ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತರಾದ ಬಾಳಪ್ಪ ಬಸಪ್ಪ ಬೆಳಕೂಡ ಅವರು ಕಡಿಮೆ ಖರ್ಚಿನಲ್ಲಿ ಬೆಳೆದ 36 ಗಣಿಕೆಗಳು ಇರುವ ಕಬ್ಬನ್ನು ಮೂಡಲಗಿ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಎಂ.ಎಂ. ನದಾಫ್ ವೀಕ್ಷಿಸುತ್ತಿರುವುದು
ಕೃಷಿ ಅಧಿಕಾರಿ ಎಂ.ಎಂ. ನದಾಫ್ ಪ್ರಶಂಸೆ
ಕೃಷಿಯಲ್ಲಿ ಮಾದರಿಯಾಗಿರುವ ಕಲ್ಲೋಳಿಯ ಬಾಳಪ್ಪ ಬೆಳಕೂಡ
ಮೂಡಲಗಿ: ಕಲ್ಲೋಳಿಯ ಪ್ರಗತಿಪರ ರೈತರಾದ ಬಾಳಪ್ಪ ಬಿ. ಬೆಳಕೂಡ ಅವರು ಕಡಿಮೆ ಖರ್ಚಿನಲ್ಲಿ ಅಧಿಕ ಕಬ್ಬು, ಅರಿಸಿನ ಮತ್ತು ಸೋಯಾಬಿನ್ ಬೆಳೆದಿರುವುದು ಕೃಷಿಯಲ್ಲಿ ಮಾದರಿಯಾಗಿದ್ದಾರೆ’ ಎಂದು ಗೋಕಾಕ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಎಂ.ಎಂ. ನಧಾಪ್ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತರು ಹಾಗೂ ಕರ್ನಾಟಕ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಅವರ ತೋಟಕ್ಕೆ ಭೇಟ್ಟಿ ನೀಡಿ ಮಾತನಾಡಿದ ಅವರು ಬೆಳಕೂಡ ಅವರು ಸುಸ್ಥಿರ ಬೇಸಾಯದಲ್ಲಿ ಮಾದರಿ ಎನಿಸಿಕೊಂಡಿದ್ದಾರೆ ಎಂದರು.
ಬಾಳಪ್ಪ ಬೆಳಕೂಡ ಮಾತನಾಡಿ ಕಬ್ಬು, ಅರಿಸಿನ ಮತ್ತು ಸೋಯಾಬಿನ್‍ವನ್ನು ಕಡಿಮೆ ಬೀಜ, ನೀರು ಮತ್ತು ರಾಸಾಯನಿಕ ಗೊಬ್ಬರವನ್ನು ಬಳಸಿ ಅಧಿಕ ಇಳುವರಿಯನ್ನು ಪಡೆದುಕೊಂಡಿರುವ ತೃಪ್ತಿ ಇದೆ ಎಂದರು.
ಪ್ರತಿ ವರ್ಷ ಕಬ್ಬನ್ನು ಎಕರೆಗೆ 85ರಿಂದ 90 ಟನ್ ಮತ್ತು ಅರಿಸಿನವನ್ನು ಪ್ರತಿ ಎಕರೆಗೆ 40ರಿಂದ 45 ಕ್ವಿಂಟಲ್ ಮತ್ತು ಸೋಯಾಬಿನ್ 22 ಕ್ವಿಂಟಲ್ ಇಳುವರಿ ದೊರೆತಿದೆ ಎಂದರು.
ಭೂಮಿಯಲ್ಲಿ ಶ್ರದ್ಧೆ, ಆಸಕ್ತಿಯಿಂದ ದುಡಿದರೆ ಭೂಮಿತಾಯಿ ಎಂದಿಗೂ ಮೋಸಮಾಡುವದಿಲ್ಲ. ಸಂದರ್ಭಕ್ಕೆ ತಕ್ಕಂತೆ ಕೃಷಿಯಲ್ಲಿ ದುಡಿಯಬೇಕು. ಕೃಷಿಯೊಂದಿಗೆ ದನಕರುಗಳನ್ನು ಸಾಕುವುದರಿಂದ ಸಾವಯವ ಗೊಬ್ಬರ ಸಿದ್ದತೆಗೆ ಅನುಕೂಲವಾಗುವುದು. ನಿಸರ್ಗ ಒಮ್ಮೆಮ್ಮೆ ಕೈಕೊಡುತ್ತದೆ, ನಿಸರ್ಗದೊಂದಿಗೆ ಬೆರೆತು ಕೃಷಿ ಕಾಯಕ ಮಾಡಬೇಕು ಎಂದರು.
ಅರಭಾವಿಯ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಂಕರ ಹಳದಮನಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಗೋಕಾಕ ತಾಲ್ಲೂಕು ಅಧ್ಯಕ್ಷ ಅಶೋಕ ಗಡಾದ ಇದ್ದರು.
ಮುಗಿಯಿತು…………..