂದ್ರ ಸರಕಾರದ ಹೊಸ ಆರ್ಥಿಕ ನೀತಿಯಿಂದ ಹಾಗೂ ಹೊಸದಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕೆಲಸ ಕಳೆಸುಕೊಳ್ಳವ ಹಂತದಲ್ಲಿದ್ದಾರೆ ಎಂದು ಹೇಳಿದರು.
ಗ್ರಾಪಂ ನೌಕರರ ಸಂಘದ ಮೂಡಲಗಿ ತಾಲೂಕಾ ಸಹಕಾರ್ಯದರ್ಶಿ ಮಾಂತೇಶ ಸಂತಿ ಮಾತನಾಡಿ, ಹಣ ಇದ್ದವರಿಗೆ ಮಾತ್ರ ಶಿಕ್ಷಣ ಎಂಬಂತೆ ಹೊಸ ಶಿಕ್ಷಣದ ನೀತಿಯನ್ನು ತಂದಿದ್ದಾರೆ, ಇದರಿಂದ ಕೋಟ್ಯಾಂತರ ಜನ ಶಿಕ್ಷಣದಿಂದ ವಂಚಿತರಾಗುವ ಕಾಲ ದೂರವಿಲ್ಲ ಎಂದರು.
ಆದರಿಂದ ನ.26ರಂದು ತಾಲೂಕಿನ ಎಲ್ಲ ಪಂಚಾಯತ ನೌಕರರು, ಅಂಗನವಾಡಿ, ಬಿಸಿ ಊಟ, ಕಟ್ಟಡ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ನಡೆಯುವ ಹೋರಾಟವನ್ನು ಯಶಸ್ವಿ ಮಾಡಿ, ಕೇಂದ್ರ-ರಾಜ್ಯ ಸರಕಾಗಳ ಜನ ವಿರೋಧಿ ನೀತಿಗಳನ್ನು ಖಂಡಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟದ ಕಾರ್ಯಕರ್ತೆಯರು ಹಾಗೂ ಗ್ರಾಪಂ ನೌಕರರು ಉಪಸ್ಥಿತರಿದ್ದರು.