ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ
ಇಂದು ರಸ್ತೆ ಸಂಚಾರ ಸರಕ್ಷಾ ಅಭಿಯಾನ
ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಾಳೆ ನ. 24ರಂದು ರಸ್ತೆ ಸಂಚಾರ ಸುರಕ್ಷಾ ಅಭಿಯಾನವನ್ನು ಏರ್ಪಡಿಸಿರುವರು.
ನ. 24ರಂದು ಬೆಳಿಗ್ಗೆ 10ಕ್ಕೆ ಕಲ್ಮೇಶ್ವರ ವೃತ್ತದಲ್ಲಿ ಸಿಪಿಐ ವೆಂಕಟೇಶ ಮುರನಾಳ ಅಭಿಯಾನಕ್ಕೆ ಚಾಲನೆ ನೀಡುವರು. ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಲಯನ್ಸ್ ಕ್ಲಬ್ ಅಧ್ಯಕ್ಷ ಪುಲಕೇಶ ಸೋನವಾಲಕರ ಹಾಗೂ ಲಯನ್ಸ್ ಕ್ಲಬ್ ಪರಿವಾರದ ಎಲ್ಲ ಸದಸ್ಯರು ಭಾಗವಹಿಸುವರು ಎಂದು ಕಾರ್ಯದರ್ಶಿ ಸಂಜಯ ಮೋಕಾಶಿ ಮತ್ತು ಖಜಾಂಚಿ ಸಂಜಯ ಮಂದ್ರೋಳಿ ತಿಳಿಸಿದ್ದಾರೆ.