ಜಿಲ್ಲಾಧ್ಯಕ್ಷರಾಗಿ ಮಲ್ಲಪ್ಪ ಕಡಾಡಿ ಆಯ್ಕೆ
ಮೂಡಲಗಿ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯ ಪಂಚಮಸಾಲಿನ ಸಂಘದ ಬೆಳಗಾವಿಯ ಜಿಲ್ಲಾಧ್ಯಕ್ಷರನ್ನಗಿ ತಾಲ್ಲೂಕಿನ ಕಲ್ಲೋಳಿಯ ಮಲ್ಲಪ್ಪ ಕೆಂಚಪ್ಪ ಕಡಾಡಿ ಅವರು ನೇಮಕರಾಗಿದ್ದಾರೆ.
ಸಂಘದ ರಾಜ್ಯಾಧ್ಯಕ್ಷ ಬಿ. ನಾಗನಗೌಡ್ರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧೇಶ ಹನಸಿ ಅವರು ಕಡಾಡಿ ಅವರ ಸಂಘಟನೆ ಮತ್ತು ಕ್ರೀಯಾಶೀಲತೆಯನ್ನು ಪರಿಗಣಿಸಿ ಅವರ ನೇಮಕ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.