Breaking News
Home / Recent Posts / ಬಡ್ರ್ಸ ಕೃಷಿ ವಿಜ್ಞಾನಕೇಂದ್ರದಲ್ಲಿ ‘ಮತ್ಸ್ಯ ಕೃಷಿ ತರಬೇತಿ’ ಕಾರ್ಯಕ್ರಮದ ಸಮಾರೋಪ

ಬಡ್ರ್ಸ ಕೃಷಿ ವಿಜ್ಞಾನಕೇಂದ್ರದಲ್ಲಿ ‘ಮತ್ಸ್ಯ ಕೃಷಿ ತರಬೇತಿ’ ಕಾರ್ಯಕ್ರಮದ ಸಮಾರೋಪ

Spread the love

ಬಡ್ರ್ಸ ಕೃಷಿ ವಿಜ್ಞಾನಕೇಂದ್ರದಲ್ಲಿ  ‘ಮತ್ಸ್ಯ ಕೃಷಿ ತರಬೇತಿ’ ಕಾರ್ಯಕ್ರಮದ ಸಮಾರೋಪ

ಮೂಡಲಗಿ: ಸೀ ಬಾಸ್ ಮೀನಿನ ತಳಿಯು ಉತ್ತಮ ಮಾರುಕಟ್ಟೆಯನ್ನು ಹೊಂದಿರುವ ತಳಿ. ಮೂಲತಃ ಕರಾವಳಿ ತೀರದಲ್ಲಿಕಂಡುಬರುವ ಈ ಮೀನು, ಸಿಹಿ ನೀರಿನಲ್ಲಿಯೂ ಬೆಳಯಬಲ್ಲದು. ಸೂಕ್ಷ್ಮ ತಳಿಯಾದ ಇದು ಉತ್ತಮ ನೀರಿನ ಗುಣಮಟ್ಟ ಕಾಯ್ದುಕೊಂಡು ಗುಣಮಟ್ಟದ ಆಹಾರ ನೀಡಿದಲ್ಲಿ 12 ತಿಂಗಳಲ್ಲಿ 1 ಕಿಲೋ ಬೆಳೆಯಬಲ್ಲ ಸಾಮಥ್ರ್ಯ ಹೊಂದಿದೆ ಹಾಗೂ ಮಾರುಕಟ್ಟೆಯಲ್ಲಿ ಪ್ರತಿ ಕಿಲೋ ಮೀನಿಗೆ ರೂ.450ರಷ್ಟು ದರ ಸಿಗಲಿದೆ ಎಂದು ಮಂಗಳೂರ ಮರೈನಾ ಸಾಗರ ಉತ್ಪಪನ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಹ ನಿರ್ದೇಶಕ ಡಾ. ಗಣೇಶನ್ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ತುಕ್ಕಾನಟ್ಟಿ ಐಸಿಏಆರ್-ಬಡ್ರ್ಸ ಕೃಷಿ ವಿಜ್ಞಾನಕೇಂದ್ರದಲ್ಲಿ ಐದು ದಿನಗಳ ಕಾಲ ಬೆಳಗಾವಿ ಮೀನುಗಾರಿಕೆ ಇಲಾಖೆ ಮತ್ತು ಮತ್ತು ಮಂಗಳೂರ ಮರೈನಾ ಸಾಗರ ಉತ್ಪಪನ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಜರುಗಿದ ‘ಮತ್ಸ್ಯ ಕೃಷಿ ತರಬೇತಿ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಡ್ರ್ಸ ಸಂಸ್ಥೆಯ ಚೇರಮನ್ ಆರ್.ಎಂ.ಪಾಟೀಲರು ಮಾತನಾಡಿ, ಕೇವಲ ಮೀನು ಹಿಡುಯುವುದರಲ್ಲಿ ನಿರತರಾಗಿರುವ ಮೀನುಗಾರ ವರ್ಗದವರು ಮೀನು ಸಾಕಾಣಿಕೆಯನ್ನು ಕೈಗೊಳ್ಳಲು ಮನಸ್ಸು ಮಾಡಬೇಕು, ನದಿ ಹಾಗೂ ಹಳ್ಳಗಳ ಸಮೀಪ ಸೂಕ್ತವಾದ ಪ್ರದೇಶದಲ್ಲಿ ಮೀನು ಸಾಕಾಣಿಗೆ ವಿಫುಲವಾದ ಅವಕಾಶಗಳನ್ನು ಯೋಗ್ಯವಾಗಿ ಉಪಯೋಗಿಸಿಕೊಳ್ಳಬೇಕೆಂದರು.
ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಿ.ಸಿ.ಚೌಗಲಾ ಮಾತನಾಡಿ ಮೀನುಗಾರಿಕೆಯು ಹಲವಾರು ಉಪ ಕಸುಬುಗಳನ್ನು ಸೃಷ್ಟಿಸಬಲ್ಲ ಉದ್ಯಮ. ಬೆರಳುದ್ದ ಮೀನುಗಳ ಉತ್ಪಾದನೆಯು ಅತ್ಯಂತ ಲಾಭದಾಯಕವಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಇದನ್ನು ಕೈಗೊಳ್ಳಲು ಸೂಕ್ತ ಸಂಪನ್ಮೂಲಗಳಿವೆ. ಕೇವಲ ಕೆರೆಗಳು ಹಾಗೂ ನದಿಗಳಿಗೆ ಸೀಮಿತವಾಗದೆ, ಕೃಷಿ ಹೊಂಡಗಳಲ್ಲೂ ಮೀನಗಳನ್ನು ಹೆಚ್ಚಿನ ಸಾಂದ್ರತೆಯಲ್ಲಿ ಸಾಕ ಬಹುದಾಗಿದ್ದು ರೈತರು ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು, ಮೀನುಗಾರಿಕೆಯಲ್ಲಿ ಉದ್ಯಮಶೀಲತೆಯ ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ಮಂಗಳೂರ ಮರೈನಾ ಸಾಗರ ಉತ್ಪಪನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಒPಇಆಂ) ವು ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಟಾನಗೊಳಸಿಲು ಅವಕಾಶವಿದ್ದರೆ ಅದಕ್ಕೆ ಅಗತ್ಯವಿರುವ ಎಲ್ಲಾತಾಂತ್ರಿಕ ನೆರವಿನೊಂದಿಗೆ ಕೈಜೋಡಿಸಲು ನಮ್ಮ ಕೆವಿಕೆಯು ಸದಾಸಿದ್ಧ ಎಂದರು.
ಎಮ್‍ಪಿಇಡಿಎ ತಾಂತ್ರಿಕ ಅಧಿಕಾರಿ ಡಾ. ವಿಷ್ಣುದಾಸಗುಣಗರ ಮಾತನಾಡಿ, ಸೀ ಬಾಸ್ ಮೀನು ತಳಿಯ ಸಾಕಾಣಿಕೆಗೆ ಅಗತ್ಯವಿರುವ ಎಲ್ಲಾ ತಾಂತ್ರಿಕತೆಗಳನ್ನು ಮುಕ್ತವಾಗಿ ನೀಡಲಾಗುತ್ತದೆ ಮತ್ತು ಪ್ರಾತ್ಯಕ್ಷಿಗಳ ಮೂಲಕ ವೈಜ್ಞಾನಿಕ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.
ಈ ತರಬೇತಿಯಲ್ಲಿ ಪಂಜರ ಪದ್ಧತಿಯಲ್ಲಿ ‘ಸೀ ಬಾಸ್’ ಮೀನಿನ ತಳಿಯ ಪರಿಚಯ ಹಾಗೂ ಸಾಕಾಣಿಕೆಯ ವಿವರವನ್ನು ಪ್ರಸ್ತುತ ಪಡಿಸಲಾಯಿತು. ಜಿಲ್ಲೆಯ 15 ಜನ ಪರಿಶಿಷ್ಟ ಜಾತಿಯ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣಪತ್ರ ವಿತರಿಸಲ್ಲಾಯಿತು.
ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿ ಆದರ್ಶ.ಹೆಚ್.ಎಸ್ ಅವರು ತರಬೇತಿಯ ವರದಿಯನ್ನು ಮಂಡಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ, ಉಪನಿರ್ದೇಶಕ ಶ್ರೀಪಾದ ಕುಲಕರ್ಣಿ, ಸಹಾಯಕ ನಿರ್ದೇಶಕ ಸಂಜೀವ ಅರಕೇರಿ, ವಿಜ್ಞಾನಿಗಳಾದ ಎಮ್.ಎನ್.ಮಲಾವಾಡಿ, ಎನ್.ಆರ್. ಸಾಲಿಮಠ, ಡಾ.ಸೂರಜ ಕೌಜಲಗಿ, ಪರುಶುರಾಮ ಪಾಟೀಲ ಮತ್ತಿತರು ಇದ್ದರು.


Spread the love

About inmudalgi

Check Also

ಶಿಕ್ಷಕರು ಸೇವಾ ಅನುಭವವನ್ನು ಸಮಾಜಕ್ಕೆ ನೀಡಬೇಕು

Spread the love ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ನಿವೃತ್ತರಾದ ಶಿಕ್ಷಕರನ್ನು ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಸನ್ಮಾನಿಸಿ ಬೀಳ್ಕೊಟ್ಟರು   …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ