Breaking News
Home / Recent Posts / ಮಕ್ಕಳು ಮಾನವೀಯ ಮೌಲ್ಯಗಳನ್ನು ಕಲಿಯುದರಿಂದ ಸಮಾಜ ಭದ್ರವಾಗುತ್ತದೆ -ಸುರೇಶ ಕಬ್ಬೂರ

ಮಕ್ಕಳು ಮಾನವೀಯ ಮೌಲ್ಯಗಳನ್ನು ಕಲಿಯುದರಿಂದ ಸಮಾಜ ಭದ್ರವಾಗುತ್ತದೆ -ಸುರೇಶ ಕಬ್ಬೂರ

Spread the love

ಮೂಡಲಗಿ:ಕಲ್ಲೋಳಿ ಪಟ್ಟಣದ ಸಾಯಿ ಸೇವಾ ಸಮಿತಿಯ ವತಿಯಿಂದ ಪ್ರಶಾಂತಿ ಕುಟೀರ ಸಭಾ ಭವನದಲ್ಲಿ ಸತ್ಯಸಾಯಿ ಬಾಬಾರವರ 95 ನೇ ಹುಟ್ಟು ಹಬ್ಬವನ್ನು ಸೋಮವಾರ ನ-23 ರಂದು ಕೇಕ ಕತ್ತರಿಸುವ ಮೂಲಕ ಬಾಲವಿಕಾಸ ಮಕ್ಕಳು ಸಂಭ್ರಮದಿಂದ ಆಚರಿಸಿದರು.
ಕಲ್ಲೋಳಿ ಪಟ್ಟಣದ ಸಾಯಿ ಸೇವಾ ಸಮಿತಿಯ ಮುಖಂಡ,ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುರೇಶ ಕಬ್ಬೂರ ಉಪನ್ಯಾಸ ನೀಡಿ,ಬಾಬಾರವರು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 1926 ನ-23 ಈಶ್ವರಮ್ಮ,ಪೆದ್ದ ವೆಂಕಪ್ಪರಾಜು ದಂಪತಿಗಳ ಉದರದಲ್ಲಿ ಜನಿಸಿದ ಸತ್ಯಸಾಯಿ ಬಾಬಾ ಅವರು ಬಾಲ ವಿಕಾಸ ತರಗತಿಗಳು ದೇಶ ವಿದೇಶಗಳಲ್ಲಿ ಮಹತ್ವ ಪಡೆದುಕೊಂಡಿದೆ ಎಂದರು.ಸಣ್ಣ ಮಕ್ಕಳು ಮಾನವೀಯ ಮೌಲ್ಯಗಳನ್ನು ಕಲಿಯುದರಿಂದ ಸಮಾಜ ಭದ್ರವಾಗುತ್ತದೆ,ಮಕ್ಕಳು ದುಶ್ಚಟಕ್ಕೆ ಮಾರುಹೊಗದಂತೆ ಆಧ್ಯತ್ಮಿಕ ವಿಷಯದ ಕಡೆ ಗಮನಹರಿಸಲು ಸತ್ಯ,ಧರ್ಮ,ಶಾಂತಿ,ಪ್ರೇಮ ತುಂಬಬೇಕು.
ಮಕ್ಕಳು ಬಾಲವಿಕಾಸದಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹಿಸಬೇಕೆಂದರಲ್ಲದೇ,ಸಾಯಿ ಬಾಬಾರವರು ಶಿಕ್ಷಣ,ಆರೋಗ್ಯ,ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಠು ಸಾಧನೆ ಮಾಡಿದ್ದಾರೆಂದರು.ಕಲ್ಲೋಳಿ ಸಾಯಿ ಮಂದಿರ ಎಲೆ ಮರೆಯ ಕಾಯಿಯಂತೆ ಬಡ ಮಕ್ಕಳ ಶಿಕ್ಷಣಕ್ಕೆ ಶಾಲಾ ಫೀ ತುಂಬಿ,ಪುಸ್ತಕ,ನೋಟಬುಕ್ಕ ಕೊಟ್ಟು ಸಾಕಷ್ಟು ಸಹಾಯ ಅನುಕೂಲ ಕಲ್ಪಿಸಿದೆ ಎಂದರು.
ವೇಧ ಘೋಷ,ಮಹಿಳೆರಿಂದ ತೋಟ್ಟಿಲೊತ್ಸವ,ಭಜನೆ ನಡೆಯಿತು.ಇದೇ ಸಂದರ್ಭದಲ್ಲಿ ಸಾಯಿ ಬಾಬಾರವರ ಪರಮಭಕ್ತ ಕಿರಾಣಿ ವರ್ತಕ ಶ್ರೀಶೈಲ ತುಪ್ಪದ ಅವರ ಮೊಮ್ಮಗ ಪ್ರೇಮಸಾಯಿ ಅವರ ಹುಟ್ಟು ಹಬ್ಬ ಆಚರಿಸಿದರು.ಮಂದಿರ ಸಂಚಾಲಕ ಚನ್ನಪ್ಪ ಪಟ್ಟಣಶೆಟ್ಟಿ,ಬಸಪ್ಪ ಕಡಾಡಿ,ಹಣಮಂತ ಬಡಿಗೇರ,ದುಂಡಪ್ಪ ಖಾನಗೌಡ್ರ,ಗೊಪಾಲ ಕಂಬಾರ,ಮನೋಹರ ಕಲಾಲ ಸೇರಿದಂತೆ ಯುವಕರು,ಮಹಿಳೆಯರು,ಸಾಯಿ ಭಕ್ತರು,ಬಾಲವಿಕಾಸ ಮಕ್ಕಳು ಉಪಸ್ಥಿತರಿದ್ದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ